ಗೋವಂಶ ರಕ್ಷಣೆಗೆ ಬಿಜೆಪಿ ಕಾರ್ಯಕರ್ತರ ಒಕ್ಕೊರಳ ಧ್ವನಿ

3:27 PM, Saturday, September 4th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಗೋ ಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಗೂ ಕಾಶ್ಮೀರಕ್ಕೆ ಸ್ವಾಯತ್ತತೆ ವಿರೋಧಿಸಿ, ಭಾರತೀಯ ಜನತಾಪಾರ್ಟಿ ವತಿಯಿಂದ ಪ್ರತಿಭಟನೆಯು ಇಂದು ಬೆಳಿಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಜರಗಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾನಾಡಿದ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ್ ಶೆಟ್ಟಿ ಸಂಸ್ಕಾರವನ್ನು ಉಳಿಸುವಂತಹ, ಭಾರತದ ಗೋಮಾತೆಯನ್ನು ರಕ್ಷಿಸುವ ಸ್ವಯಂ ಸೇವಕರು ನಾವು, ಪ್ರತಿಯೊಂದು ರಾಜ್ಯದ ರಾಜ್ಯಪಾಲರು ರಾಜ್ಯದ ಒಳಿತಿಗಾಗಿ, ಸುವ್ಯವಸ್ಥಿತ ರೀತಿಯಲ್ಲಿ ಶ್ರಮಿಸುತ್ತಾರೆ. ಆದರೆ ಇವತ್ತಿನ ರಾಜ್ಯಪಾಲರು ಕಾಂಗ್ರೆಸ್ ಏಜೆಂಟರ್ ಆಗಿ ಕೆಲಸ ಮಾಡುತ್ತಾ ಇದ್ದಾರೆ, ನಿರಂತರಾಗಿ ಗೋಹತ್ಯೆ ನಿಷೇಧ ಬಗ್ಗೆ ಹೋರಾಟ ನಡೆಯುತ್ತಾ ಇದೆ. ಸ್ವಾತಂತ್ರ್ಯ ಪೂರ್ವದಲ್ಲೂ ಹೋರಾಟ ನಡೆದಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗೋ ಹತ್ಯೆಗೆ ಸಮ್ಮತಿ ಸೂಚಿಸಿದ್ದಾರೆ. 60-70% ಹಿಂದುಗಳಿರುವ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬರಬೇಕು ಎಂದು ನಾಗರಾಜ್ ಶೆಟ್ಟಿ ತಿಳಿಸಿದರು.


ನೆಹರುರವರ ಅಧಿಕಾರದ ದಾಹದಿಂದಾಗಿ ದೇಶ ತುಂಡಾಯಿತು. ಜಿನ್ನ ಕಂಡ ಕನಸನ್ನು ನನಸು ಮಾಡಲು ಕಾಶ್ಮೀರ ಪ್ರಯತ್ನ ಮಾಡುತ್ತಿದೆ. ಭಾರತವನ್ನು ಆರಾಧಿಸುವ ಜನ ನಾವು ದೇಶವನ್ನು ತುಂಡು ತುಂಡು ಮಾಡೋ ಸಂದರ್ಭದಲ್ಲಿ ಭಾರತದ ವಿಶಾಲತೆಯನ್ನು ವಿವರಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಕಾಶ್ಮೀರ ಉಳಿಸುವ ಹಕ್ಕು ನಮ್ಮದು ಎಂದು ನಾವು ಕಾಂಗ್ರೆಸ್ ಸರಕಾರದ ಮೇಲೆ ಒತ್ತಾಯ ಹಾಕುತ್ತಿದ್ದೇವೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಗೋವು ಭಾರತದಲ್ಲಿ ಎಲ್ಲರಿಗೂ ತಾಯಿ ಇದ್ದಂತೆ ಆದ್ದರಿಂದ ಹುಟ್ಟಿನಿಂದ ಸಾವಿನವರೆಗೂ ಅವಳು ನಮ್ಮೊಂದಿಗೆ ಇರುತ್ತಾಳೆ. ಶಾಮ್ ಮುಖರ್ಜಿ ಅವರು ಹೋರಾಡಿದ ಫಲವಾಗಿ ಕಾಶ್ಮೀರ ಇಂದಿಗೂ ಭಾರತದ ಸ್ವತ್ತಾಗಿದೆ. ಜಮ್ಮು ಕಾಶ್ಮೀರದಲ್ಲಿ ಗೋ ಹತ್ಯೆ ನಿಷೇಧವಾಗಿದೆ. ಇಲ್ಲಿ ಯಾಕೆ ಸಾಧ್ಯವಿಲ್ಲ. ರಾಜಕೀಯ ಮಾಡುವ ರಾಜ್ಯಪಾಲರು ನಮಗೆ ಬೇಡ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.


ಗೋವು ದೇಶದ ಸಂಪತ್ತು. ಗೋ ನಿಷೇಧಕ್ಕೆ ಎರಡೂ ಸದನದಲ್ಲಿ ಸಮ್ಮತಿ ಸೂಚಿಸಿದರು. ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು. ಆದರೆ ಕಾಂಗ್ರೆಸ್ ಮತ್ತು ಜೆ.ಡಿಎಸ್ ಪಕ್ಷಗಳಿಗೆ ಸಮಾನ ಅವಕಾಶ ಬೇಡ, ಪ್ರತ್ಯೇಕ ಅವಕಾಶ ಬೇಕು. ಎಂಬುದು ನಾಚಿಕೆಗೇಡು. ಜಿಲ್ಲೆಯ 5 ತಾಲೂಕಿನಲ್ಲಿ ಹೋರಾಟ ನಡೆಯುತ್ತಿದೆ. ಭಾರತೀಯ ಜನತಾ ಪಾರ್ಟಿಯವರು ಪ್ರಾಣ ನೀಡಲು ಸಿದ್ದರಿರುವುದೆಂದು ಬಿ.ಜೆ.ಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದರು.


ಯೋಗೀಶ್ ಭಟ್, ರೈತ ಮೋರ್ಚಾ ಅಧ್ಯಕ್ಷ ಸಂಕಪ್ಪ ಗೌಡ, ಯುವ ಮೋರ್ಚಾ ಅಧ್ಯಕ್ಷ ಭರತ್ ಶೆಟ್ಟಿ, ಫ್ರಾಂಕ್ಲಿನ್. ಮೊಂತೆರೋ, ದೇವದಾಸ್ ಶೆಟ್ಟಿ, ಚಂದ್ರಹಾಸ್ ಉಳ್ಳಾಲ್, ರುಕ್ಮಯ್ ನಾಯಕ್, ನಿತಿನ್ ಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English