ವೀರಪ್ಪ ಮೊೈಲಿಗೆ ಟಿಕೆಟ್ ನೀಡದಂತೆ ಸೋನಿಯಾಗೆ ಮನಮೋಹನ್ ಸಿಂಗ್ ಪತ್ರ

Tuesday, March 11th, 2014
Manmohan-Singh

ಬೆಂಗಳೂರು: ಎತ್ತಿನಹೊಳೆ ಯೋಜನೆಯನ್ನು ಸವಾಲಾಗಿ ಪರಿಗಣಿಸಿ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಎಂ. ವೀರಪ್ಪ ಮೊೈಲಿ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಅನುಮಾನವಾಗಿದ್ದು, ಖುದ್ದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಟಿಕೆಟ್ ನೀಡದಂತೆ ಸೋನಿಯಾಗಾಂಧಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ರಿಯಲಾನ್ಸ್ ಹಗರಣದಲ್ಲಿ ವೀರಪ್ಪ ಮೊೈಲಿ ವಿರುದ್ಧ ದೆಹಲಿ ಸರ್ಕಾರ ಎಫ್‍ಐಆರ್ ದಾಖಲಿಸಿರು ವುದು ಒಂದು ಕಾರಣವಾದರೆ. ಗುಪ್ತದಳದ ಪ್ರಕಾರ ಮೊೈಲಿ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ವರದಿ ಸಲ್ಲಿಕೆಯಾಗಿರುವುದು ಮತ್ತೊಂದು ಕಾರಣ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ […]

ಪದೇ ಪದೆ ಕಲಾಪ ಮುಂದೂಡಿಕೆ; ಪ್ರತಿಭಟನೆ ಮಧ್ಯೆ ತೆಲಂಗಾಣ ಬಿಲ್ ಪಾಸ್; 29ನೇ ರಾಜ್ಯ ಉದಯ

Friday, February 21st, 2014
ಪದೇ ಪದೆ ಕಲಾಪ ಮುಂದೂಡಿಕೆ; ಪ್ರತಿಭಟನೆ ಮಧ್ಯೆ ತೆಲಂಗಾಣ ಬಿಲ್ ಪಾಸ್; 29ನೇ ರಾಜ್ಯ ಉದಯ

ನವದೆಹಲಿ: ದೇಶಕ್ಕೆ ಇನ್ನೊಂದು ರಾಜ್ಯದ ಸಂತಸ. 29ನೇ ರಾಜ್ಯವಾಗಿ ತೆಲಂಗಾಣ ಉದಯಕ್ಕೆ ಗುರುವಾರ ರಾಜ್ಯಸಭೆ ಸಾಕ್ಷಿಯಾಯಿತು. ಮಂಗಳವಾರವಷ್ಟೇ ಲೋಕಸಭೆಯಲ್ಲಿ ತೆಲಂಗಾಣ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಎರಡು ದಿನಗಳ ಹಗ್ಗಜಗ್ಗಾಟದ ನಡುವೆ ಗುರುವಾರ ರಾತ್ರಿ 08.07 ಗಂಟೆಗೆ ಹೊಸ ರಾಜ್ಯದ ಉದಯವಾಯಿತು. ಆದರೆ ಈ ಮಸೂದೆಗೆ ರಾಷ್ಟ್ರಪತಿ ಅಂಕಿತ ಬೇಕು. ಆಗಷ್ಟೇ ಈ ರಾಜ್ಯ ಉದಯವಾಗಿದೆ ಎಂಬುದು ಅಧಿಕೃತವಾಗುತ್ತದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಸಮರ ನಡೆದರೂ ಕೂಡ, ಮಸೂದೆಗೆ ಬೆಂಬಲ ನೀಡುತ್ತೇವೆ ಎಂಬ […]

‘ರಾಜೀವ್’ ಹಂತಕರ ಬಿಡುಗಡೆಗೆ ಪ್ರಧಾನಿ ಆಕ್ಷೇಪ

Thursday, February 20th, 2014
Manmohan-Singh

ನವದೆಹಲಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡಲು ಮುಂದಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿರ್ಧಾರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡದಂತೆ ತಮಿಳುನಾಡು ಸಿಎಂಗೆ ಒತ್ತಾಯಿಸಿದ್ದಾರೆ. ಅಲ್ಲದೆ ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಹಿಂಪಡೆಯುವಂತೆ ಜಯಲಲಿತಾಗೆ ಪ್ರಧಾನಿ ಆಗ್ರಹಿಸಿದ್ದಾರೆ. ಮಾಜಿ ಪ್ರಧಾನಿ ಅವರನ್ನು ಹತ್ಯೆ ಮಾಡಿರುವುದು ಸಣ್ಣ ವಿಷಯವಲ್ಲ. […]