ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ದ.ಕ. ಜಿಲ್ಲಾ ದೃಶ್ಯ ಮಾಧ್ಯಮ ಪತ್ರಕರ್ತರ ಸಂಘದಿಂದ ಫ್ರತಿಭಟನೆ

6:10 PM, Wednesday, March 12th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

DK-Shivakumarಮಂಗಳೂರು: ದೃಶ್ಯ ಮಾಧ್ಯಮ ಪತ್ರಕರ್ತರ ಸಂಘ ಮಂಗಳೂರು ಇವರ ವತಿಯಿಂದ ಕರ್ತವ್ಯ ನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಸುಳ್ಳು ಕೇಸು ದಾಖಲಿಸಿ ಅಮಾನವೀಯವಾಗಿ ವರ್ತಿಸಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡು ಸಂಪುಟದಿಂದ ವಜಾಗೊಳಿಸಲು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿ ಬುಧವಾರ ಪ್ರತಿಭಟನೆ ನಡೆಯಿತು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ದೇಶದ್ಯಾಂತ ರಹಸ್ಯ ಕಾಯರ್ಾಚರಣೆಯ ಮೂಲಕ ಸಾಕಷ್ಟು ಭ್ರಷ್ಟಾಚಾರ ಮತ್ತು ದೇಶದಲ್ಲಿ ನಡೆಯುವ ಇತರೆ ಹಗರಣವನ್ನು ಬಯಲಿಗೆಳೆದಿರುವ ಸಾಕಷ್ಟು ನಿದರ್ಶನಗಳಿವೆ.  ಈ ವಿಚಾರವನ್ನು ನ್ಯಾಯಲಯವೂ ಒಪ್ಪಿಕೊಂಡಿದೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ಜವಾಬ್ದಾರಿಯುತ ಮಾಧ್ಯಮದ ಕರ್ತವ್ಯವೂ ಹೌದು. ಮಾಚರ್್ 10, 2014 ರಂದು ಟಿವಿ9 ದೃಶ್ಯ ಮಾಧ್ಯಮದ ಇಬ್ಬರು ಪತ್ರಕರ್ತರಾದ ಶ್ರೇಯಸ್ ಮತ್ತು ಶ್ವೇತಾ ಪ್ರಭು ಎಂಬವರು ಇಂಧನ ಸಚಿವರ ವಿರುದ್ಧ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯ ನಿದರ್ೇಶನದಂತೆ ಅವರ ಮನೆಗೆ ರಹಸ್ಯ ಕಾಯರ್ಾಚರಣೆ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಸಚಿವ ಡಿಕೆಶಿ ಹಾಗೂ ಅವರ ಬೆಂಬಲಿಗರು ಪತ್ರಕರ್ತರಾದ ಶ್ರೇಯಸ್ ಹಾಗೂ ಶ್ವೇತಾ ಪ್ರಭುರವರ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನು ನಡೆಸಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಜೈಲಿಗಟ್ಟಿರುವುದು ಖಂಡನೀಯ. ಜವಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಈ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗದ ಅಭಿವ್ಯಕ್ತಿ ಸ್ವಾತ್ರಂತ್ಯದ ಮೇಲೆ ನಡೆಸಿದ ಹಲ್ಲೆಯಾಗಿದೆ. ಈ ಹಿನ್ನಲೆಯಲ್ಲಿ ಪತ್ರಕರ್ತರಿಬ್ಬರ ಮೇಲೆ ಹಲ್ಲೆ ನಡೆಸಿದ ಮತ್ತು ಮಹಿಳಾ ಪತ್ರಕತರ್ೆಯ ಮೇಲೆ ಅನುಚಿತ ವತರ್ಿಸಿದ ಗೂಂಡಾ ಪ್ರವೃತ್ತಿಯ ಡಿಕೆಶಿ ಬೆಂಬಲಿಗರು ಮತ್ತು ಸಚಿವ ಡಿಕೆ ಶಿವಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾರನಾಥ ಕಾಫಿಕಾಡ್,  ಶ್ರೀನಿವಾಸ ಇಂದಜೆ,  ಅನಿಲ್  ಕುಮಾರ್ ಮೊದಲಾದವರು ಭಾಗವಹಿಸಿದ್ದರು.

DK-Shivakumar

DK-Shivakumar

D.K.-Shivakumar

D.K.-Shivakumar

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English