ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಬಲಪಡಿಸಲು ಹರೀಶ್ ಆಚಾರ್ ಕರೆ

6:50 PM, Friday, July 11th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Harish Achar

ಮಂಗಳೂರು : ಸಹಕಾರಿ ಕ್ಷೇತ್ರಗಳ ಎಲ್ಲಾ ರಂಗಗಳನ್ನು ಬಲಪಡಿಸಬೇಕಾಗಿದೆ. ಸಹಕಾರಿ ರಂಗದಲ್ಲಿ ಮಹಿಳಾ ಕ್ಷೇತ್ರ, ಕೈಗಾರಿಕಾ ಕ್ಷೇತ್ರ, ಮೀನುಗಾರಿಕಾ ಕ್ಷೇತ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇತ್ರಗಳನ್ನು ಹೆಚ್ಚು ಸಕ್ಷಮವಾಗಿ ಮತ್ತು ಪರಿಣಾಮಕಾರಿಯಾಗಿ ಬೆಳಸಬೇಕಾಗಿದೆ. ಇಂತಹ ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಒತ್ತು ನೀಡುವ ಮುಖಾಂತರ ಸಹಕಾರಿ ರಂಗವನ್ನು ಬಲಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳಲಿದೆ ಎಂದು ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಅವರು ಹೇಳಿದರು. ಅವರು ಪುತ್ತೂರು ಉಪವಿಭಾಗದ ಎಲ್ಲಾ ಸಹಕಾರಿ ಸಂಸ್ಥೆಗಳ ಮುಖ್ಯ ಕಾರ್ಯಾನಿರ್ವಹಣಾಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಹಕಾರಿ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಈ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಟೌನ್ ಕೋ-ಆಪರೇಟಿವ್ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನಹುಷಾ ಭಾಗವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕರಾದ ಶ್ರೀ ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ಶ್ರೀ ಶಿವರಾಮ ರೈ ಕೆದಂಬಾಡಿ ಉಪಸ್ಥಿತರಿದ್ದರು. ಯೂನಿಯನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸಾವಿತ್ರಿ ರೈ ಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English