ಮಂಗಳೂರು: ಆ ಪುಟ್ಟ ಬಾಲಕನ ಪ್ರತಿಯೊಂದು ಕೆಲಸಕ್ಕೂ ಅಮ್ಮನ ನೆರವು ಬೇಕು. ಬಾಲ್ಯದ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕಾದ ಆತನಿಗೆ ಭಗವಂತ ಆ ಭಾಗ್ಯ ಕರುಣಿಸಿಲ್ಲ. ತನ್ನೆರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿರುವ ಆ ಪುಟ್ಟ ಬಾಲಕನಿಗೆ ಈಗ ಅಮ್ಮನೇ ಎಲ್ಲ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬಲ್ಲಿನ ಸುಧಾಕರ ಆಚಾರ್ಯ ಮತ್ತು ತನುಜ ದಂಪತಿಯ ಪುತ್ರ ಹತ್ತರ ಹರೆಯದ ಸುಶಾಂತನ ನೋವಿನ ಕಥೆಯಿದು. ಎಲ್ಲರಂತೆ ಖುಷಿಯಿಂದ ನಲಿದಾಡುತ್ತಾ ಶಾಲೆಗೆ ತೆರಳಬೇಕಿದ್ದ ಈತ ಕಳೆದ ನಾಲ್ಕು ವರ್ಷಗಳಿಂದ ನಡೆದಾಡುವ ಚೈತನ್ಯವನ್ನು ಕಳೆದುಕೊಂಡು ಮನೆಯ ನಾಲ್ಕು ಗೋಡೆಗಳ ನಡುವೆ ದಿನಕಳೆಯುತ್ತಿದ್ದಾನೆ.
ಬಡ ಕುಟುಂಬ
ಸೂಕ್ತ ಚಿಕಿತ್ಸೆ ನೀಡಿ ಗುಣಮುಖವಾಗಿಸುವ ಶಕ್ತಿ ಆ ಬಡ ಕುಟುಂಬಕ್ಕೂ ಇಲ್ಲ. ಕೂಲಿ ಕೆಲಸ ಮಾಡಿಕೊಂಡಿರುವ ಸುಧಾಕರ ಆಚಾರ್ಯ ದಂಪತಿ ಮಗುವಿನ ಚಿಕಿತ್ಸೆಗಾಗಿ ಹಲವು ಕಡೆ ಓಡಾಡಿ ಇದ್ದ ಹಣ ವ್ಯಯಿಸಿದೆ.ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಆತನಿಗೆ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲು ಮುಂದಾಗಿರುವ ಕುಟುಂಬ ಚಿಕಿತ್ಸೆಗಾಗಿ ದಾನಿಗಳ ನೆರವಿಗಾಗಿ ಕಾಯುತ್ತಿದೆ.
`ಸುಶಾಂತ್ ಗೆ ಆರು ವರ್ಷದವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಒಮ್ಮೆ ಶಾಲೆಯಲ್ಲಿ ಬಿದ್ದು, ಬಳಿಕ ಎರಡೂ ಕಾಲು ಹಾಗೂ ಸೊಂಟದ ಬಲವನ್ನು ಕಳಕೊಂಡಿದ್ದಾನೆ. ಇದ್ದ ಹಣದಲ್ಲಿ ಸಾಧ್ಯವಾದಷ್ಟು ಚಿಕಿತ್ಸೆ ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಆತನಿಗೆ ದೊಡ್ಡ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ಗುಣ ಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಅಷ್ಟು ಹಣ ನಮ್ಮಲ್ಲಿಲ್ಲ ಎಂದು ತಮ್ಮ ಬವಣೆ ತೋಡಿಕೊಳ್ಳುತ್ತಾರೆ ತಾಯಿ ತನುಜ. ಇದರೊಂದಿಗೆ ಅವರು ದಾನಿಗಳ ನೆರವನ್ನೂ ಕೋರಿದ್ದಾರೆ.
ಬಾಲಕ ಸುಶಾಂತನ ಚಿಕಿತ್ಸೆಗೆ ನೆರವು ನೀಡಲು ಬಯಸುವ ದಾನಿಗಳು ತನುಜ ಅವರ ಪಳ್ಳಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 01942230001600 (ifsc ಸಂಖ್ಯೆ-synb 0000194). ಮೊಬೈಲ್ 9972371547.
Click this button or press Ctrl+G to toggle between Kannada and English