ಮುಂಬೈಯಲ್ಲಿ ಉಗ್ರರು ಹಲವಾರು ಮಂದಿಯನ್ನು ಬಲಿ ಪಡೆದ ದಿನವೇ ಮಂಗಳೂರಿನಲ್ಲಿ ಗೋಡೆ ಬರಹ : ಎಬಿವಿಪಿ ಖಂಡನೆ

Saturday, November 28th, 2020
Abvp Protest

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಅಪಾರ್ಟ್‌ಮೆಂಟ್‌ನ ಆವರಣ ಗೋಡೆಯಲ್ಲಿ ಉಗ್ರ ಸಂಘಟನೆಗಳ ಪರ ಬರಹ ಪ್ರಕರಣವನ್ನು ಖಂಡಿಸಿ ನಗರದ ಸರ್ಕೀಟ್ ಹೌಸ್ ಮುಂಭಾಗ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ದೊಂದಿ ಹಿಡಿದು ದೇಶದ್ರೋಹಿಗಳ ವಿರುದ್ಧ ಘೋಷಣೆ ಕೂಗಿದರು. 2008 ನ.26ರಂದು ಪಾಕಿಸ್ತಾನದ ಲಷ್ಕರ್ ಇ ತೊಯ್ಬಾ ಉಗ್ರರ ಕೃತ್ಯದಿಂದ ಮುಂಬೈ ಮಹಾನಗರದಲ್ಲಿ ಸೈನಿಕರು, ಪೊಲೀಸರು ಸೇರಿ ಹಲವಾರು ಮಂದಿ ಮೃತಪಟ್ಟ ದಿನ. ಅದೇ ದಿನ ದೇಶದ್ರೋಹಿಗಳು ಉಗ್ರರ […]

7,8,9 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ 39ನೇ ರಾಜ್ಯ ಸಮ್ಮೇಳನ

Monday, February 3rd, 2020
ABVP

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ.ಇದರ 39ನೇ ರಾಜ್ಯ ಸಮ್ಮೇಳನವು ದಿನಾಂಕ 7,8,9 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ(ಪುರಭವನ)ದಲ್ಲಿ ನಡೆಯಲಿದೆ. ಸಮ್ಮೇಳನದ ಅಂಗವಾಗಿ ದಿನಾಂಕ 02-02-2020ರಂದು ಮಂಗಳೂರು ವಿಭಾಗದ ಪ್ರಬಂಧಕರ ಮಹಾ ಬೈಠಕ್ ಅಭಾವಿಪ ಕಾರ್ಯಲಯದಲ್ಲಿ ನಡೆಯಿತು. ವಿಭಾಗ ಪ್ರಮುಖರಾದ ಕೇಶವ ಬಂಗೇರ ಮಾತನಾಡಿ ಸಮ್ಮೇಳನದಲ್ಲಿ ಪ್ರಬಂಧಕರ ಪಾತ್ರವೇನೆಂದು ತಿಳಿಸಿ ನಂತರ ಕಾರ್ಯಕರ್ತರಿಗಿರುವ ವಿವಿಧ ಜವಾಬ್ದಾರಿಗಳ ಬಗೆಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅಭಾವಿಪ ದ ಮಧ್ಯಕ್ಷೇತ್ರಿಯ ಸಹಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ಕರ್ನಾಟಕ […]

ಮಂಗಳೂರು : ಅತ್ಯಾಚಾರದ ವಿರುದ್ಧ ಪ್ರತಿಭಟನೆ

Tuesday, December 3rd, 2019
ABVP

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರ ವತಿಯಿಂದ, ಹೈದ್ರಾಬಾದಿನಲ್ಲಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲೆ ಆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು, ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ರ‍್ಯಾಲಿಯು ಚೈತನ್ಯ ಪದವಿಪೂರ್ವ ಕಾಲೇಜಿನಿಂದ ಪ್ರಾರಂಭವಾಗಿ ಮಹೇಶ್ ಕಾಲೇಜು ಮುಂಭಾಗವಾಗಿ ಕೊಟ್ಟಾರ ಚೌಕಿಯನ್ನು ತಲುಪಿ ರಸ್ತೆ ಮಧ್ಯದಲ್ಲಿ ನಿಂತು ಪ್ರತಿಭಟನಾಕಾರರು ಘೋಷಣೆ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ […]

ಮಂಗಳೂರು : ಒಂದೇ ವೇದಿಕೆಯಲ್ಲಿ 50 ಬಡ ಕುಟುಂಬಗಳಿಗೆ ಸಹಾಯ ಹಸ್ತ

Tuesday, October 22nd, 2019
rajakesari

ಮಂಗಳೂರು  : ಅಮೃತಸಂಜೀವಿ(ರಿ.) ಮಂಗಳೂರು ಇದರ ಆಶ್ರಯದಲ್ಲಿ ಸಂಸ್ತೆಯ 50 ನೇ ಮಾಸಿಕ ಯೋಜನೆಯ ಅಂಗವಾಗಿ ರಾಜಕೇಸರಿ ಯೂತ್ ಕ್ಲಬ್ ಗಂಜಿಮಠ ರಿ. ಗಂಜಿಮಠ ಇದರ ಸಹಯೋಗದಲ್ಲಿ 50 ಬಡ ಕುಟುಂಬಗಳಿಗೆ ಒಂದೇ ವೇದಿಕೆಯಲ್ಲಿ ಸಹಾಯ ಹಸ್ತ ನೀಡುವ ಕಾರ್ಯಕ್ರಮ ಶ್ರೀ ರಾಮ ಮಂದಿರ ಎಡಪದವಿನಲ್ಲಿ ನಡೆಯಿತು. ಶ್ರೀ ರಾಮ ಮಂದಿರ ಎಡಪದವಿನ ಅಧ್ಯಕ್ಷರಾದ ಮುರಲೀಧರ ಶೆಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಸಂಸ್ಥೆಯ ಯುವಕರ […]

ಅತ್ಯಾಚಾರಿಗಳ ವಿರುದ್ದ ಪ್ರಬಲ ಕಾನೂನು ರೂಪಿಸುವಂತೆ ಎಬಿವಿಪಿ ಮನವಿ

Saturday, January 5th, 2013
ABVP Protest

ಮಂಗಳೂರು : ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಧಪಟ್ಟಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೀಡಿದ ದೇಶವ್ಯಾಪಿ ಪ್ರತಿಭಟನೆಗೆ ಎಲ್ಲೆಡೆಯಂತೆ ಮಂಗಳೂರಿನಲ್ಲು ಉತ್ತಮ ಬೆಂಬಲ ವ್ಯಕ್ತವಾಗಿದೆ. ದಿಲ್ಲಿ ಅತ್ಯಾಚಾರ ಅತ್ಯಂತ ಹೇಯ ಕೃತ್ಯವಾಗಿದ್ದು ಅತ್ಯಾಚಾರಕೊಳಪಟ್ಟ ವಿದ್ಯಾರ್ಥಿಯ ಸಾವು ದುರದೃಷ್ಟಕರ ಸಂಗತಿ. ಸಮಾಜದಲ್ಲಿ ಇಂತಹ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿದ್ದು ದೇಶದ ಜನತೆ ತಲೆತಗ್ಗಿಸುವಂತಾಗಿದೆ ಆದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಲ್ಲದೆ ಯುವಶಕ್ತಿ ಇದರ ವಿರುದ್ಧ ಹೋರಾಡಬೇಕು ಪ್ರತಿಭಟನೆಯ ಸಂಘಟನಾ ಕಾರ್ಯದರ್ಶಿ ವಿನಯ್ ಹೊರಟ್ಟಿ ಹೇಳಿದರು. ಅತ್ಯಾಚಾರಿಗಳ […]

ದೇಶದಲ್ಲಿ ದುಷ್ಕೃತ್ಯವೆಸಗುವ ಕೆ.ಎಫ್.ಡಿ. ಮತ್ತು ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Saturday, June 25th, 2011
ABVP protest

ಮಂಗಳೂರು: ಭಯೋತ್ಪಾದಕ ಕೃತ್ಯ ಮತ್ತು ಸಮಾಜಘಾತಕ ಕೃತ್ಯಗಳಲ್ಲಿ ತೊಡಗಿರುವ ಕರ್ನಾಟಕ ಫೋರಂ ಫಾರ್  ಡಿಗ್ನಿಟಿ (ಕೆ.ಎಫ್.ಡಿ)  ಸಂಘಟನೆಯನ್ನು ರಾಜ್ಯ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಅಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ನಗರದ ಬೆಸೆಂಟ್ ವೃತ್ತದ ಬಳಿ  ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ. ಹರ್ಷ ಮಾತನಾಡಿ ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ 5. ಕೋಟಿ ಹಣ ನೀಡಬೇಕೆಂದು ತಂದೆ-ತಾಯಿಗಳಿಗೆ ಬೆದರಿಕೆ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದನ್ನು ಅಭಾವಿಪ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಕೆ.ಎಫ್.ಡಿ […]

ವಿದ್ಯಾರ್ಥಿಶಕ್ತಿ ಎದ್ದು ನಿಂತರೆ ಮಾತ್ರ ದೇಶ ಕಾಪಾಡಲು ಸಾಧ್ಯ – ಪಿ.ಪಿ. ಹೆಗಡೆ

Friday, January 28th, 2011
ವಿವೇಕೋತ್ಸವ 2011

ಮಂಗಳೂರು : ಆಗಸ್ಟ್ 15ನ್ನು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಾರೆ. ಆದರೆ ಅದು ಕರಾಳದಿನ. ಭಾರತ, ಬಾಂಗ್ಲಾ ಮತ್ತು ಪಾಕಿಸ್ಥಾನದಿಂದ ಬೇರ್ಪಡೆಯಾದ ದಿನ. ಬಾರತಾಂಬೆಯನ್ನು ತುಂಡರಿಸಿದ ದಿನ. ಈ ದಿನವನ್ನು ಕರಾಳದಿನವನ್ನಾಗಿ ಆಚರಿಸುವ ಬದಲು ಡಿಸೆಂಬರ್ 6ರಂದು ಕರಾಳದಿನವನ್ನಾಗಿ ಆಚರಿಸುತ್ತಾರೆ. ಬ್ರಿಟೀಷ್ ಬುದ್ಧಿಯ ಜನ ದೇಶವನ್ನು ಆಳುವುದನ್ನು ನಿಲ್ಲಿಸುವ ತನಕ, ಭಾರತಕ್ಕೆ ಪೂರ್ಣರೀತಿಯ ಸ್ವಾತಂತ್ರ್ಯ ದೊರಕುವುದಿಲ್ಲ. ಈಗ ಇರುವ ಎಲ್ಲಾ ವ್ಯವಸ್ಥೆಯ ಮುಂದುವರಿದ ಪಳೆಯುಳಿಕೆಯಾಗಿದೆ ಎಂದು ಮುಖ್ಯ ಭಾಷಣಕಾರರಾಗಿ ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ಪದ್ಮಪ್ರಸಾದ್ ಹೆಗಡೆ […]