ರಸ್ತೆ ಅಭಿವೃದ್ಧಿಯ ಕೆಲಸದ ಹೆಸರಿನಲ್ಲಿ ನೆಲಕ್ಕುರುಳಿದ ಸಾರ್ವಜನಿಕ ರಂಗಮಂದಿರ

Friday, May 7th, 2021
Rangamandhira

ಬಂಟ್ವಾಳ: ಸುಮಾರು 38 ವರ್ಷಗಳ ಕಾಲ ಬಿ.ಸಿ.ರೋಡಿನ ಸಾಂಸ್ಕೃತಿಕ ಚಟುವಟಿಕೆಯಷ್ಟೇ ಅಲ್ಲ, ರಾಜಕೀಯ, ವೈಚಾರಿಕ, ರಂಗಭೂಮಿ ಚಟುವಟಿಕೆಗಳಿಗೆ ಇದ್ದ ಏಕೈಕ ವೇದಿಕೆ ಸಾರ್ವಜನಿಕ ರಂಗಮಂದಿರ ನೆಲಕ್ಕುರುಳಿದೆ. 2017ರಲ್ಲಿ ನಿರ್ಮಾಣಗೊಂಡ ಬಿ.ಸಿ. ರೋಡಿನ ಮಿನಿ ವಿಧಾನಸೌಧದ ಎದುರು ಇರುವ ಈ ಕಟ್ಟಡದಲ್ಲಿ ಅಂದಿನಿಂದ ಚಟುವಟಿಕೆಗಳು ನಿಂತಿದ್ದವು. ಅದನ್ನು ತೆರವುಗೊಳಿಸುವ ಕುರಿತು ಆಗಾಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಶಿಥಿಲವಾಗಿರುವ ಈ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಗುರುವಾರ ಆರಂಭಗೊಂಡಿದೆ. ‘ […]

ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ವಂಚಿಸಿದವನಿಗೆ ಬೆಲ್ಟ್ ನಿಂದ ಹಲ್ಲೆ

Thursday, March 4th, 2021
Jeetu Shetty

ಮಂಗಳೂರು: ಫೇಸ್ ಬುಕ್ ಮೂಲಕ ಪರಿಚಯ ಮಾಡಿಸಿಕೊಂಡು ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ಹೇಳಿ ಮಹಿಳೆಯರ ಸಹಿತ ಹಲವು ಮಂದಿಗೆ ವಂಚನೆಗೈದ ಆರೋಪಿಗೆ ಕೆಲವು ವ್ಯಕ್ತಿಗಳು  ಬೆಲ್ಟ್ ನಿಂದ ಮತ್ತು ಗುಂಪಾಗಿ ಸೇರಿ ಹಲ್ಲೆ ನಡೆಸಿರುವ ಘಟನೆ ಮುಲ್ಕಿ ಸಮೀಪ ನಡೆದಿದೆ. ಪುನರೂರು ಎಂಬಲ್ಲಿನ ಜೀತು ಶೆಟ್ಟಿ ಅಲಿಯಾಸ್ ಅಜಯ್ ಶೆಟ್ಟಿ ಎಂಬಾತ, ತನಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಪರಿಚಯ ಇದೆ ಎಂದು ಏಳೆಂಟು ಮಂದಿಗೆ ನಂಬಿಸಿದ್ದಾನೆ. ಎಫ್ಬಿ ಮುಖಾಂತರ ಅವರನ್ನು ಪರಿಚಯಿಸಿಕೊಂಡು ತಾಲೂಕು ಆಫೀಸ್ ನಲ್ಲಿ ಕೆಲಸ ದೊರಕಿಸುವ ಭರವಸೆ ನೀಡಿದ್ದಾನೆ. […]

ತಾಲೂಕು ಕಚೇರಿಯ ಕಂದಾಯ ಇಲಾಖೆಯ ಕೆಲಸಗಳಲ್ಲಿ ವಿಳಂಬ, ಸೂಕ್ತ ಕ್ರಮಕ್ಕೆ ಆಗ್ರಹ

Wednesday, February 8th, 2017
tp meeting

ಮಂಗಳೂರು : ಮಂಗಳೂರು ತಾಲೂಕು ಕಚೇರಿಯ ಕಂದಾಯ ಇಲಾಖೆಯ ಕೆಲಸಗಳಲ್ಲಿ ವಿಳಂಬವಾಗುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಅತೃಪ್ತಿ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ತಹಶೀಲ್ದಾರರ ನೇತೃತ್ವದಲ್ಲಿ ವಿಶೇಷ ಸಭೆ ಕರೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆರಂಭಗೊಂಡ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡುತ್ತಿದ್ದರು. ಈ ಹಿಂದಿನ […]

ಸರ್ಕಾರದಿಂದಲೂ ಜೀತಪದ್ಧತಿ: ಬಿ.ಎಂ.ಭಟ್ ಆರೋಪ

Friday, December 6th, 2013
akshara

ಪುತ್ತೂರು: ಸಿಐಟಿಯು ನೇತೃತ್ವದ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳವೂ ಸೇರಿದಂತೆ ಹಲವು ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಕಾರ್ಯಕರ್ತರು ಗುರುವಾರ ಪುತ್ತೂರಿನ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯ ದರ್ಶಿ ಬಿ.ಎಂ. ಭಟ್  ಮಾತನಾಡಿ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಮೂಲಕ ಜೀತದಾಳು ಪದ್ಧತಿ ಅನುಸರಿ ಸುತ್ತಿರುವ ಹೋಟೆಲ್ ಇನ್ನಿತರ ಸಂಸ್ಥೆ ಗಳ ವಿರುದ್ಧ ಕನಿಷ್ಠ […]

ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ಪ್ರತಿಭಟನೆ

Friday, November 1st, 2013
sowjanya

ಬಂಟ್ವಾಳ:  ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಹಾಗೂ ಜಿಲ್ಲೆಯಲ್ಲಿ ನಡೆದ ಇತರ ಅಸಹಜ ಸಾವಿನ ಪ್ರಕರಣಗಳ ಸಿಬಿಐ ತನಿಖೆ ಆಗಲಿ ಎಂದು ಅ. 31ರಂದು ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಸಿದ್ದಕಟ್ಟೆಯ ಭಾರತಿ, ಅಡ್ಯಾರ್‌ನ ಅಕ್ಷತಾ, ಮೂಡಬಿದಿರೆಯ ಸುಚರಿತ ಸಹಿತ ಎಲ್ಲ ಅಸಹಜ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಮಾಯಕ ಮಹಿಳೆಯರ […]

ಉಸ್ತುವಾರಿ ಸಚಿವರಿಂದ ಮಂಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ

Thursday, August 18th, 2011
Krishna J. Palemar raids Taluk Office

ಮಂಗಳೂರು : ದ.ಕ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಮಂಗಳೂರು ತಾಲೂಕು ಕಚೇರಿಗೆ ಹಾಗೂ ವಿವಿಧ ಇಲಾಖೆಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡತಗಳು ವಿಲೇವಾರಿಯಾಗದೇ ಬಾಕಿ ಇರುವುದನ್ನು ಪರಿಶೀಲಿಸಿದ ಅವರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡರು, ಯಾವುದೇ ಕಡತಗಳನ್ನು ಹೆಚ್ಚು ದಿನ ಕಚೇರಿಯಲ್ಲಿ ಉಳಿಸದೇ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು. ಡಿ.ವಿ. ಸದಾನಂದ ಗೌಡರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಮಂಗಳೂರಿನ ಮೊದಲ ಭೇಟಿಯಲ್ಲಿ ಸರಕಾರಿ ಕಚೇರಿಗಳಲ್ಲಿ ಯಾವುದೇ […]