ಮಂಗಳೂರುಃ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ಕೊಡಿಯಾಲದಲ್ಲಿ ವಾಸವಾಗಿರುವ ಪುರುಷೋತ್ತಮ ಹಾಗೂ ಭವ್ಯಶ್ರೀ ದಂಪತಿಯ ಮಗನಾದ 8 ವರುಷ ಪ್ರಾಯದ ರೋಶನ್ ಎರಡೂ ಕಿಡ್ನಿಗಳು ವಿಫಲವಾಗಿದೆ. ಊರಿನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿ ಆಗಲಿಲ್ಲ. ಇದೀಗ ಫಾದರ್ಮುಲ್ಲಾರ್ ಆಸ್ಪತ್ರೆ ಕಂಕನಾಡಿ- ಮಂಗಳೂರು ಇಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎರಡೂ ಕಿಡ್ನಿಗಳ ಕಸಿಗಾಗಿ ಸುಮಾರು 6 ಲಕ್ಷ ರೂ. ವೆಚ್ಚವಾಗಲಿದೆ.
ಇದಲ್ಲದೇ ಡಯಾಲಿಸಿಸ್ಗಾಗಿ ಮಾಸಿಕ 25 ಸಾವಿರ ರೂ. ವೆಚ್ಚವಾಗಲಿದೆ ಮತ್ತು ವಾರಕ್ಕೆ ಮೂರು ಬಾರಿ ಡಯಾಲಿಸ್ ಮಾಡಬೇಕಾಗುತ್ತದೆ ಎಂದು ವೈದ್ಯಾದಿಕಾರಿಯವರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ರೋಶನ್ನಿಗೆ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆ ಬಳಿಕವೂ ಮಗನ ಆರೋಗ್ಯದಲ್ಲಿನ ವ್ಯತ್ಯಾಸವನ್ನು ಗಮನಿಸಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಗನಿಗೆ ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಅಂಗ ವೈಕಲ್ಯದಿಂದ ಬಳಲುತ್ತಿರುವ ನಾನು ಹಾಗೂ ಇದೀಗ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ನಾವು ಈಗಾಗಲೇ ಹಲವು ಕಡೆ ಸಾಲ ಮಾಡಿ ಮಗುವನ್ನು ಅಸ್ಪತ್ರೆಗೆ ಸೇರಿಸಿದ್ದೇನೆ. ನನ್ನ ಮಗುವಿನ ಕಿಡ್ನಿಗಳ ಕಸಿ ಮತ್ತು ಚಿಕಿತ್ಸೆಯ ವೆಚ್ಚವನ್ನು ಭರಿಸುವ ಶಕ್ತಿಯಿಲ್ಲ. ಈಗಾಗಲೇ ಸುಮಾರು ಒಂದು ತಿಂಗಳ ಚಿಕಿತ್ಸೆಗಾಗಿ ಒಂದು ಲಕ್ಷಕ್ಕಿಂತಲೂ ಅಧಿಕ ವೆಚ್ಚವಾಗಿದ್ದು, ಸಾಲ ಮಾಡಿ ಭರಿಸಲಾಗಿದೆ ತುಂಬಾ ಕಷ್ಟದಲ್ಲಿದ್ದು, ಆರ್ಥಿಕ ಹೊಡೆತದಿಂದ ನರಳುತ್ತಿದ್ದೇನೆ.
ಆದುದರಿಂದ ನನ್ನ ಮಗುವಿಗೆ ಕಿಡ್ನಿಗಳ ಕಸಿ ಮತ್ತು ಚಿಕಿತ್ಸೆಗಾಗಿ ಸಹಾಯ ಮಾಡಿ ಎಂದು ಮಗುವಿನ ತಂದೆ ಪುರುಷೋತ್ತಮ ಅವರು ಸಹಾಯ ಹಸ್ತಕ್ಕಾಗಿ ಸಹೃದಯಿ ದಾನಿಗಳಲ್ಲಿ ವಿನಂತಿಸಿದ್ದಾರೆ.
ಮಗುವಿನ ತಾಯಿಯ ಬ್ಯಾಂಕ್ ವಿಳಾಸ ಇಂತಿದೆ.
Name: Bhavyashree P.M., Account Number:02542210006113,IFSC Code: SYNB0000254, Bank Name (Branch Name): Syndicate Bank Bellare, Sullia Taluk, D.K., Phone: 8105702933
Click this button or press Ctrl+G to toggle between Kannada and English