ಬಂಟ್ವಾಳ: ಸುಮಾರು 38 ವರ್ಷಗಳ ಕಾಲ ಬಿ.ಸಿ.ರೋಡಿನ ಸಾಂಸ್ಕೃತಿಕ ಚಟುವಟಿಕೆಯಷ್ಟೇ ಅಲ್ಲ, ರಾಜಕೀಯ, ವೈಚಾರಿಕ, ರಂಗಭೂಮಿ ಚಟುವಟಿಕೆಗಳಿಗೆ ಇದ್ದ ಏಕೈಕ ವೇದಿಕೆ ಸಾರ್ವಜನಿಕ ರಂಗಮಂದಿರ ನೆಲಕ್ಕುರುಳಿದೆ.
2017ರಲ್ಲಿ ನಿರ್ಮಾಣಗೊಂಡ ಬಿ.ಸಿ. ರೋಡಿನ ಮಿನಿ ವಿಧಾನಸೌಧದ ಎದುರು ಇರುವ ಈ ಕಟ್ಟಡದಲ್ಲಿ ಅಂದಿನಿಂದ ಚಟುವಟಿಕೆಗಳು ನಿಂತಿದ್ದವು. ಅದನ್ನು ತೆರವುಗೊಳಿಸುವ ಕುರಿತು ಆಗಾಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಶಿಥಿಲವಾಗಿರುವ ಈ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಗುರುವಾರ ಆರಂಭಗೊಂಡಿದೆ. ‘
1983ರಲ್ಲಿ ಅಂದಿನ ತಹಶೀಲ್ದಾರ ಆಗಿದ್ದ ಕೆ.ಎ.ಎಸ್.ಅಧಿಕಾರಿ ಆರ್.ಕೆ.ರಾಜು ಅವರು ಇಲ್ಲಿ ರಂಗಮಂದಿರ ಕೊರತೆಯನ್ನು ಮನಗಂಡು ತಾಲೂಕು ಕಚೇರಿಯ ಎದುರೇ ಸಾರ್ವಜನಿಕರ ಮನವೊಲಿಸಿ, ಕಟ್ಟಡವೊಂದನ್ನು ಕಟ್ಟಿಸಿದ್ದರು. ಇದೀಗ ರಸ್ತೆ ಅಭಿವೃದ್ಧಿಯ ಕೆಲಸದ ಹೆಸರಿನಲ್ಲಿ ಬಿ.ಸಿ.ರೋಡಿನ ಹಳೆಯ ಕಟ್ಟಡ ರಂಗಮಂದಿರ ತೆರವುಗೊಳ್ಳುತ್ತಿದೆ.
Click this button or press Ctrl+G to toggle between Kannada and English