ಕಾಸರಗೋಡು : ಅಯೋದ್ಯೆಯಲ್ಲಿ ವಿವಾದಾತ್ಮಕ ಬಾಬರಿ ಮಸೀದಿ ಕೆಡವಿದ ದಿನವಾದ ಡಿಸೆಂಬರ್ 6 ರಂದು ಕೆಲ ಕಿಡಿಗೇಡಿಗಳು ಕಲ್ಲೆಸೆಯುವ ಮೂಲಕ ಕಪ್ಪು ದಿನ ಎಂದು ಆಚರಿಸಿದ್ದಾರೆ.
ಉಪ್ಪಳ ಮತ್ತು ಕುಂಬಳೆಯಲ್ಲಿ ಬಸ್ಸು ಮತ್ತು ವಾಹನಗಳ ಮೇಲೆ ಈ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಶೋಧ ನಡೆದಿದೆ .
ತಲಪಾಡಿಯಿಂದ ಹೊಸಂಗಡಿ ಮೂಲಕ ಆನೆಕಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಕಡಂಬಾರ್ ಕಿಲೇರಿ ಎಂಬಲ್ಲಿ ಕಲ್ಲೆಸೆದ ಘಟನೆ ನಡೆದಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಉಪ್ಪಳ ಹಿದಾಯತ್ ನಗರದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮೇಲೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ಬೆಳಗ್ಗೆ ನಡೆದಿದೆ. ಉಪ್ಪಳ ಕೈಕಂಬದಲ್ಲಿ ಬೈಕಿನಲ್ಲಿ ಬಂದ ತಂಡವು ಕರ್ನಾಟಕ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಕಲ್ಲೆಸೆದು ಪರಾರಿಯಾಗಿದೆ. ಬಸ್ಸಿನ ಗಾಜು ಹುಡಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಂಬಳೆ ಆರಿಕ್ಕಾಡಿಯಲ್ಲಿ ಬೈಕ್ ನಲ್ಲಿ ಬಂದ ತಂಡ ಮಿನಿ ಬಸ್ಸಿಗೆ ಕಲ್ಲೆಸೆದ ಘಟನೆ ನಡೆದಿದೆ .
ಈ ನಡುವೆ ಉಪ್ಪಳ – ಬಾಯಾರು ರೂಟಿನಲ್ಲಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಉಳಿದ ರೂಟ್ ಗಳಲ್ಲಿ ಬಸ್ಸು ಸಂಚಾರ ವಿರಳವಾಗಿದೆ.
ಅಹಿತಕರ ಘಟನೆ ಮರುಕಳಿಸದಂತೆ ಉಪ್ಪಳ , ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ
Click this button or press Ctrl+G to toggle between Kannada and English