ದೇಹದ ಪವಿತ್ರೀಕರಣಕ್ಕೆ ಮುದ್ರಾಧಾರಣೆ ರಾಮಬಾಣ-ವಿಶ್ವಪ್ರಸನ್ನಶ್ರೀ

11:56 PM, Thursday, August 7th, 2014
Share
1 Star2 Stars3 Stars4 Stars5 Stars
(5 rating, 5 votes)
Loading...
Mudradharane

ಮುಂಬಯಿ : ಶಂಖ ಚಕ್ರಗಳು ಭಗವಂತನ ಶ್ರೀಮಾನ್ ನಾರಾಯಣರ ಚಿಹ್ನೆಗಳು. ಅದನ್ನು ನಾವು ಪವಿತ್ರವಾಗಿರತಕ್ಕಂತಹ ಆಗ್ನಿಯಲ್ಲಿ ಸುದರ್ಶನ ಮಂತ್ರದಿಂದ ಆಗ್ನಿಯಲ್ಲಿ ಬಿಸಿಮಾಡಿ ಮೈ ಮೇಲೆ ಧಾರಣೆ ಮಾಡಿಕೊಳ್ಳಬೇಕು ಎಂದು ಶಾಸ್ತ್ರ ವಚನವಿದೆ. ವರ್ಷಕ್ಕೊಮ್ಮೆಯಾದರೂ ಇದನ್ನು ಮಾಡಿಸಿ ಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನ ಸೇವೆಗೋಸ್ಕರ ಮುಡಿಪು ಅನ್ನುವ ಭಾವನೆಯನ್ನು ಮನದಲ್ಲಿ ತುಂಬಿಕೊಂಡು ದೇಹವನ್ನೇ ಪಾವಿತ್ರೀಕರಣ ಗೊಳಿಸಿಕೊಳ್ಳುವುದು ಉದ್ದೇಶವಾಗಿದೆ. ಸರ್ವೊತ್ತಮನಾಗಿರತಕ್ಕಂತಹ ಭಗವಂತನ ಮುದ್ರೆಯನ್ನು ಮೈಮೇಲೆ ಧಾರಣೆ ಮಾಡಿಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನಿಗೆ ಸಮರ್ಪಿಸಿದ್ದೇವೆ ಎನ್ನುವುದಾದರೆ ಮತ್ತೊಂದೆಡೆ ಇತರೇ ಯಾವುದೇ ಶುದ್ರ ಭೂತಪ್ರೇತ, ಪಿಶಾಶಿಗಳ ಹಿಡಿಯೂ ಕೂಡಾ ನಮ್ಮ ಮೈಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ಸರಕಾರದ ಮುದ್ರೆಯುಳ್ಳ ಒಂದು ಸೊತ್ತನ್ನು ಇನ್ನು ಯಾರೂ ಕೂಡಾ ಮುಟ್ಟಲು ಸಾಧ್ಯವಿಲ್ಲವೋ ಅದರಂತೆ ಭಗವಂತನ ಮುದ್ರೆ ಬಿದ್ದಿರುವ ಯಾವ ದೇಹವೂ ದುಷ್ಟಶಕ್ತಿಗೆ ತುತ್ತಾಗುವುದಿಲ್ಲ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.

ಸರ್ವೆಕಾದಾಶೀ ಪವಿತ್ರಾರೋಪಿಣೀ ಏಕಾದಶಿ ದಿನವಾದ ಇಂದು ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಅಲ್ಲಿನ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ತಾಪ್ತ ಮುದ್ರಾಧಾರಣೆ ಕಾರ್ಯಕ್ರಮ ನಡೆಸಲ್ಪಟ್ಟಿದ್ದು, ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಶ್ರೀಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನೆರೆದ ಸಮಸ್ತ ಭಕ್ತಾಭಿಮಾನಿಗಳಿಗೆ ತಾಪ್ತ ಮುದ್ರಾಧಾರಣೆ ನಡೆಸಿದ ನಂತರ ವಿಶ್ವಪ್ರಸನ್ನತೀರ್ಥರು ತಿಳಿಸಿದರು.

ಸದ್ಭಕ್ತರಿಗೆ ತಾಪ್ತ ಮುದ್ರಾಧಾರಣೆಗೈದು ಕಲ್ಲುಸಕ್ಕರೆಯನ್ನೀಡಿ ಆಶಿರ್ವಚಿಸಿದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ ಮುದ್ರಾಧಾರಣ ವೈಷ್ಣವ ಭಕ್ತಿಯ ವಿಧಿವಾಗಿದೆ. ನಮ್ಮ ಜೀವನ ವಿಷ್ಣುಸೇವೆಗೆ ಅರ್ಪಿಸಿ ಕೊಂಡು ದೇವರ ಭಾವನೆಗೆ ತಕ್ಕಂತೆ ಬಾಳುವುದನ್ನು ಪ್ರೇರೆಪಿಸುವ ವಿಧಾನವೂ ಹೌದು. ಸದಾ ದೇವರನ್ನು ಮರೆಯದೆ ಉತ್ತಮವಾದ ಬದುಕನ್ನು ರೂಪಿಸಲು ಜೀವನವನ್ನು ಚೌಕಟ್ಟಿನ ಒಳಗೆ ಮೀಸಲಿಡುವುದಕ್ಕಾಗಿ ತಮ್ಮ ದೇಹದಲ್ಲಿ ಅಚ್ಚುಪಡಿಸಿ ಕೊಳ್ಳುವ ವಿಧಾನ ಮುದ್ರಾಧಾರಣ. ಇದರಿಂದ ಮಾನವ ಕುಲದ ಉನ್ನತಿ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಚಾತುರ್ಮಾಸ್ಯ ಸ್ವಾಗತ ಸಮಿತಿ ಕಾರ್ಯನಿರತ ಅಧ್ಯಕ್ಷ ಡಾ| ಎಂ.ಎಸ್.ಆಳ್ವ, ಗೌರವ ಕಾರ್ಯದರ್ಶಿಗಳಾದ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಖಜಾಂಜಿ ಅವಿನಾಶ್ ಶಾಸ್ತ್ರಿ, ಜತೆ ಕಾರ್ಯದರ್ಶಿ ರಾಮಕುಂಜ ಪ್ರಕಾಶ್ ಆಚಾರ್ಯ, ವಿಜಯಲಕ್ಷ್ಮೀ ಸುರೇಶ್ ರಾವ್ ಕಟೀಲು, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಧಾನ ವ್ಯವಸ್ಥಾಪಕ ರಾಮದಾಸ ಉಪಧ್ಯಾಯ, ಶ್ರೀಹರಿ ಭಟ್ ಮತ್ತು ನಿರಂಜನ್ ಗೋಪ್ಟೆ (ಪೇಜಾವರ ಮಠ),, ವಿಷ್ಣು ಕಾರಂತ್ ಮತ್ತು ಶ್ರೀಪ್ರಸಾದ್ ಭಟ್ ಚೆಂಬೂರು (ಸುಬ್ರಹ್ಮಣ್ಯ ಮಠ), ರಾಜೇಶ್ ರಾವ್ (ಅದಮಾರು ಮಠ), ಗೋವಿಂದ ಭಟ್, ಐರೋಲಿ ಹರಿದಾಸ ಭಟ್ ಮತ್ತಿತರರು ಹಾಜರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English