ರೈಲ್ವೇ ಬಜೆಟ್ ನಲ್ಲಿ ಕರಾವಳಿಗೆ ಅತ್ಯುತ್ತಮ ಕೊಡುಗೆ : ಸಂಸದ ನಳಿನ್ ಕುಮಾರ್

7:20 PM, Tuesday, July 8th, 2014
Share
1 Star2 Stars3 Stars4 Stars5 Stars
(5 rating, 6 votes)
Loading...
Nalin Rail

ಮಂಗಳೂರು: ದೇಶದ ಹಾಗೂ ರಾಜ್ಯದ ಸಮಗ್ರ ರೈಲ್ವೇ ಹಿತದೃಷ್ಠಿಯನ್ನು ಕಾಪಾಡುವುದರ ಜತೆಗೆ ಕರಾವಳಿ ಜಿಲ್ಲೆಗೆ ರೈಲ್ವೇ ಬಜೆಟ್ ನಲ್ಲಿ ದೊಡ್ಡ ಕೊಡುಗೆ ನೀಡಲಾಗಿದೆ. ನಮ್ಮವರೇ ಆದ ರೈಲ್ವೆ ಸಚಿವರಾದ ಡಿ. ವಿ. ಸದಾನಂದ ಗೌಡರು ಕರಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡದಂತಹ ದೊಡ್ಡ ಪ್ರಮಾಣದ ರೈಲು ಹಾಗೂ ರೈಲು ಹಳಿಗಳ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಸಚಿವರು, ಮಂಗಳೂರು ರೈಲ್ವೇ ವಿಭಾಗದ ಘೋಷಣೆಗೆ ಪೂರಕದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮುಂದಿನ ಹಂತದಲ್ಲಿ ಮಂಗಳೂರು ವಿಭಾಗದ ಘೋಷಣೆಯೂ ಆಗುವ ನೀರಿಕ್ಷೆ ಇದೆ.

ಮಂಗಳೂರು-ಬೆಂಗಳೂರು ನಡುವೆ ಎಕ್ಸ್ಪ್ರೆಸ್ ರೈಲು, ಕಾಞಂಗಾಡಿನಿಂದ-ಪಾನತ್ತೂರು-ಕಾಣಿಯೂರು ನಡುವೆ ಹೊಸ ರೈಲು, ಕಾಸಗೋಡಿನಿಂದ-ಮಂಗಳೂರು-ಬೈಂದೂರು ನಡುವೆ ಹೊಸ ರೈಲು, ಶೃಂಗೇರಿ-ಮಂಗಳೂರು-ಶಿವಮೊಗ್ಗದ ನಡುವೆ ರೈಲ್ವೇ ಹಳಿ, ಉಳ್ಳಾಲದಿಂದ-ಸುರತ್ಕಲ್ ನಡುವೆ ರೈಲುಹಳಿ ದ್ವಿಪಥ ಇತ್ಯಾದಿ ಯೋಜನೆಗಳನ್ನು ಘೋಷಿಸಿ, ಈ ಭಾಗಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕರಾವಳಿಗೆ ದೊಡ್ಡ ಕೊಡುಗೆ ಲಭಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English