ಹೊಸದಿಲ್ಲಿ : ಬಾಬರಿ ಮಸೀದಿ ಧ್ವಂಸವು ಪೂರ್ವನಿಯೋಜಿತ ಎಂದು ಕೋಬ್ರಾಪೋಸ್ಟ್ ಬಿಡುಗಡೆ ಮಾಡಿರುವ ಸ್ಟಿಂಗ್ ನ ಸಿ.ಡಿ.ಯಿಂದ ಬಹಿರಂಗವಾಗಿದೆ. ಆದರೆ ಲೋಕಸಭಾ ಚುನಾವಣೆಗೆ ಮೊದಲು ಈ ಸಿ.ಡಿ. ಬಿಡುಗಡೆ ಬಗ್ಗೆ ಹಲವಾರು ಸಂಶಯ ಹುಟ್ಟುಹಾಕಿದೆ.
ಬಾಬರಿ ಮಸೀದಿ ಧ್ವಂಸದ ಬಗ್ಗೆ ಕೋಬ್ರಾ ಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಇದು ಪೂರ್ವನಿಯೋಜಿತವಾಗಿ ನಡೆಸಿರುವ ಕೃತ್ಯ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಆಗಿನ ಪ್ರಧಾನಿ ನರಸಿಂಹ ರಾವ್, ಎಲ್. ಕೆ. ಅಡ್ವಾಣಿ ಮೊದಲಾದವರಿಗೆ ಇದರ ಬಗ್ಗೆ ಮಾಹಿತಿ ಇತ್ತು ಎಂದು ಹೇಳಿದೆ.
ಬಾಬರಿ ಮಸೀದಿ ಧ್ವಂಸಕ್ಕಾಗಿ ಎರಡು ತಿಂಗಳ ಅವಧಿಗೆ ಆರ್ ಎಸ್ಎಸ್ ನಾಯಕರಿಂದ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿತ್ತು ಎನ್ನುವುದು ಕಾರ್ಯಾಚರಣೆಯಿಂದ ತಿಳಿದುಬಂದಿದೆ.
ಈ ಸ್ಟಿಂಗ್ ಆಪರೇಷನ್ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನಿಡಿದ್ದು, ಚುನಾವಣಾ ಸಮಯದಲ್ಲಿ ಇಂತಹ ಸಿ.ಡಿ. ಬಿಡುಗಡೆ ಮಾಡಿರುವುದು ಪ್ರಾಯೋಜಿತ ಸ್ಟಿಂಗ್ ಆಪರೇಶನ್ ಆಗಿದೆ. ಇದರ ಪ್ರಸಾರವನ್ನು ತಡೆಹಿಡಿಯಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕಾಂಗ್ರೆಸ್ ಪ್ರಾಯೋಜಿತ ಸ್ಟಿಂಗ್ ಇದಾಗಿದ್ದು, ಚುನಾವಣೆಗೆ ಕೆಲವು ದಿನಗಳು ಇರುವಾಗ ಇಂತಹ ಸಿ.ಡಿ. ಬಿಡುಗಡೆಯಿಂದ ಶಾಂತಿಯುತವಾಗಿ ನಡೆಯುವ ಚುನಾವಣೆಯನ್ನು ತಡೆಯುವ ಯತ್ನವಾಗಿದೆ ಎಂದು ಬಿಜೆಪಿಯ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದರು.
Click this button or press Ctrl+G to toggle between Kannada and English