ಬಂಟ್ವಾಳ: ಎಸ್.ಕೆ.ಎಸ್.ಎಸ್.ಎಫ್ ಪೆರ್ನೆ ಶಾಖಾ ವತಿಯಿಂದ ಯೆನಪೋಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ದಂತ ವೈದ್ಯಕೀಯ ಶಿಬಿರವು ಇತ್ತೀಚೆಗೆ ಪೆರ್ನೆ ಶಾಲೆಯಲ್ಲಿ ಹಾಜಿ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನೆಡೆಯಿತು. ಸಭೆಯನ್ನು ಝಕರಿಯಾ ದಾರಿಮಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಡಾ| ರಾಜಗೋಪಾ ಶರ್ಮ ಮಾತನಾಡಿ ದೇಶವನ್ನು ಸೈನಿಕರು ಹೇಗೆ ರಕ್ಷಿಸುತ್ತಾರೆ ಅದೇ ರೀತಿ ದೇಹವನ್ನು ದಂತಗಳು ರಕ್ಷಿಸುತ್ತದೆ. ಇಂತಹ ಕಾರ್ಯಕ್ರಮವನ್ನು ಕೈಗೊಂಡ ಎಸ್ ಕೆ ಎಸ್ ಎಸ್ ಎಫ್ ನ ಕಾರ್ಯಕ್ರಮವನ್ನು ಶ್ಲಾಘನೀಯ ಎಂದು ನುಡಿದರು. ಕೃಷ್ಣ ನಾಯ್ಕ ಮತ್ತು ಇಸ್ಮಾಯಿಲ್ ಶಾಫಿ ಮಾತನಾಡಿ ಈ ಸಂಘಟನೆಯು ಇನ್ನು ಮುಂದೆಯೂ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.
ಸ್ಥಳೀಯ ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಪೆರ್ನೆ ಉಪಸ್ಥಿಯರಿದ್ದರು. ಸುಮಾರು 200 ರಷ್ಟು ಜನರು ಇದರ ಸದುಪಯೋಗವನ್ನು ಪಡೆದರು. ಅಬ್ಬುಲ್ಲ ಕಡಂಬು ಸ್ವಾಗತಿಸಿ ಸಮಿವುಲ್ಲ ವಂದಿಸಿದರು.
Click this button or press Ctrl+G to toggle between Kannada and English