ವಿದ್ಯಾರ್ಥಿಶಕ್ತಿ ಎದ್ದು ನಿಂತರೆ ಮಾತ್ರ ದೇಶ ಕಾಪಾಡಲು ಸಾಧ್ಯ – ಪಿ.ಪಿ. ಹೆಗಡೆ

7:24 PM, Friday, January 28th, 2011
Share
1 Star2 Stars3 Stars4 Stars5 Stars
(1 rating, 1 votes)
Loading...

ವಿವೇಕೋತ್ಸವ 2011ಮಂಗಳೂರು : ಆಗಸ್ಟ್ 15ನ್ನು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಾರೆ. ಆದರೆ ಅದು ಕರಾಳದಿನ. ಭಾರತ, ಬಾಂಗ್ಲಾ ಮತ್ತು ಪಾಕಿಸ್ಥಾನದಿಂದ ಬೇರ್ಪಡೆಯಾದ ದಿನ. ಬಾರತಾಂಬೆಯನ್ನು ತುಂಡರಿಸಿದ ದಿನ. ಈ ದಿನವನ್ನು ಕರಾಳದಿನವನ್ನಾಗಿ ಆಚರಿಸುವ ಬದಲು ಡಿಸೆಂಬರ್ 6ರಂದು ಕರಾಳದಿನವನ್ನಾಗಿ ಆಚರಿಸುತ್ತಾರೆ.
ವಿವೇಕೋತ್ಸವ 2011ಬ್ರಿಟೀಷ್ ಬುದ್ಧಿಯ ಜನ ದೇಶವನ್ನು ಆಳುವುದನ್ನು ನಿಲ್ಲಿಸುವ ತನಕ, ಭಾರತಕ್ಕೆ ಪೂರ್ಣರೀತಿಯ ಸ್ವಾತಂತ್ರ್ಯ ದೊರಕುವುದಿಲ್ಲ. ಈಗ ಇರುವ ಎಲ್ಲಾ ವ್ಯವಸ್ಥೆಯ ಮುಂದುವರಿದ ಪಳೆಯುಳಿಕೆಯಾಗಿದೆ ಎಂದು ಮುಖ್ಯ ಭಾಷಣಕಾರರಾಗಿ ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ಪದ್ಮಪ್ರಸಾದ್ ಹೆಗಡೆ ಪಿ.ಪಿ.ಹೆಗಡೆ ತಿಳಿಸಿದರು.
ಅವರು ಮಂಗಳೂರಿನ ಪುರಭವನದಲ್ಲಿ ನಡೆದ ವಿದ್ಯಾರ್ಥಿ ಪರಿಷತ್, ಮಂಗಳೂರು, ಆಯೋಜಿಸಿದ ವಿವೇಕೋತ್ಸವ 2011, ಸ್ವಾಮೀ ವಿವೇಕಾನಂದ-ನೇತಾಜಿ ಸುಬಾಶ್ ಚಂದ್ರ ಬೋಸ್ ಜಯಂತಿ ಸಂದರ್ಭದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳನ್ನು ಕುರಿತು ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ವಿದ್ಯಾರ್ಥಿಶಕ್ತಿ ಎದ್ದು ನಿಂತರೆ ಮಾತ್ರ ದೇಶವನ್ನು ಕಾಪಾಡಲು  ಸಾಧ್ಯ. ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ನಿಗ್ರಹಿಸಬೇಕು. ಅರಬ್ ದೇಶಗಳಲ್ಲಿ ಇರುವಂತೆ ಭಾರತದಲ್ಲೂ ದೇಶದ್ರೋಹ ಕೆಲಸ ಮಾಡಿದವರಿಗೆ ನೇಣಿಗೆ ಹಾಕುವ, ಕಲ್ಲು ಹೊಡೆದು ಸಾಯಿಸುವಂತಹ ಕಾನೂನು ಜಾರಿಗೆ ತಂದಿದ್ದರೆ ಒಳ್ಳೆಯದಿತ್ತು ಎಂದು ಅಭಿಪ್ರಾಯ ಪಟ್ಟರು.
ಭಾರತಾಂಬೆಯ ವಿರುದ್ದ ತಲೆ ಎತ್ತಿದವರ ಶಿರಛೇದನ ಮಾಡಬೇಕು. ಇಂಡಿಯಾ ಹೋಗಿ ಭಾರತ ಯಾವಾಗ ಆಗುತ್ತದೋ ಆಗ ದೇಶ ಸದೃಢವಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿ ನಮಗೆ ಬೇಡ. ಹಿರಿಮೆ ಗರಿಮೆಗಳ ಸಂಸ್ಕೃತಿ ವಿದೇಶಗಳಲಿಲ್ಲ, ಪುಣ್ಯಮಯವಾದ ಸಂಸ್ಕೃತಿ ಇರುವುದು ಭಾರತದಲ್ಲಿ.
ಅಮೇರಿಕಾದವರನ್ನು ಸಹೋದರ – ಸಹೋದರಿ ಎಂದು ಕರೆದ ಮೊದಲ ವ್ಯಕ್ತಿ ಸ್ವಾಮಿ ವಿವೇಕಾನಂದ ಚರಿತ್ರೆಯ ಸಾರವನ್ನು ದೇಶವನ್ನಾಳುವ ನಾಯಕರಿಗೆ ಕಲಿಸಿದರೆ ದೇಶ ಉನ್ನತ ಸ್ಥಾನ ಕ್ಕೆ ಏರುತ್ತಿತ್ತು. ರಜೀವ್ ಗಾಂಧಿಯವರು ಚರಿತ್ರೆಯ ಸಾರವನ್ನು ಕಲಿತಿದ್ದರೆ, ವಿದೇಶಿ ಮಹಿಳೆಯನ್ನು ಭಗಿನಿ ಎಂದು ಕರೆಯುತ್ತಿದ್ದರೆ. ಆಗ ನಮ್ಮ ದೇಶಕ್ಕೂ ಸಹೋದರಿ ಸೋನಿಯಾ ಸಿಗುತ್ತಿದ್ದರು ಎಂದು ಅವರು ಹೇಳಿದರು.
ನಮ್ಮ ಜೀವನದ ಗುರಿ ಇಭ್ಭಾಗವಾದ ದೇಶವನ್ನು ಒಂದು ಮಾಡುವುದು. ದೇಶಕ್ಕೆ ಪೂರ್ಣವಾದ ಸ್ವಾತಂತ್ರ್ಯ ದೊರಕಿಸಿ ದೇಶವನ್ನು ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯಿಂದ ಮುಕ್ತ ಮಾಡುವುದು. ಇದೆಲ್ಲಾ ವಿದ್ಯಾರ್ಥಿ ಗಳ ಕೈಯಲ್ಲಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ವಿವೇಕಾನಂದರ ಹಾಗೂ ಶಾರದಾಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ  ಮಾಡುವ ಮೂಲಕ ಉದ್ಘಾಟಿಸಿದರು.
ಅದಕ್ಕೂ ಮೊದಲು  ಜ್ಯೋತಿವೃತ್ತದಿಂದ ಪುರಭವನದವರೆಗೆ ವಿದ್ಯಾರ್ಥಿ ಪರಿಷತ್ನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿಬಂದರು.

ವಿವೇಕೋತ್ಸವ 2011

ವಿವೇಕೋತ್ಸವ 2011

ವಿವೇಕೋತ್ಸವ 2011ಚ.ನ.ಶಂಕರ್ ರಾವ್ ಅವರು ವಿದ್ಯಾರ್ಥಿಗಳಿಗೆ ವಿವೇಕಾನಂದ ಹಾಗೂ ಸುಭಾಸ್ ಚಂದ್ರ ಭೋಸ್ರವರ ಜೀವನ ಚರಿತ್ರೆ ಹಾಗೂ ಸಾಧನೆಗಳನ್ನು ತಿಳಿಸಿದರು.  ಅನಿಲ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ರಾಜಾರಾಮ್ ಅಧ್ಯಕ್ಷತೆ ವಹಿಸಿದ್ದರು. ಜೀತೇಂದ್ರ ಕೊಟ್ಟಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್ವಕಾಲೇಜು ಸಂಘದ ಅಧ್ಯಕ್ಷ ವಿಕ್ರಂ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ನ ನಗರ ಕಾರ್ಯದರ್ಶಿ ಮಹೇಶ ವಂದಿಸಿದರು, ಸುಜೀತ್ ನಿರೂಪಿಸಿದರು.

ವಿವೇಕೋತ್ಸವ 2011

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English