ನೆಲಸಮ ಮಾಡಿದ ದೇವಸ್ಥಾನಗಳನ್ನು ಪುನರ್‌ಸ್ಥಾಪಿಸಬೇಕು ! :ರಮೇಶ ಶಿಂದೆ

Wednesday, September 30th, 2020
bangla-temple

ಮಂಗಳೂರು  : ಕೇಂದ್ರೀಯ ಅಪರಾಧ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸದ ಖಟ್ಲೆಯ ಎಲ್ಲ ಆರೋಪಿಗಳು ನಿರ್ದೋಷಿಯೆಂದು ತೀರ್ಪು ನೀಡಿತು. ಇದನ್ನು ನಾವು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ತೀರ್ಪಿನಿಂದಾಗಿ ‘ಸತ್ಯಮೇವ ಜಯತೆ’ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಇದೆ ಎಂದು ತೀರ್ಪನ್ನು ನೀಡಿ ಶ್ರೀರಾಮ ಮಂದಿರವನ್ನು ಕಟ್ಟಲು ಆದೇಶ ನೀಡಿತ್ತು. ಅದೇ ಸಮಯದಲ್ಲಿ ಬಾಬರಿ ಮಸೀದಿಯು ಒಂದು ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ಎಂದು ಸಾಬೀತಾಗಿತ್ತು, ಎಂದು […]

ಡಿ.6ರಂದು ನಿರ್ಬಂಧಕಾಜ್ಞೆ ಜಾರಿ : ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶ

Thursday, December 5th, 2019
Harsha

ಮಂಗಳೂರು : ಮಂಗಳೂರು ಕಮಿಶನರೇಟ್ ವ್ಯಾಪ್ತಿಯಲ್ಲಿ ಡಿಸೆಂಬರ್ 6ರಂದು ನಿರ್ಬಂಧಕಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶ ಹೊರಡಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ದಿನವಾದ ಡಿ.6ರಂದು ಯಾವುದೇ ಅಹಿತಕರ ಘಟನೆ ನಡೆಯುದಂತೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಅಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರ್ಬಂಧಕಾಜ್ಞೆ ಜಾರಿಯಲ್ಲಿರುತ್ತದೆ ಎಂದು ಡಾ.ಹರ್ಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.    

2.77 ಎಕರೆ ಮಂದಿರ ನಿರ್ಮಾಣವಾಗಲಿ, ಮಸೀದಿಗೆ 5 ಎಕರೆ ಪರ್ಯಾಯ ನಿವೇಶನ : ಸುಪ್ರೀಂ ಕೋರ್ಟ್

Saturday, November 9th, 2019
supreem-court

ನವದೆಹಲಿ : ಸುಪ್ರೀಂ ಕೋರ್ಟ್ನ ಪಂಚ ಸದಸ್ಯ ಸಾಂವಿಧಾನಿಕ ಪೀಠ ದಶಕಗಳಿಂದ ಬಾಕಿ ಇದ್ದ ರಾಮ ಜನ್ಮಭೂಮಿ, ಬಾಬರಿ ಮಸೀದಿ ಭೂವಿವಾದವನ್ನು ಶುಕ್ರವಾರ ಇತ್ಯರ್ಥಗೊಳಿಸಿದೆ. ಇದರಂತೆ, ವಿವಾದಕ್ಕೀಡಾಗಿದ್ದ 2.77 ಎಕರೆ ಪ್ರದೇಶ ಕಂದಾಯ ದಾಖಲೆಗಳ ಪ್ರಕಾರ ಸರ್ಕಾರಕ್ಕೆ ಸೇರಿದೆ. ಅಲ್ಲಿ ರಾಮಮಂದಿರ ನಿರ್ಮಿಸಬಹುದು. ಆದರೆ, ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ನಿವೇಶನವನ್ನು ಸರ್ಕಾರ ಒದಗಿಸಬೇಕು ಎಂದು ಕೋರ್ಟ್ ನಿರ್ದೆಶಿಸಿದೆ. ಭಾರತ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಧಿಕ ಸಂಚಲನ ಸೃಷ್ಟಿಸಿದ್ದ ಪ್ರಕರಣದ ಐತಿಹಾಸಿಕ ತೀರ್ಪು ನೀಡಿದ […]

ಅಯೋಧ್ಯೆ ತೀರ್ಪು : ಮಂಗಳೂರಿನಲ್ಲಿ ಸಾವಿರ ಪೊಲೀಸರ ನಿಯೋಜನೆ; ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

Saturday, November 9th, 2019
Harsha

ಮಂಗಳೂರು : ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ನ.09ರಂದು ಪ್ರಕಟಿಸಲಿದ್ದು, ಮಂಗಳೂರಿನಲ್ಲಿ ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ. ನಗರದಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಂತರ್ ರಾಜ್ಯ ಗಡಿಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ ಎಂದರು. ಬಂದೋಬಸ್ತ್‌ನಲ್ಲಿ ಇಬ್ಬರು ಡಿಸಿಪಿಗಳು, 15 ಇನ್‌ಸ್ಪೆಕ್ಟರ್‌ಗಳು, 40 ಪಿಎಸ್‌ಐಗಳು, 100 ಎಎಸ್‌ಐ, 5 ಕೆಎಸ್‌ಆರ್‌ಪಿ ತುಕಡಿ, ಒಂದು ಕೇಂದ್ರೀಯ ಅರೆಸೇನಾ ಪಡೆ, ಒಂದು […]

ಡಿಸೆಂಬರ್ 6 ರಂದು ಬಸ್ಸಿಗೆ ಕಲ್ಲೆಸೆಯುವ ಮೂಲಕ ಕಪ್ಪು ದಿನ ಆಚರಿಸುವ ಕಿಡಿಗೇಡಿಗಳು

Wednesday, December 6th, 2017
bus stoned

ಕಾಸರಗೋಡು : ಅಯೋದ್ಯೆಯಲ್ಲಿ  ವಿವಾದಾತ್ಮಕ  ಬಾಬರಿ ಮಸೀದಿ ಕೆಡವಿದ ದಿನವಾದ ಡಿಸೆಂಬರ್ 6 ರಂದು ಕೆಲ ಕಿಡಿಗೇಡಿಗಳು  ಕಲ್ಲೆಸೆಯುವ  ಮೂಲಕ ಕಪ್ಪು ದಿನ ಎಂದು ಆಚರಿಸಿದ್ದಾರೆ. ಉಪ್ಪಳ ಮತ್ತು ಕುಂಬಳೆಯಲ್ಲಿ ಬಸ್ಸು ಮತ್ತು ವಾಹನಗಳ ಮೇಲೆ ಈ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಶೋಧ ನಡೆದಿದೆ . ತಲಪಾಡಿಯಿಂದ ಹೊಸಂಗಡಿ ಮೂಲಕ ಆನೆಕಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಕಡಂಬಾರ್ ಕಿಲೇರಿ ಎಂಬಲ್ಲಿ ಕಲ್ಲೆಸೆದ ಘಟನೆ ನಡೆದಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಳ ಹಿದಾಯತ್ ನಗರದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮೇಲೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ಬೆಳಗ್ಗೆ ನಡೆದಿದೆ. […]

ಬಾಬರಿ ಮಸೀದಿ ಧ್ವಂಸ ಪೂರ್ವನಿಯೋಜಿತ: ಕೋಬ್ರಾ ಪೋಸ್ಟ್ ಸ್ಟಿಂಗ್

Friday, April 4th, 2014
ಬಾಬರಿ ಮಸೀದಿ ಧ್ವಂಸ ಪೂರ್ವನಿಯೋಜಿತ: ಕೋಬ್ರಾ ಪೋಸ್ಟ್ ಸ್ಟಿಂಗ್

ಹೊಸದಿಲ್ಲಿ : ಬಾಬರಿ ಮಸೀದಿ ಧ್ವಂಸವು ಪೂರ್ವನಿಯೋಜಿತ ಎಂದು ಕೋಬ್ರಾಪೋಸ್ಟ್ ಬಿಡುಗಡೆ ಮಾಡಿರುವ ಸ್ಟಿಂಗ್ ನ ಸಿ.ಡಿ.ಯಿಂದ ಬಹಿರಂಗವಾಗಿದೆ. ಆದರೆ ಲೋಕಸಭಾ ಚುನಾವಣೆಗೆ ಮೊದಲು ಈ ಸಿ.ಡಿ. ಬಿಡುಗಡೆ ಬಗ್ಗೆ ಹಲವಾರು ಸಂಶಯ ಹುಟ್ಟುಹಾಕಿದೆ. ಬಾಬರಿ ಮಸೀದಿ ಧ್ವಂಸದ ಬಗ್ಗೆ ಕೋಬ್ರಾ ಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಇದು ಪೂರ್ವನಿಯೋಜಿತವಾಗಿ ನಡೆಸಿರುವ ಕೃತ್ಯ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಆಗಿನ ಪ್ರಧಾನಿ ನರಸಿಂಹ ರಾವ್, ಎಲ್. ಕೆ. ಅಡ್ವಾಣಿ ಮೊದಲಾದವರಿಗೆ ಇದರ ಬಗ್ಗೆ ಮಾಹಿತಿ […]

ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ’

Wednesday, September 22nd, 2010
ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ'

ಮಂಗಳೂರು: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ತೀರ್ಪನ್ನು ಅಲಹಾಬಾದ್ ಕೋರ್ಟ್ ಸೆಪ್ಟೆಂಬರ್ 24 ರಂದು ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಕೋಮಿನವರು ಶಾಂತಿ ಕಾಪಾಡಬೇಕೆಂದು ಸಿಪಿಐಯಂ ನ ಕಾರ್ಯಕರ್ತರು ಗಾಂಧಿ ಪ್ರತಿಮೆಯ ಮುಂಭಾಗದಿಂದ ಡಿಸಿ ಕಛೇರಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಕಾಲ್ನಡಿಗೆಯಲ್ಲಿ `ಶಾಂತಿಗಾಗಿ ಸೌಹಾರ್ದ ನಡಿಗೆ’ಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಯಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ್ ಅವರು ನ್ಯಾಯಾಲಯ ನೀಡುವ ತೀರ್ಪನ್ನು ಹಿಂದೂಗಳು ಮತ್ತು ಮುಸ್ಲೀಮರು ಸೌಹಾರ್ದಯುತವಾಗಿ ಸ್ವೀಕರಿಸಬೇಕು. ಕಾನೂನು ಮತ್ತು […]