ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಶ್ರೀ ಹರೀಶ್ ಆಚಾರ್ ಆಯ್ಕೆ

8:29 PM, Tuesday, June 3rd, 2014
Share
1 Star2 Stars3 Stars4 Stars5 Stars
(5 rating, 5 votes)
Loading...

KMF

ಮಂಗಳೂರು : ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ, ಮಂಗಳೂರು ಇದರ 2014-15 ರಿಂದ ಮುಂದಿನ 5 ಸಹಕಾರಿ ವರ್ಷಗಳಿಗೆ ಅಧ್ಯಕ್ಷರಾಗಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಸುಂದರ ಗೌಡ ಇಚ್ಚಿಲ (ಉಜಿರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರು) ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಹೊನ್ನಯ್ಯ ಇವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

ನೂತನ ಆಡಳಿತ ಮಂಡಳಿಯ ಅಭಿನಂದನಾ ಸಮಾರಂಭವು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ! ಎಂ. ಎನ್. ರಾಜೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಛೇರಿಯಲ್ಲಿ ನಡೆಯಿತು. ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಮಹಾಮಂಡಳದ ನಿರ್ದೇಶಕರಾದ ಶ್ರೀ ಎಸ್. ಆರ್. ಸತೀಶ್ಚಂದ್ರ, ದ. ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಗ್ಡೆ, ಸಹಕಾರ ಸಂಘಗಳ ಉಪನಿಬಂಧಕರದ ಶ್ರೀ ಜಿ. ಆರ್. ವಿಜಯಕುಮಾರ್, ನಬಾರ್ಡ್ ಅಧಿಕಾರಿ ಶ್ರೀ ಪ್ರಸಾದ್ ರಾವ್, ಸ್ಕ್ಯಾಡ್ಸ್ ಅಧ್ಯಕ್ಷರಾದ ಶ್ರೀ ರವೀಂದ್ರ ಕಂಬಳಿ, ದ. ಕ. ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷರಾದ ಶ್ರೀ ಲಕ್ಷ್ಮೀ ನಾರಾಯಣ ಉಡುಪ, ದ. ಕ. ಜಿಲ್ಲಾ ಕೋಳಿ ಸಾಕಣಿಕೆದಾರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಅಡ್ಯಾರ್, ಮಂಗಳೂರು ಎ. ಪಿ. ಎಂ. ಸಿ. ಅಧ್ಯಕ್ಷರಾದ ಪ್ರಶಾಂತ್ ಗಟ್ಟಿ, ಜನತಾ ಬಜಾರ್ ಅಧ್ಯಕ್ಷರಾದ ಶ್ರೀ ಪ್ರಸನ್ನ, ಗೋಕರ್ಣನಾಥ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ, ಕ್ಯಾಂಪ್ಕೋ ನಿರ್ದೇಶಕ ಶ್ರೀ ರಾಧಾಕೃಷ್ಣ ಕೋಟೆ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕರಾದ ಶ್ರೀ ಟಿ. ರಾಜಾರಾಮ ಭಟ್ ಮತ್ತು ಜಿಲ್ಲೆಯ ಇತರ ಸಹಕಾರಿ ನಾಚಿiಕರು ಉಪಸ್ಥಿತರಿದ್ದು, ನೂತನ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಲಾಯಿತು.

ದಿನಾಂಕ 26.05.14 ರಂದು ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಮತ್ತು ಉಪಾಧ್ಯಕ್ಷರಾದ ಶ್ರೀ ಸುಂದರ ಗೌಡ ಇಚ್ಚಿಲ ಸೇರಿದಂತೆ ಶ್ರೀ ದಿವಾಕರ ರೈ ಪಿ. ಬಿ., ಶ್ರೀ ನೀಲಯ ಯಂ. ಅಗರಿ, ಶ್ರೀ ಶ್ಯಾಮ್‌ಪ್ರಸಾದ್ ಪೂಂಜ, ಶ್ರೀ ಪ್ರಸಾದ್ ಕೌಶಲ್ ಶೆಟ್ಟಿ, ಶ್ರೀಮತಿ ಪ್ರಫುಲ್ಲ, ಶ್ರೀ ಬಾಹುಬಲಿ ಪ್ರಸಾದ್ ಎಂ., ಶ್ರೀ ಯಶೋದರ ಕೆ. ಬಂಗೇರ, ಶ್ರೀ ಶಿವರಾಮ ರೈ ಬಿ., ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಶ್ರೀ ವೆಂಕಪ್ಪ ನಾಯ್ಕ ಎ., ಶ್ರೀ ದೇವದಾಸ ಅಡಪ ಡಿ. ಇವರುಗಳು ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ.

 ಹರೀಶ್ ಆಚಾರ್

ಹರೀಶ್ ಆಚಾರ್

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English