ಮಂಗಳೂರು ಮತ್ತೆ ಗುಂಡಿನ ದಾಳಿ

2:59 PM, Monday, March 10th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Fire-Againಮಂಗಳೂರು: ಇಲ್ಲಿನ ಬಿಜೈ ನ್ಯೂ ರೋಡ್‌ನ‌ಲ್ಲಿರುವ ಭಾರತಿ ಡೆವಲಪರ್ಸ್ ಕಚೇರಿ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿರುವ ಘಟನೆ ಸೋಮವಾರ ವರದಿಯಾಗಿದೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ಕಚೇರಿಯೊಳಗೆ ನುಗ್ಗಿ ನೆಲದ ಮೇಲೆ ಗುಂಡಿ ಹಾರಿಸಿ ಪರಾರಿಯಾಗಿದ್ದಾರೆ ಎಂದು ಸಂಸ್ಥೆಯ ‌ಮಾಲಕ ಲೊಕನಾಥ ಶೆಟ್ಟಿ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದಾಳಿಯ ವೇಳೆ ಮಾಲಕರು ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಈ ಸಂಬಂಧ ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್‌ ಆಯುಕ್ತ ಹಿತೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಸಜೀವ ಗುಂಡುಗಳು ಪತ್ತೆಯಾಗಿವೆ. ಆದರೆ ದಾಳಿಯ ಬಗ್ಗೆ ಯಾವುದೇ ಕುರುವುಹುಗಳು ಪತ್ತೆಯಾಗಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English