ಕೆಕ್ಕಾರು : ನಮ್ಮ ಬದುಕು ಸ್ಥಿರವಲ್ಲ, ಶಾಶ್ವತವಲ್ಲ. ಅದು ಕಮಲದ ಎಲೆಯ ಮೇಲಿನ ಬಿಂದುವಿನಂತೆ. ಕಮಲದ ಎಲೆಯಮೇಲೆ ಹೇಗೆ ನೀರಿನ ಬಿಂದು ಹೊಳೆಯುತ್ತದೆಯೋ ಹಾಗೆ ನಮ್ಮ ಬದುಕು ಕೂಡ ಹೊಳಪುಳ್ಳದ್ದು ಎಂದು ಭಾವಿಸುತ್ತೇವೆ. ಆದರೆ ಅದು ಸತ್ಯವಲ್ಲ; ಮಿಥ್ಯೆ. ಲೋಕ- ಶೋಕ ಅಕ್ಷರದಲ್ಲಿ ಮಾತ್ರ ವ್ಯತ್ಯಾಸ. ಆದರೆ ಅರ್ಥದಲ್ಲಿ ವ್ಯತ್ಯಾಸವಿಲ್ಲ. ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸು ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಿಳಿಸಿದರು.
ಈ ದಿನ ಹರಿಕಂತ್ರ ಸಮಾಜದವರು ವಿಶೇಷ ಸವೆ ಸಲ್ಲಿಸಿ, ಸಮಾಜದ ಉನ್ನತಿಗಾಗಿ ಪಾರ್ಥಿಸಿ ವಿಶೇಷಯಾಗ ನಡೆಸಿದರು. ಹರಿಕಂತ್ರ ಸಮಾಜದವರಿಗೆ ಆಶಿರ್ವದಿಸುತ್ತಾ ಮಾತನಾಡಿದ ಶ್ರೀಗಳು ಸಮಾಜದಲ್ಲಿ ಸಾತ್ವಿಕತೆ ನೆಲೆಗೊಳ್ಳಲಿ, ದೇವ ಹಾಗೂ ಗುರುಭಕ್ತಿ ಸಮಾಜದ ಪ್ರತಿಯೊಬ್ಬರಲ್ಲಿ ವೃದ್ಧಿಗೊಳ್ಳಲಿ, ಸಮಾಜದ ಸರ್ವರಿಗೂ ಶ್ರೇಯಸ್ಸುಂಟಾಗಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ಸುಮಾರು 400ಕ್ಕಿಂತಲೂ ಹೆಚ್ಚು ಹರಿಕಾಂತ ಸಮಾಜ ಬಾಂಧವರು ಶ್ರೀಗಳಿಂದ ವಿಶೇಷ ಅನುಗ್ರಹ ಪಡೆದರು.
ಶ್ರೀಗಳವರ 39 ನೇ ವರ್ಧಂತ್ಯುತ್ಸವದ ನಿಮಿತ್ತ ಶ್ರೀಗಳವರಿಗೆ ಭಕ್ತಾದಿಗಳು 39 ಕಲ್ಪವೃಕ್ಷ 39 ದೀಪ ಹಾಗೂ ಹೂವಿನ ಹಾಸಿನ ಸ್ವಾಗತ ನೀಡಿದ್ದು ಎಲ್ಲರ ಗಮನಸೆಳೆಯಿತು. ಭಾರತಿ ಪ್ರಕಾಶನದಿಂದ ಮುದ್ರಣಗೊಂಡ ವಿದ್ವಾನ್ ನರಸಿಂಹ ಭಟ್ಟ ಬಡಗು ರಚಿಸಿದ ಶ್ರೀ ತ್ರೋಟಕಾಚಾರ್ಯ ಎನ್ನುವ ಗ್ರಂಥವನ್ನು ಶ್ರೀಗಳವರು ಲೋಕಾರ್ಪಣೆ ಗೊಳಿಸಿದರು. ಇಂದನ ಪುಸ್ತಕ ಪ್ರಾಯೋಜಕರಾದ ಶ್ರೀ ಆರ್. ಎಸ್. ಭಾಗ್ವತ್, ದಂಪತಿಗಳು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಕುಮಟಾದಲ್ಲಿ ನಡೆದ ಜನಜನನಿ ಕಾರ್ಯಕ್ರಮದ ಮುದ್ರಿತ ಪ್ರತಿ ನಂದಿನಿ ಸಿ.ಡಿ. ಯನ್ನು ಶ್ರೀ ಹೊರನಾಡು ಶ್ರೀಕ್ಷೇತ್ರದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿಯವರು ಲೋಕಾರ್ಪಣೆಗೊಳಿಸಿದರು.
ಶ್ರೀಗಳವರ 39 ನೇ ವರ್ಧಂತ್ಯುತ್ಸವದ ಸವಿನೆನಪಿಗಾಗಿ ಒಂದು ಲಕ್ಷ ರೂವನ್ನು ಕೋಲ್ಕತ್ತಾದ ಶ್ರೀಮತಿ ಉಷಾ ಅಗರವಾಲ್ ಶ್ರೀ ಮಠದ ಸಹಾಯ ನಿಧಿಗೆ ನೀಡಿದರು. ಶ್ರೀ ಅನಂತರಾಮ ಕುಟುಂಬದವರು ಚಾತುರ್ಮಾಸ್ಯಕ್ಕಾಗಿ ವಿಶೇಷ ಕಾಣಿಕೆ ಹಾಗೂ ಸುವಸ್ತುವನ್ನು ಸಮರ್ಪಸಿದರು. ಗುರುಭಕ್ತರ ಸಹಕಾರದೊಂದಿಗೆ ಕುಮಾರಿ ವರ್ಷಾ ದಿನೇಶ ಭಂಡಾರಿ ಇವರಿಗೆ ಸಹಾಯ ನಿಧಿಯಿಂದ ಸಹಾಯವನ್ನು ನೀಡಲಾಯಿತು. ಶ್ರೀ ಆಂಜನೆಯನ ಸನ್ನಿಧಿಯಲ್ಲಿ ಸಂಕಲ್ಪಿತವಾದ ಎಂಟು ದಿನದ ಕಣಜ ಹಾಗೂ ಅಖಂಡ ಭಜನಾಸೇವೆಯಲ್ಲಿ ಪ್ರಥಮ ದಿನವಾದ ಇಂದು ಕುಮಟಾ ಮಂಡಲದಿಂದ ಬಾಳೆ ಹಣ್ಣಿನ ಕಣಜ ಸೇವೆ ನಡೆಯಿತು. ಶ್ರೀ ರವೀಂದ್ರ ಭಟ್ಟ ಸೂರಿ ಪುಸ್ತಕ ಹಾಗೂ ಲೇಖಕರ ಪರಿಚಯದೊಂದಿಗೆ ನಿರ್ವಹಿಸಿದರು.
Click this button or press Ctrl+G to toggle between Kannada and English