ವೀರಪ್ಪ ಮೊೈಲಿಗೆ ಟಿಕೆಟ್ ನೀಡದಂತೆ ಸೋನಿಯಾಗೆ ಮನಮೋಹನ್ ಸಿಂಗ್ ಪತ್ರ

3:18 PM, Tuesday, March 11th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Manmohan-Singhಬೆಂಗಳೂರು: ಎತ್ತಿನಹೊಳೆ ಯೋಜನೆಯನ್ನು ಸವಾಲಾಗಿ ಪರಿಗಣಿಸಿ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಎಂ. ವೀರಪ್ಪ ಮೊೈಲಿ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಅನುಮಾನವಾಗಿದ್ದು, ಖುದ್ದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಟಿಕೆಟ್ ನೀಡದಂತೆ ಸೋನಿಯಾಗಾಂಧಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ರಿಯಲಾನ್ಸ್ ಹಗರಣದಲ್ಲಿ ವೀರಪ್ಪ ಮೊೈಲಿ ವಿರುದ್ಧ ದೆಹಲಿ ಸರ್ಕಾರ ಎಫ್‍ಐಆರ್ ದಾಖಲಿಸಿರು ವುದು ಒಂದು ಕಾರಣವಾದರೆ. ಗುಪ್ತದಳದ ಪ್ರಕಾರ ಮೊೈಲಿ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ವರದಿ ಸಲ್ಲಿಕೆಯಾಗಿರುವುದು ಮತ್ತೊಂದು ಕಾರಣ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ವೀರಪ್ಪ ಮೊೈಲಿ ಹೆಸರು ಕೈಬಿಡಲಾಗಿತ್ತು. ಎರಡನೇ ಪಟ್ಟಿಯಲ್ಲೂ ಅವರ ಹೆಸರು ಸೇರ್ಪಡೆಯಾಗುವುದು ಅನುಮಾನ. ಆ ಕ್ಷೇತ್ರಕ್ಕೆ ಮಾಜಿ ಸಚಿವ ವಿ.ಮುನಿಯಪ್ಪ ಹೆಸರು ಪರಿಗಣಿಸುವ ಸಾಧ್ಯತೆ ಇದೆ.
ಕಳೆದ ಶನಿವಾರ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ನಡೆದ ಚುನಾವಣೆ ಸಮಿತಿ ಸಭೆಯಲ್ಲಿ ಮೊೈಲಿ ಅವರ ಟಿಕೆಟ್ ನೀಡುವ ಪ್ರಸ್ತಾಪವಾದ ಸಂದರ್ಭದಲ್ಲಿ ನಂತರ ನೋಡೋಣ ಎಂದು ಅಧ್ಯಕ್ಷರು ಹೇಳಿದರು ಎಂದು ತಿಳಿದು ಬಂದಿದೆ. ಸಭೆಯ ನಂತರ ಪಕ್ಷದ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊೈಲಿ ಕ್ಷೇತ್ರಕ್ಕೆ ಪರ್ಯಾಯ ಹೆಸರು ಸಿದ್ಧಪಡಿಸಿ ಎಂದು ಸೂಚನೆ ನೀಡಿದ್ದಾರೆ. ಸೋನಿಯಾ ಅವರ ಸಲಹೆ ಮೇರೆಗೆ ಮುಖ್ಯಮಂತ್ರಿಯª Àರು ನಿನ್ನೆ ಅವಿಭಾಜ್ಯ ಕೋಲಾರ ಕ್ಷೇತ್ರ ಪ್ರತಿನಿದಿ üಸುವ ಕೇಂದ್ರ ಪ್ರತಿನಿಧಿಸುವ ಕೆ.ಎಚ್. ಮುನಿಯಪ್ಪ ಅವರನ್ನು ಕರೆಸಿಕೊಂಡು ಸುದೀರ್ಘ ಚರ್ಚೆ ಮಾ ದ್ದಾರೆ. ಮುನಿಯಪ್ಪ ಅವರ ಸಲಹೆ ಮೇರೆಗೆ ಮಾಜಿ ಸಚಿವ ವಿ. ಮುನಿಯಪ್ಪ ಅವರನ್ನು ಕರೆಸಿ ಕ್ಷೇತ್ರದ ಬಗ್ಗೆ ಹಾಗೂ ಅಭ್ಯರ್ಥಿಯಾಗಲು ನೀವು ಸಿದ್ಧನಾ ಎಂದು ಕೇಳಿದ್ದಾರೆ. ಯಾಕೆಂದರೆ ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ತೀವ್ರ ಕುತೂಹಲಕ್ಕೆ ಕಾರಣವಾ ಗಿರುವ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್‍ಷರೀಫ್ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದ್ದು ಹರ್ಷದ್ ರಿಜ್ವಾನ್ ಅವರ ಪರ ವರಿಷ್ಟರು ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English