ದೆಹಲಿಯಲ್ಲಿ ಬಿಸು ಪರ್ಬ, ತುಳುವಿಗೆ ಸಂವಿಧಾನದ ಮಾನ್ಯತೆಗಾಗಿ ಹೋರಾಟ

4:45 PM, Thursday, May 1st, 2014
Share
1 Star2 Stars3 Stars4 Stars5 Stars
(6 rating, 5 votes)
Loading...
Delhi Tulu Siri

ನವದೆಹಲಿ: ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ಭಾನುವಾರ ದೆಹಲಿಯ ನೆಹರು ಪಾಕರ್್ನಲ್ಲಿ ಸೇರಿ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಚೇದಕ್ಕೆ ಸೇರಿಸುವ ತಮ್ಮ ಹೋರಾಟಕ್ಕೆ ಮರುಜೀವ ನೀಡುವ ಬಗ್ಗೆತೀರ್ಮಾನಿಸಿದ್ದಾರೆ.

ದೆಹಲಿ ತುಳು ಸಿರಿ ಆಯೋಜಿಸಿದ್ದ ‘ಬಿಸು ಪರ್ಬ’ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಮಿಕ್ಕ ತುಳುವರು ಭಾಗವಹಿಸಿದ್ದರು. ದೆಹಲಿಯಲ್ಲಿ ವಿವಿಧ ವೃತ್ತಿಯಲ್ಲಿರುವ ರಾಜ್ಯದ ಕರಾವಳಿ ಭಾಗಕ್ಕೆ ಸೇರಿದ ಉತ್ಸಾಹಿಗಳು ದೆಹಲಿಯ ಬಿಸಿಲ ಧಗೆಗೆ ಸಡ್ಡು ಹೊಡೆದು `ಪರ್ಬ’ದ ಸಡಗರವನ್ನು ಅನುಭವಿಸಿದರು.

ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು ಮತ್ತು ಹಿರಿಯರಿಗೆ ವಿವಿಧ ಮನರಂಜನಾ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು ಜರುಗಿದವು. ಮಂಗಳೂರು ಶೈಲಿಯ ಊಟ ವಿಶೇಷ ಆಕರ್ಷಣೆಯಾಗಿತ್ತು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ, ತುಳು ಅಕಾಡೆಮಿ ಸದಸ್ಯ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, “ಕರ್ನಾಟಕ ಮತ್ತು ದೇಶದಲ್ಲಿ ತುಳು ಭಾಷೆಗೆ ಮಾನ್ಯತೆ ನೀಡಬೇಕಿದೆ, ಇದಕ್ಕಾಗಿ ಬೆಂಗಳೂರಿನಲ್ಲಿ ಒಂದು ತುಳು ಸಮ್ಮೇಳನ ನಡೆಸುವ ಚಿಂತನೆ ಇದೆ, ಇದಕ್ಕಾಗಿ ಎಲ್ಲ ತುಳು ಸಂಘಟನೆಗಳು ಒಂದಾಗಿ ಹೋರಾಟ ನಡೆಸಬೇಕಿದೆ ಎಂದರು.’

“ಕೇಂದ್ರದಲ್ಲಿ ಹೊಸ ಸರ್ಕಾರ ಶೀಘ್ರ ರಚನೆಯಾಗಲಿದ್ದು, ಈ ಸಂದರ್ಭದಲ್ಲಿ ನೂತನ ಸರ್ಕಾರದ ಮೇಲೆ ತುಳುವನ್ನು ಸಂವಿಧಾನದ ಎಂಟನೆ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಒತ್ತಡ ಸೃಷ್ಟಿಸಬೇಕು” ಎಂದು ಜನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟರು.

ತುಳುವಿಗೆ ಸಂವಿಧಾನದ ಮಾನ್ಯತೆ ದಕ್ಕಿಸುವ ನಿಟ್ಟಿನಲ್ಲಿ ನಡೆಸುವ ಹೋರಾಟಗಳಿಗೆ ಮುಂದಾಳತ್ವ ವಹಿಸಲು ‘ದೆಹಲಿ ತುಳು ಸಿರಿ’ ಬದ್ಧವಾಗಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಲೋಕ್ ರೈ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English