ಮಂಗಳೂರು : ಮಂಗಳೂರು ಕರಾವಳಿ ಕಾವಲು ಪೋಲೀಸ್ ಠಾಣೆಯು ತಲಪಾಡಿ ಕಡಲ ತೀರದಿಂದ ಹೊಸಬೆಟ್ಟು ಗ್ರಾಮದ ವರೆಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು, ಹಲವಾರು ಅಪರಾಧ ಪ್ರಕರಣಗಳನ್ನು ದಾಖಲಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಸಮುದ್ರದಲ್ಲಿ 12 ನಾಟಿಕಲ್ ಮೈಲ್ ವ್ಯಾಪ್ತಿಯವರೆಗೆ ಇಲಾಖಾ ಬೋಟುಗಳಲ್ಲಿ ಅಹರ್ನಿಶಿಯಾಗಿ ಸಮುದ್ರ ಗಸ್ತು ಕರ್ತವ್ಯದೊಂದಿಗೆ ಅಕ್ರಮವಾಗಿ ಒಳನುಸುಳುವ ಅನುಮಾನಾಸ್ಪದ ಬೋಟುಗಳ ಚಲನವಲನಗಳನ್ನು ಭಯೋತ್ಪಾದಕರ ಬಗ್ಗೆ ನಿಗಾ ವಹಿಸುವ ಹಾಗೂ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಲುಕಿದ ಬೋಟು ಮತ್ತು ಮೀನುಗಾರರನ್ನು, ಜೀವ ಹಾನಿಯಾಗುವ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕರ್ತವ್ಯವನ್ನು ನಿರ್ವಹಿಸಲಾಗುತ್ತಿದೆ.
ಕರಾವಳಿ ಕಾವಲು ಪೋಲೀಸ್ ಠಾಣೆಗೆ ಉಚಿತ ಕರೆ ದೂರವಾಣಿ ಸಂಖ್ಯೆ 1093 ಸಾರ್ವಜನಿಕರ ಉಪಯೊಗಕ್ಕೆ ಅಳವಡಿಸಲಾಗಿದೆ. ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಹ ಭಯೋತ್ಪಾದಕ ಸಂಘಟನೆಯ ಸದಸ್ಯರ,ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಧಕ್ಕೆ ಉಂಟು ಮಾಡುವ ಹಾಗೂ ಇತರೆ ತುರ್ತು ಸಂದರ್ಭದಲ್ಲಿ ಮಾಹಿತಿಗಳ ಮುನ್ಸೂಚನೆಯನ್ನು ಸಾರ್ವಜನಿಕರಿಂದ ಪಡೆಯಲು,ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಹೊಂದುವ ಸಲುವಾಗಿ ಉಚಿತ ಕರೆ ದೂರವಾಣಿ ಸಂಖ್ಯೆ 1093 ನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
Click this button or press Ctrl+G to toggle between Kannada and English