ಬೆಂಗಳೂರು : ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಯಲ್ಲೂ ಇಲಿಗಳ ಹಾವಳಿ ಹೆಚ್ಚಾಗಿದೆ. 6 ತಿಂಗಳಿಂದ ಇಲಿಗಳ ಕಾಟವನ್ನು ತಡೆಯಲು ಸಾಧ್ಯವಾಗದೇ ಬಿಬಿಎಂಪಿ ಅಧಿಕಾರಿಗಳು ತತ್ತರಿಸಿಹೋಗಿದ್ದಾರೆ. ಇಲಿಗಳನ್ನು ಹಿಡಿಯಲು ಬೆಕ್ಕುಗಳನ್ನು ಸಾಕುವುದಂತೂ ಬಿಬಿಎಂಪಿಗೆ ಸಾಧ್ಯವಾಗದ ಕೆಲಸ.
ಹೀಗಾಗಿ ಇಲಿಗಳನ್ನು ಹಿಡಿಯಲು ಮೂರು ಕಂಪನಿಗಳಿಗೆ ಟೆಂಡರ್ ನೀಡಲಾಗಿದ್ದು, ಒಂದು ಇಲಿ ಹಿಡಿಯಲು 10 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. 6 ತಿಂಗಳಲ್ಲಿ ಹಿಡಿಯಲಾದ ಇಲಿಗಳ ಸಂಖ್ಯೆ ಕೇವಲ 20 ಎಂದು ಹೇಳಲಾಗುತ್ತಿದೆ. 20 ಇಲಿಗಳನ್ನು ಹಿಡಿಯಲು ಸುಮಾರು 2 ಲಕ್ಷ ರೂ. ಖರ್ಚಾಗಿದೆ.
ಬಿಬಿಎಂಪಿ ಈ ಹಣವನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿದೆ. ಆದರೆ ನಿಜವಾಗಲೂ ಇಲಿಗಳನ್ನು ಹಿಡಿಯಲು ಇಷ್ಟೊಂದು ಹಣ ಖರ್ಚು ಮಾಡಲಾಗಿದೆಯೇ ಎನ್ನುವುದೇ ಪ್ರಶ್ನೆಯಾಗಿದೆ. ಅಧಿಕಾರಿಗಳು ತಾವು ಮಾಡಿದ ವೆಚ್ಚಕ್ಕೆ ಯಾವ ರೀತಿ ಲೆಕ್ಕತೋರಿಸುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಅಪ್ಪಟ ಉದಾಹರಣೆಯಾಗಿದೆ.
Click this button or press Ctrl+G to toggle between Kannada and English