ಮಂಗಳೂರು : ಕೇಂದ್ರೀಯ ಅಪರಾಧ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸದ ಖಟ್ಲೆಯ ಎಲ್ಲ ಆರೋಪಿಗಳು ನಿರ್ದೋಷಿಯೆಂದು ತೀರ್ಪು ನೀಡಿತು. ಇದನ್ನು ನಾವು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ತೀರ್ಪಿನಿಂದಾಗಿ ‘ಸತ್ಯಮೇವ ಜಯತೆ’ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಇದೆ ಎಂದು ತೀರ್ಪನ್ನು ನೀಡಿ ಶ್ರೀರಾಮ ಮಂದಿರವನ್ನು ಕಟ್ಟಲು ಆದೇಶ ನೀಡಿತ್ತು. ಅದೇ ಸಮಯದಲ್ಲಿ ಬಾಬರಿ ಮಸೀದಿಯು ಒಂದು ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ಎಂದು ಸಾಬೀತಾಗಿತ್ತು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆಯವರು ಹೇಳಿದ್ದಾರೆ.
ಶಿಂದೆಯವರು ತಮ್ಮ ಮಾತನ್ನು ಮುಂದುವರಿಸುತ್ತಾ, ಶ್ರೀ ರಾಮಜನ್ಮಭೂಮಿಯ ಬಗ್ಗೆ ಅಂದಿನ ಸರಕಾರದಿಂದ ಆಗುತ್ತಿದ್ದ ವಿಳಂಬದಿಂದಾಗಿ ಜನರ ಮನಸ್ಸಿನಲ್ಲಿ ಆಕ್ರೋಶ ಸ್ಫೋಟಗೊಂಡಿತ್ತು. ಅದಕ್ಕೂ ಮುಂದೆ ಹೋಗಿ ಈ ಬಾಬರಿ ಧ್ವಂಸದ ನಂತರ ದೇಶದಾದ್ಯಂತ ಗಲಭೆಗಳು ಭುಗಿಲೆದ್ದು ಹಿಂದೂ ಸಮಾಜ ಹಾಗೂ ದೇವಸ್ಥಾನಗಳನ್ನು ಗುರಿಯಾಗಿಸಿತು. ಅದರಲ್ಲಿಯ ಓರ್ವ ಮುಖ್ಯ ಆರೋಪಿ ದಾವುದ್ ಇಬ್ರಾಹಿಮ್ ಇತನನ್ನು ಇಲ್ಲಿಯವರೆಗೆ ಬಂಧಿಸಲಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ನೂರಾರು ದೇವಸ್ಥಾನಗಳನ್ನು ಧ್ವಂಸ ಮಾಡಲಾಯಿತು. 1990 ರಲ್ಲಿ ಕಾಶ್ಮೀರದಿಂದ ಲಕ್ಷಗಟ್ಟಲೆ ಹಿಂದೂಗಳಿಗೆ ನಿರಾಶ್ರಿತರನ್ನಾಗಿ ಮಾಡಿ ಅಲ್ಲಿಯ ಅನೇಕ ದೇವಸ್ಥಾನಗಳನ್ನು ಧ್ವಂಸ ಮಾಡಲಾಯಿತು. ಇವರಿಗೆ ನ್ಯಾಯ ಸಿಕ್ಕಿದೆಯೇ ? ಆಂಧ್ರಪ್ರದೇಶದಲ್ಲಿಯೂ ಸದ್ಯ ಅನೇಕ ಹಿಂದೂ ದೇವಸ್ಥಾನಗಳ ಮೂರ್ತಿಗಳನ್ನು ಧ್ವಂಸ ಮಾಡುವುದು ಮುಂದುವರಿದಿದೆ. ಈ ಬಗ್ಗೆ ಯಾರೂ ಏಕೆ ಮಾತನಾಡುತ್ತಿಲ್ಲ ? ಈ ತೀರ್ಪಿನ ಜೊತೆಗೆ ನಮಗೆ, ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು. ಧ್ವಂಸ ಮಾಡಲಾಗಿದ್ದ ಹಿಂದೂಗಳ ದೇವಸ್ಥಾನಗಳನ್ನು ಪುನರ್‌ನಿರ್ಮಾಣ ಮಾಡಬೇಕು ಎಂದು ನಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English