ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಮಂಡಿಸಿದ ಈ ಬಾರಿಯ ರೈಲ್ವೆ ಬಜೆಟ್ ಕರ್ನಾಟಕ ರಾಜ್ಯದ ಕರಾವಳಿಯ ಜನತೆಗೆ ಉತ್ತಮ ಕೊಡುಗೆಯನ್ನು ನೀಡಿದೆ. ಇದೊಂದು ಉತ್ಪ್ರೇಕ್ಷೆಗಳಿಲ್ಲದ ಸಮಾಧಾನಕರ ಬಜೆಟ್. ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗರಚನೆ ಆಗದಿರುವ ಹಾಗೂ ನೈರುತ್ಯ ವಲಯಕ್ಕೆ ಮಂಗಳೂರು ವಿಭಾಗ ಸೇರ್ಪಡೆಗೊಳಿಸದೇ ಇರುವುದು ಮಾತ್ರ ಬೇಸರದ ವಿಷಯವಾಗಿದೆ.
ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ ಪರಿಷತ್ ವತಿಯಿಂದತಾ. 20.08.2003ರಂದು ಮಂಗಳೂರಿನ ಕೇಂದ್ರರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತ್ಯೇಕ ಮಂಗಳೂರು ವಲಯರಚನೆಗಾಗಿ ಬೇಡಿಕೆಯೊಂದಿಗೆ ಆಯೋಜಿಸಿದ್ದ ಹೋರಾಟದ ಬಹಿರಂಗ ಸಭೆಯಲ್ಲಿ ಆಗಿನ ಪುತ್ತೂರು ಶಾಸಕರಾಗಿದ್ದ ಸನ್ಮಾನ್ಯ ಶ್ರೀ ಡಿ.ವಿ. ಸದಾನಂದಗೌಡರ ಸಹಿತವಾಗಿ ಹಿರಿಯ ಸಾಹಿತಿಗಳಾದ ಪಾಟೀಲ ಪುಟ್ಟಪ್ಪ, ಕಯ್ಯಾರಕಿಂಞಣ್ಣರೈ, ಬಿ.ಎಂ. ಇದಿನಬ್ಬ, ಶಾಸಕ ಎನ್. ಯೋಗೀಶ ಭಟ್, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹರಿಕೃಷ್ಣ ಪುನರೂರು, ರೈಲ್ವೆ ಸಲಹಾ ಸಮಿತಿ ಸದಸ್ಯರಾದಜಯರಾಮರೈ, ಕ.ಸಾ.ಪ ಕಾಸರಗೋಡು ಜಿಲ್ಲಾಧ್ಯಕ್ಷೆ ಲಲಿತಾ ಭಟ್, ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷಎ.ಎಸ್.ಎನ್. ಹೆಬ್ಬಾರ್, ಮೊದಲಾದ ಅನೇಕ ಗಣ್ಯರು ಪಾಲ್ಗೊಂಡಿರುವುದನ್ನಿಲ್ಲಿ ಸ್ಮರಿಸಬಹುದು.
ಸನ್ಮಾನ್ಯ ಡಿ.ವಿ. ಸದಾನಂದಗೌಡರುಉಡುಪಿ ಲೋಕ ಸಭಾ ಸದಸ್ಯರಾಗಿದ್ದಾಗಲೂ ಆ ಬಳಿಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ತತ್ಸಂಬಂಧಿ ವಿಷಯದ ಕುರಿತಾಗಿ ನಮ್ಮಜತೆ ಗೂಡಿದನಿ ಎತ್ತಿದ್ದಾರೆ.
ಪ್ರಸ್ತುತಕೇಂದ್ರ ಸರಕಾರರೈಲ್ವೆ ಬಜೆಟ್ ನ ಪೂರ್ವದಲ್ಲಿಯೇರೈಲ್ವೆ ಪ್ರಯಾಣದರವನ್ನು ಪರಿಷ್ಕರಿಸಿದಾಗ ಅಭಿವೃದ್ಧಿಯ ನೆಲೆಯಲ್ಲಿನಾವೆಲ್ಲಸ್ವಾಗಿತಿಸಿ ಮನ್ನಿಸಿರುವೆವು. ಈಗಾಗಲೇ ಬಜೆಟ್ನ ಮುಖಾಂತರ ಹಾಕಿಕೊಂಡಿರುವಎಲ್ಲಾ ಯೋಜನೆಗಳು ಶ್ಲಾಘನೀಯವಾಗಿವೆ. ಆದರೆ ಕರಾವಳಿ ಕನ್ನಡಿಗರ ಬಹುದಿನದ ಕನಸಾದ ಮಂಗಳೂರು ರೈಲ್ವೆ ಪ್ರತ್ಯೇಕ ವಿಭಾಗದರಚನೆೆ ಮತ್ತು ಆಡಳಿತಾತ್ಮಕವಾಗಿ ಪಾಲ್ಘಾಟ್ ವಲಯದಿಂದ ವಿಮುಕ್ತಿಗೊಳಿಸಿ ನೈರುತ್ಯ ವಲಯಕ್ಕೆ ಸೇರಿಸಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆ ಆಗ್ರಹ. ಈ ಬಗ್ಗೆ ಮಾನ್ಯ ಸದಾನಂದ ಗೌಡರು ಆದ್ಯತೆಯ ನೆಲೆಯಲ್ಲಿ ತಕ್ಷಣ ಕರ್ಯೋನ್ಮುಖರಾಗಬೇಕೆಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪಕುಮಾರಕಲ್ಕೂರ ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English