ಪುತ್ತೂರು: ಸಿಐಟಿಯು ನೇತೃತ್ವದ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳವೂ ಸೇರಿದಂತೆ ಹಲವು ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಕಾರ್ಯಕರ್ತರು ಗುರುವಾರ ಪುತ್ತೂರಿನ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಸಿಐಟಿಯು ರಾಜ್ಯ ಕಾರ್ಯ ದರ್ಶಿ ಬಿ.ಎಂ. ಭಟ್ ಮಾತನಾಡಿ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಮೂಲಕ ಜೀತದಾಳು ಪದ್ಧತಿ ಅನುಸರಿ ಸುತ್ತಿರುವ ಹೋಟೆಲ್ ಇನ್ನಿತರ ಸಂಸ್ಥೆ ಗಳ ವಿರುದ್ಧ ಕನಿಷ್ಠ ವೇತನ ನೀಡದ ಬಗ್ಗೆ ಕೇಸು ದಾಖಲಿಸಿಕೊಳ್ಳುತ್ತಿರುವ ಸರ್ಕಾರವೇ ಅಕ್ಷರ ದಾಸೋಹ ಯೋಜನೆಯ ಮಹಿಳೆಯರನ್ನು 38 ರೂ. ಜುಜುಬಿ ಸಂಬಳಕ್ಕೆ ದುಡಿಸುವ ಮೂಲಕ ಜೀತ ಪದ್ಧತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ -ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಮಹಿಳೆಯರಿಗೆ ಸರಿಯಾದ ಸಂಬಳ ಕೊಡದೆ ದುಡಿಸುವ ಯೋಜನೆ ನಡೆ ಯುತ್ತಿದೆ. ಅದೇ ರೀತಿ ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆ ನಿರಂ ತರವಾಗಿ ನಡೆಯುತ್ತಿದ್ದು,ನಮ್ಮ ಪ್ರಜಾ ಪ್ರಭುತ್ವವನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ಪುತ್ತೂರು ತಾಲೂಕು ಸಿಪಿಐಎಂ ಕಾರ್ಯದರ್ಶಿ ಪಿ.ಕೆ. ಸತೀಶನ್ , ಸಿಐಟಿಯು ಬೆಂಬಲಿತ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಂತಿ, ಕಾರ್ಯದರ್ಶಿ ಲಿಸ್ಸಿ ವರ್ಗೀಸ್, ಮಿನಿ ಫೆರ್ನಾಂಡೀಸ್, ಚಂದ್ರಿಕಾ, ವೇದಾವತಿ, ಡಿವೈಎಫ್‍ಐ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English