ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ‘ಗ್ಯಾಂಗ್‌’ ರಚನೆ

4:57 PM, Wednesday, May 7th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Mahabala Marla

ಮಂಗಳೂರು : ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಒಂದೊಂದು ‘ಗ್ಯಾಂಗ್‌’ ರಚನೆ ಮಾಡಬೇಕು ಎಂದು ಮೇಯರ್‌ ಮಹಾಬಲ ಮಾರ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಸೋಮವಾರದಿಂದ ಗ್ಯಾಂಗ್‌’ ರಚನೆ ನಡೆಯಲಿದೆ. ಮಳೆಗಾಲ ಹತ್ತಿರವಾದ್ದರಿಂದ ತುರ್ತಾಗಿ ತೋಡು, ಚರಂಡಿಗಳ ಕೆಲಸ ಮಾಡಬೇಕು. ಪ್ರತೀ ಪಾಲಿಕೆ ಸದಸ್ಯರು ಆಯಾಯ ವಾರ್ಡ್‌ಗಳಲ್ಲಿ ಮಳೆಗಾಲ ಎದುರಿಸಲು ಸಿದ್ಧತೆ ಮಾಡಬೇಕು ಎಂದು ಅವರು ಹೇಳಿದರು.

ತಾಂತ್ರಿಕ ಕಾರಣಗಳನ್ನು ನೀಡಿ ಪಾಲಿಕೆ ಅಧಿಕಾರಿಗಳು ಕೆಲಸ ನಿರ್ವಹಿಸದೇ ಇರಬಾರದು. ಮಳೆಗಾಲದಲ್ಲಿ ತುರ್ತು ಕಾರ್ಯಗಳನ್ನು ಮಾಡಲು ಸದಾ ಸಿದ್ದರಿರುವಂತೆ ಅವರು ಸೂಚನೆ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English