ರಸ್ತೆ ಅಭಿವೃದ್ಧಿಯ ಕೆಲಸದ ಹೆಸರಿನಲ್ಲಿ ನೆಲಕ್ಕುರುಳಿದ ಸಾರ್ವಜನಿಕ ರಂಗಮಂದಿರ

Friday, May 7th, 2021
Rangamandhira

ಬಂಟ್ವಾಳ: ಸುಮಾರು 38 ವರ್ಷಗಳ ಕಾಲ ಬಿ.ಸಿ.ರೋಡಿನ ಸಾಂಸ್ಕೃತಿಕ ಚಟುವಟಿಕೆಯಷ್ಟೇ ಅಲ್ಲ, ರಾಜಕೀಯ, ವೈಚಾರಿಕ, ರಂಗಭೂಮಿ ಚಟುವಟಿಕೆಗಳಿಗೆ ಇದ್ದ ಏಕೈಕ ವೇದಿಕೆ ಸಾರ್ವಜನಿಕ ರಂಗಮಂದಿರ ನೆಲಕ್ಕುರುಳಿದೆ. 2017ರಲ್ಲಿ ನಿರ್ಮಾಣಗೊಂಡ ಬಿ.ಸಿ. ರೋಡಿನ ಮಿನಿ ವಿಧಾನಸೌಧದ ಎದುರು ಇರುವ ಈ ಕಟ್ಟಡದಲ್ಲಿ ಅಂದಿನಿಂದ ಚಟುವಟಿಕೆಗಳು ನಿಂತಿದ್ದವು. ಅದನ್ನು ತೆರವುಗೊಳಿಸುವ ಕುರಿತು ಆಗಾಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಶಿಥಿಲವಾಗಿರುವ ಈ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಗುರುವಾರ ಆರಂಭಗೊಂಡಿದೆ. ‘ […]

‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸಲು ಆಗ್ರಹ

Saturday, December 26th, 2020
HJJ

ಮಂಗಳೂರು  : ಪ್ರೇಮದ ಹೆಸರಿನಲ್ಲಿ ಮುಸ್ಲಿಂಮೇತರ ಮಹಿಳೆಯರನ್ನು ಮತಾಂತರಿಸಿ ಚಿತ್ರಹಿಂಸೆ ನೀಡುವ ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸ ಬೇಕೆಂದು ಬಂಟ್ವಾಳ ತಾಲೂಕಿನ ತಹಶೀಲ್ದಾರರಾದ ಕು.ಅನಿತಾ ಲಕ್ಷ್ಮೀ ಇವರಿಗೆ ಮನವಿಯನ್ನು ನೀಡಲಾಯಿತು. ಇತ್ತಿಚಿಗೆ ಮುಸ್ಲಿಂಮೇತರ ಮಹಿಳೆಯರೊಂದಿಗೆ ಪ್ರೀತಿಯ ನಾಟಕವಾಡಿ, ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ, ಮೋಸದಿಂದ ಮದುವೆ ಮಾಡಿ, ತದನಂತರ ಅವರನ್ನು ಬೀದಿ ಪಾಲು ಮಾಡುವ ಅನೇಕ ಘಟನೆಗಳು ಅನೇಕ ರಾಜ್ಯಗಳು ಸೇರಿ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಈಗಾಗಲೇ ಇಂತಹ ಲವ್ […]

ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ – ಅರ್ಜಿ ಆಹ್ವಾನ

Tuesday, August 4th, 2020
hoisala

ಮಂಗಳೂರು : 2020-21 ನೇ ಸಾಲಿಗೆ ಬಾಲಕರಿಗಾಗಿ “ಹೊಯ್ಸಳ” ಮತ್ತು ಬಾಲಕಿಯರಿಗಾಗಿ “ಕೆಳದಿ ಚೆನ್ನಮ್ಮ” ಶೌರ್ಯ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಕಾರ್ಯಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ತಲಾ ರೂ. 10,000 ಗಳ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಶೌರ್ಯ ಪ್ರದರ್ಶಿಸಿದ ಅವಧಿಯು ಆಗಸ್ಟ್ 2019 ರಿಂದ ಜುಲೈ 2020 ರೊಳಗೆ ನಡೆದಿರಬೇಕು […]

ಪೋಲೀಸ್ ಸಿಬ್ಬಂದಿಗಳಿಗೆ ಬಿ.ಸಿ.ರೋಡಿನಲ್ಲಿ ಸನ್ಮಾನ

Wednesday, January 6th, 2016
police

ಬಂಟ್ವಾಳ: ಇಲ್ಲಿನ ಪೋಲೀಸ್ ಇಲಾಖಾ ಆಶ್ರಯದಲ್ಲಿ ಸನ್ಮಾನ ಸಮಾರಂಭ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಹಾಗೂ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ಪಿಎಸ್‌ಐ ಚಂದ್ರಶೇಖರಯ್ಯ, ಎಎಸ್‌ಐ ಶೇಷಪ್ಪ ಪಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಹರೀಶ್ ಭಟ್, ವಾಸು, ಉಮೇಶ್, ಕಾನ್‌ಸ್ಟೇಬಲ್‌ಗಳಾದ ನವೀನ್, ಸೀತಾರಾಮ, ಧರ್ಮಪಾಲ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಹೋಟೆಲ್ ರಂಗೋಲಿ ಮಾಲಕ ಸದಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು. ಎಎಸ್ಪಿ ರಾಹುಲ್ ಕುಮಾರ್ ಎಸ್.ಸಿ.ಸನ್ಮಾನಿಸಿ ಮಾತನಾಡಿ ಬಂಟ್ವಾಳದ ಪೋಲೀಸ್ ಇಲಾಖೆ ಉತ್ತಮವಾಗಿ ಕಾರ‍್ಯನಿರ್ವಹಿಸುತ್ತಿದೆ. ಇದರೊಂದಿಗೆ ವೃತ್ತಿ ಭಾಂದವರ […]

ತಹಶೀಲ್ದಾರರು ವಿಚಾರಣೆ ನಡೆಸದೇ ಸ್ಮಶಾನ ಜಮೀನು ನೀಡುವುದಾಗಿ ಕಡತವನ್ನು ನಿರ್ಮಿಸಿದ್ದರು

Wednesday, October 14th, 2015
crematorium

ಮಂಗಳೂರು : ಅತ್ತಾವರ ಗ್ರಾಮದ ಸ.ನಂ. 251/1 ರಲ್ಲಿ 0.26 ಎಕ್ರೆ ವಿಸ್ತೀರ್ಣದ ಜಮೀನನ್ನು ಮುಸ್ಲಿಂ ಜನಾಂಗದವರಿಗೆ ಸ್ಮಶಾನಕ್ಕಾಗಿ ಕಾದಿರಿಸುವ ಬಗ್ಗೆ ಕೋರಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇವರು ತಹಶೀಲ್ದಾರರು ಮಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅದರಂತೆ ತಹಶೀಲ್ದಾರರು ಪ್ರಸ್ತಾವನೆ ತಯಾರಿಸಿದ್ದು, ಈ ಬಗ್ಗೆ ವಿಶ್ವ ಹಿಂದು ಪರಿಶತ್, ಕಟೀಲ್ ದಿನೇಶ್ ಪೈ ಹಾಗೂ ಅತ್ತಾವರ ಗ್ರಾಮದ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿದ್ದು, ತಹಶೀಲ್ದಾರರು ಈ ಬಗ್ಗೆ ವಿಚಾರಣೆ ನಡೆಸದೇ ಕಡತವನ್ನು ಸಲ್ಲಿಸಿದ್ದು ಈ ಆಕ್ಷೇಪಣೆಗಳ ಬಗ್ಗೆ ಸಹಾಯಕ […]

ಗ್ರಾಮಸ್ಥರ ಮನೆ ಬಾಗಿಲಿಗೆ ಕಂದಾಯ ಇಲಾಖೆ-ರಮಾನಾಥ.ರೈ

Tuesday, June 17th, 2014
Ramanatha Rai

ಮಂಗಳೂರು : ಗ್ರಾಮೀಣ ಪ್ರದೇಶಗಳ ಜನರು ಕಂದಾಯ ಇಲಾಖೆಗೆ ಸಂಬಂದಿಸಿದ ಕೆಲಸಕಾರ್ಯಗಳಿಗೆ ಸದಾ ಪಟ್ಟಣ ಪ್ರದೇಶದ ತಹಶೀಲ್ದಾರರ ಕಚೇರಿಗೆ ಕಂದಾಯ ನಿರೀಕ್ಷಕರ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಗೆ ಆಗಿಂದಾಗ್ಗೆ ಅಲೆಯುವುದನ್ನು ತಪ್ಪಿಸಲು ದ.ಕ.ಜಿಲ್ಲೆಯಲ್ಲಿ ಜಿಲ್ಲಾಡಳಿತ ವಿನೂತನ ಕಾರ್ಯ ಕೈಗೊಂಡಿದ್ದು ಪ್ರತಿದಿನ ಒಂದೊಂದು ಗ್ರಾಮಪಂಚಾಯತ್ ನಲ್ಲಿ ಕಂದಾಯ ಅದಾಲತ್ ಗಳನ್ನು ಹಮ್ಮಿಕೊಳ್ಳುವ ಮೂಲಕ ಕಂದಾಯ ಇಲಾಖೆಯನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ತಂದಿದೆ ಎಂದು ಅರಣ್ಯ, ಪರಿಸರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ. ಅವರು ಇಂದು ಬಂಟ್ವಾಳ […]

ನಿಮ್ಮ ಗ್ರಾಮದಲ್ಲಿ ರುದ್ರಭೂಮಿ ಕೊರತೆಯೇ? ತಹಶೀಲ್ದಾರರಿಗೆ ಮನವಿ ಸಲ್ಲಿಸಿ-ಎ.ಬಿ.ಇಬ್ರಾಹಿಂ

Monday, June 16th, 2014
Ibrahim

ಮಂಗಳೂರು : ಮನುಷ್ಯ ಬದುಕಿದ್ದಾಗ ಯಾವರೀತಿ ಗೌರವಾದರಗಳಿಂದ ಬದುಕು ಸಾಗಿಸುವನೋ ಅದೇ ರೀತಿ ಅವರು ಸತ್ತಾಗಲು ಅವರ ಪಾರ್ಥಿವ ಶರೀರವನ್ನು ಗೌರವಾದರಗಳಿಂದ ಮುಕ್ತಿ ಕಾಣಿಸಬೇಕು. ಇದಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ರುದ್ರಭೂಮಿ ಇರಲೇಬೇಕು. ಅದ್ದರಿಂದ ದ.ಕ.ಜಿಲ್ಲೆಯ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ರುದ್ರಭೂಮಿ ಕೊರತೆ ಬಗ್ಗೆ ವಿವರವಾದ ವರದಿಯೊಂದನ್ನು ಸಿದ್ದಪಡಿಸಲು ರುದ್ರಭೂಮಿ ಕೊರತೆ ಇರುವ ಗ್ರಾಮಸ್ಥರು ಕೂಡಲೇ ಮನವಿಗಳನ್ನು ಆಯಾ ತಹಶೀಲ್ದಾರರಿಗೆ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆ […]