ಗ್ರಾಮಸ್ಥರ ಮನೆ ಬಾಗಿಲಿಗೆ ಕಂದಾಯ ಇಲಾಖೆ-ರಮಾನಾಥ.ರೈ

9:00 PM, Tuesday, June 17th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Ramanatha Rai

ಮಂಗಳೂರು : ಗ್ರಾಮೀಣ ಪ್ರದೇಶಗಳ ಜನರು ಕಂದಾಯ ಇಲಾಖೆಗೆ ಸಂಬಂದಿಸಿದ ಕೆಲಸಕಾರ್ಯಗಳಿಗೆ ಸದಾ ಪಟ್ಟಣ ಪ್ರದೇಶದ ತಹಶೀಲ್ದಾರರ ಕಚೇರಿಗೆ ಕಂದಾಯ ನಿರೀಕ್ಷಕರ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಗೆ ಆಗಿಂದಾಗ್ಗೆ ಅಲೆಯುವುದನ್ನು ತಪ್ಪಿಸಲು ದ.ಕ.ಜಿಲ್ಲೆಯಲ್ಲಿ ಜಿಲ್ಲಾಡಳಿತ ವಿನೂತನ ಕಾರ್ಯ ಕೈಗೊಂಡಿದ್ದು ಪ್ರತಿದಿನ ಒಂದೊಂದು ಗ್ರಾಮಪಂಚಾಯತ್ ನಲ್ಲಿ ಕಂದಾಯ ಅದಾಲತ್ ಗಳನ್ನು ಹಮ್ಮಿಕೊಳ್ಳುವ ಮೂಲಕ ಕಂದಾಯ ಇಲಾಖೆಯನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ತಂದಿದೆ ಎಂದು ಅರಣ್ಯ, ಪರಿಸರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.

ಅವರು ಇಂದು ಬಂಟ್ವಾಳ ತಾಲ್ಲೂಕಿನ ವಾಮದಪದವು ಗ್ರಾಮ ಪಂಚಾಯತ್ ಚೆನ್ನೈತೋಡಿ ಗ್ರಾಮದ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಬಂಟ್ವಾಳ ತಾಲ್ಲೂಕು ಕಛೇರಿ ವತಿಯಿಂದ ಹಮ್ಮಿಕೊಂಡಿದ್ದ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಜ್ಜಿಬಟ್ಟು, ಚೆನ್ನೈತೋಟಿ, ಪಿಲಿಮೊಗರು ಹಾಗೂ ಕುಡಂಬೆಟ್ಟು ಗ್ರಾಮಗಳ ಆಕಾರ್ಬಂದ್ ಮತ್ತು ಪಹಣಿ ಕಲಂ 3 ವಿಸ್ತೀರ್ಣ ಸರಿಪಡಿಸುವುದು, ಪಹಣಿ ಕಲಂ 3 ಹಾಗೂ 9ರ ವಿಸ್ತೀರ್ಣ ಸರಿಪಡಿಸುವುದು, ಪಹಣಿ ಕಲಂ 9ರಲ್ಲಿ ಕಬ್ಬೆದಾರರ ಹೆಸರು ತಪ್ಪಾಗಿದ್ದರೆ ಸರಿಪಡಿಸುವುದು, ಖಾತಾ ನಂಬ್ರ ಮತ್ತು ಮುಟೇಷನ್ ನಂಬ್ರಗಳು ತಪ್ಪಾಗಿದ್ದರೆ ಸರಿಪಡಿಸುವುದು ಪಹಣಿ ಕಲಂ 12(2) ಹೆಸರು ತಿದ್ದುಪಡಿ ಮತ್ತು ಬೆಳೆ ವಿಒವರ ತಿದ್ದುಪಡಿ, ವಾರೀಸು ಹಕ್ಕು(ಪೌತಿ) ಪ್ರಕರಣಗಳ ವಿಲೇವಾರಿ, ಪೈಕಿ ಪಹಣಿಗಳ ಕಾಲೋಚಿತಗೊಳಿಸಲು ಕ್ರಮ ಸೇರಿದಂತೆ ಎಲ್ಲಾ ವಿಷಯಗಳಿಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವು ಎಂದು ಸಚಿವರು ತಿಳಿಸಿ ಇಂತಹ ಅದಾಲತ್ಗಳು ರೈತರು ಹಾಗೂ ಗ್ರಾಮೀಣರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮಾತನಾಡಿ ಇಂದಿನ ಅದಾಲತ್ ನಲ್ಲಿ ಒಟ್ಟು 168 ವಿವಿದ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುತ್ತಿದ್ದು, ಇದರಲ್ಲಿ ಪಹಣಿಗಳನ್ನು ಕಾರ್ಯೋಚಿತಗೊಳಿಸುವುದು. 13 ಅರ್ಜಿಗಳು ಪಹಣಿ ಕಾಲಂ 3 ಹಾಗೂ 9ರ ವಿಸ್ತೀರ್ಣ ವ್ಯತ್ಯಾಸ ಸರಿಪಡಿಸುವಿಕೆಗಾಗಿ 2 ಅರ್ಜಿಗಳು, ದ್ವಿಪ್ರತಿ ಆರ್.ಟಿ.ಸಿ ರದ್ದುಪಡಿಸುವ ಸಲುವಾಗಿ 10 ಅರ್ಜಿಗಳು, ವಾರೀಸುಹಕ್ಕು(ಪೌತಿ) ಪ್ರಕರಣಗಳ ವಿಲೇವಾರಿಗಾಗಿ 4 ಅರ್ಜಿಗಳು ಸೇರಿವೆ ಎಂದು ತಿಳಿಸಿದರು. ಪ್ರತಿ ಒಂದು ತಾಲ್ಲೂಕಿನಲ್ಲಿ ಪ್ರತಿದಿನ ಒಂದೊಂದು ಕಂದಾಯ ಅದಾಲತ್ ನ್ನು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ಸಹಾಯಕ ಆಯುಕ್ತ ಡಾ ಆರ್,ಪ್ರಶಾಂತ್, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಯಶವಂತ್, ತಹಶಿಲ್ದಾರ್ ಮಲ್ಲೆಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English