ಸರಕಾರಿ ಆಧಾರ್: ನಿಲೇಕಣಿ ವಿರುದ್ಧ ಬಿಜೆಪಿ ದೂರು

2:57 PM, Saturday, March 8th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Nandan-Nilekaniಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಘೋಷಿತ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ. ಸದ್ಯಕ್ಕೆ ‘ಆಧಾರ್’ ಯೋಜನೆಯ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಅವರು ತಮ್ಮ ಅಧಿಕಾರ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಕೇಂದ್ರದ ಆಧಾರ್ ಸರಕಾರಿ ಯೋಜನೆಯನ್ನು ತಮ್ಮ ಸ್ವಂತ ಕಾರ್ಯಕ್ರಮದಂತೆ ಕ್ಷೇತ್ರದಾದ್ಯಂತ ಬಿಂಬಿಸಿಕೊಳ್ಳುತ್ತಿದ್ದಾರೆ.

ಇದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ದೂರಿನಲ್ಲಿ ಬಿಜೆಪಿ ಗಮನ ಸೆಳೆದಿದೆ. ಸರಕಾರಿ ಆಧಾರ್: ನಿಲೇಕಣಿ ವಿರುದ್ಧ ಬಿಜೆಪಿ ದೂರು ಮಾರ್ಚ್ 5ರಿಂದ ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದಾಗ್ಯೂ ಕಳೆದ 20 ದಿನಗಳಿಂದ ನಾನಾ ಮಾಧ್ಯಮಗಳಲ್ಲಿ ಸರಕಾರದ ಆಧಾರ್ ಯೋಜನೆ ಕುರಿತಂತೆ ತಮ್ಮ ಫೋಟೋ ಸಹಿತ ಜಾಹೀರಾತು ನೀಡುತ್ತಿದ್ದಾರೆ. ಆಧಾರ್ ಗುರುತಿನ ಚೀಟಿ ಇರುವವರಿಗೆ ಜಾಹೀರಾತು ಪ್ರತಿಯನ್ನು ನೀಡುತ್ತಿದ್ದಾರೆ.

ಯೋಜನೆಯನ್ನು ತಮ್ಮ ಸ್ವಂತ ಯೋಜನೆಯೆಂಬಂತೆ ಪ್ರಚಾರ ಪಡೆಯುತ್ತಿದ್ದಾರೆ. ಸರಕಾರದ ಹಣದಿಂದ ಕಾರ್ಯಕಗತಗೊಂಡ ಯೋಜನೆಗೆ ನಿಲೇಕಣಿ ಪ್ರಚಾರ ಪಡೆಯುವುದು ಎಷ್ಟರಮಟ್ಟಿಗೆ ಸರಿ? ಸರಕಾರಿ ಯೋಜನೆ ಇವರಿಗೇಕೆ ಆಧಾರ ಆಗಬೇಕು!?: ಈ ಜಾಹೀರಾತು ವೆಚ್ಚದ ಮಾಹಿತಿಯನ್ನು ಆಯೋಗವು ಪಡೆದುಕೊಂಡು, ನಿಲೇಕಣಿ ಅವರ ಸ್ಪರ್ಧೆಯನ್ನು ಅಸಿಂಧುಗೊಳಿಸಬೇಕು ಎಂದು ಬಿಜೆಪಿ ಮುಖಂಡರು ಚುನಾವಣಾ ಆಯುಕ್ತ ಅನಿಲ್ ಕುಮಾರ್ ಝಾ ಅವರಿಗೆ ದೂರು ಸಲ್ಲಿಸಿದ್ದಾರೆ.

ಈ ಮಧ್ಯೆ, ನಂದನ್ ನಿಲೇಕಣಿ ಅವರು UIDAI ಅಧ್ಯಕ್ಷ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದು, ನಾಳೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ.

ಈ ಹಿಂದೆ, ನೇರವಾಗಿ ರಾಹುಲ್ ಗಾಂಧಿ ಅವರ ಕೃಪಾಕಟಾಕ್ಷಕ್ಕೆ ಪಾತ್ರವಾಗಿರುವುದರಿಂದ ನಿಲೇಕಣಿ ಅವರು ದಿಲ್ಲಿಯಲ್ಲಿ ಹೈಕಮಾಂಡ್ ಸಮ್ಮುಖದಲ್ಲಿ ಪಕ್ಷ ಸೇರುವ ಕಾರ್ಯಕ್ರಮವಿತ್ತು. ಐದು ಬಾರಿ ಕ್ಷೇತ್ರದಿಂದ ಚುನಾವಣೆ ಗೆದ್ದಿರುವ ಬಿಜೆಪಿಯ ಅನಂತ ಕುಮಾರ್ ವಿರುದ್ಧ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ಕಣಕ್ಕಿಳಿಯಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English