ಮಂಗಳೂರು: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ತೀರ್ಪನ್ನು ಅಲಹಾಬಾದ್ ಕೋರ್ಟ್ ಸೆಪ್ಟೆಂಬರ್ 24 ರಂದು ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಕೋಮಿನವರು ಶಾಂತಿ ಕಾಪಾಡಬೇಕೆಂದು ಸಿಪಿಐಯಂ ನ ಕಾರ್ಯಕರ್ತರು ಗಾಂಧಿ ಪ್ರತಿಮೆಯ ಮುಂಭಾಗದಿಂದ ಡಿಸಿ ಕಛೇರಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಕಾಲ್ನಡಿಗೆಯಲ್ಲಿ `ಶಾಂತಿಗಾಗಿ ಸೌಹಾರ್ದ ನಡಿಗೆ’ಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಯಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ್ ಅವರು ನ್ಯಾಯಾಲಯ ನೀಡುವ ತೀರ್ಪನ್ನು ಹಿಂದೂಗಳು ಮತ್ತು ಮುಸ್ಲೀಮರು ಸೌಹಾರ್ದಯುತವಾಗಿ ಸ್ವೀಕರಿಸಬೇಕು. ಕಾನೂನು ಮತ್ತು ಶಾಂತಿಗೆ ಮಹತ್ವ ನೀಡಬೇಕು ಎಂದು ಹೇಳಿದರು.
ಯಾವುದೇ ಸಮುದಾಯಕ್ಕೆ ಪರ ಹಾಗೂ ವಿರುದ್ದವಾಗಿ ತೀರ್ಪು ಬಂದಾಗ ಶಾಂತಿಯನ್ನು ಕದಡದೆ ರಾಜಕೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸೌಹಾರ್ದ ನಡಿಗೆಯಲ್ಲಿ ವಸಂತ ಆಚಾರಿ, ಶ್ರೀಯಾನ್, ಜೆ ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ವಾಸುದೇವ ಉಚ್ಚಿಲ್, ಯಶವಂತ್ ಮರೋಳಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English
December 15th, 2011 at 08:15:13
Rd5IHx iuncaopeyomv, [url=http://btnrtvwjixou.com/]btnrtvwjixou[/url], [link=http://zvujwionwauo.com/]zvujwionwauo[/link], http://qplmdtfyirwk.com/