ಆಗಸ್ಟ್ 5ರಂದು ಬೆಳಗ್ಗೆ11:30ರಿಂದ 12:30ರವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ

Saturday, August 1st, 2020
sudarshan

ಮಂಗಳೂರು : ಆಗಸ್ಟ್  5ರಂದು ನಡೆಯಲಿರುವ  ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರದ ಭೂಮಿಪೂಜೆಯ ಪ್ರಯುಕ್ತ ದ.ಕ. ಜಿಲ್ಲೆಯಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರಂತೆ, ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ದೀಪ ಹಚ್ಚುವುದು, ರಾಮನಾಮ ಪಠಣ ಜತೆಗೆ ಮಠಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲು ವಿನಂತಿಸಲಾಗುವುದು ಎಂದರು. […]

ಅಯೋಧ್ಯೆ ತೀರ್ಪು : ಮಂಗಳೂರಿನಲ್ಲಿ ಸಾವಿರ ಪೊಲೀಸರ ನಿಯೋಜನೆ; ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

Saturday, November 9th, 2019
Harsha

ಮಂಗಳೂರು : ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ನ.09ರಂದು ಪ್ರಕಟಿಸಲಿದ್ದು, ಮಂಗಳೂರಿನಲ್ಲಿ ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ. ನಗರದಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಂತರ್ ರಾಜ್ಯ ಗಡಿಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ ಎಂದರು. ಬಂದೋಬಸ್ತ್‌ನಲ್ಲಿ ಇಬ್ಬರು ಡಿಸಿಪಿಗಳು, 15 ಇನ್‌ಸ್ಪೆಕ್ಟರ್‌ಗಳು, 40 ಪಿಎಸ್‌ಐಗಳು, 100 ಎಎಸ್‌ಐ, 5 ಕೆಎಸ್‌ಆರ್‌ಪಿ ತುಕಡಿ, ಒಂದು ಕೇಂದ್ರೀಯ ಅರೆಸೇನಾ ಪಡೆ, ಒಂದು […]

ಅಯೋದ್ಯೆಯ ವಿವಾದಿತ ಸ್ಥಳದ ತೀರ್ಪು ಅಲಹಾಬಾದ್ ಹೈಕೋರ್ಟಿನಿಂದ ಪ್ರಕಟ

Thursday, September 30th, 2010
ಅಲಹಾಬಾದ್ ಹೈಕೋರ್ಟ್

ಲಖನೌ  : ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪು ಹೊರಬಿದ್ದಿದೆ. 60 ವರ್ಷಗಳ ವಿವಾದಿತ 2.7 ಎಕರೆ ಭೂಮಿಯನ್ನು  ಮೂರು ವಿಭಾಗಗಳನ್ನಾಗಿ ಮಾಡಿ ಮೂರು ಅರ್ಜಿದಾರರಿಗೆ ಹಂಚಲು  ಅಲಹಾಬಾದ್ ಹೈಕೋರ್ಟಿನ ಮೂರು ನ್ಯಾಯ ಮೂರ್ತಿಗಳ ಪೀಠ ಸೂಚಿಸಿದೆ. ರಾಮಲಲ್ಲಾನ ವಿಗ್ರಹ ಇರುವ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಇನ್ನುಳಿದ ಒಂದು ಭಾಗವನ್ನು ಸುನ್ನಿ ವಕ್ಫ್ ಮಂಡಳಿ ಮತ್ತು  ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, […]

ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ’

Wednesday, September 22nd, 2010
ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ'

ಮಂಗಳೂರು: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ತೀರ್ಪನ್ನು ಅಲಹಾಬಾದ್ ಕೋರ್ಟ್ ಸೆಪ್ಟೆಂಬರ್ 24 ರಂದು ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಕೋಮಿನವರು ಶಾಂತಿ ಕಾಪಾಡಬೇಕೆಂದು ಸಿಪಿಐಯಂ ನ ಕಾರ್ಯಕರ್ತರು ಗಾಂಧಿ ಪ್ರತಿಮೆಯ ಮುಂಭಾಗದಿಂದ ಡಿಸಿ ಕಛೇರಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಕಾಲ್ನಡಿಗೆಯಲ್ಲಿ `ಶಾಂತಿಗಾಗಿ ಸೌಹಾರ್ದ ನಡಿಗೆ’ಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಯಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ್ ಅವರು ನ್ಯಾಯಾಲಯ ನೀಡುವ ತೀರ್ಪನ್ನು ಹಿಂದೂಗಳು ಮತ್ತು ಮುಸ್ಲೀಮರು ಸೌಹಾರ್ದಯುತವಾಗಿ ಸ್ವೀಕರಿಸಬೇಕು. ಕಾನೂನು ಮತ್ತು […]