ಮುಂಬಯಿ ಬಿಲ್ಲವರ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅಯ್ಕೆ

9:26 PM, Saturday, August 9th, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Billava Mumbai

ಮುಂಬಯಿ: ನಗರದ ಹಿರಿಯ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಆಯ್ಕೆಯಾದರು.
ಕಳೆದ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಜರಗಿದ ಬಿಲ್ಲವರ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆಸಲಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿತ್ಯಾನಂದ ಡಿ.ಕೋಟ್ಯಾನ್ ನೂತನ ಅಧ್ಯಕ್ಷರಾಗಿ, ಜ್ಯೋತಿ ಕೆ.ಸುವರ್ಣ ಅವರು ಉಪಾಧ್ಯಕ್ಷ, ಡಾ| (ನ್ಯಾಯವಾದಿ) ಯು. ಧನಂಜಯ ಕುಮಾರ್ ಅವರು ನೂತನ ಗೌರವ ಪ್ರಧಾನ ಕಾರ್ಯ ದರ್ಶಿ ಆಗಿ ಆಯ್ಕೆಯಾದರು.

ಕಳೆದ 23 ವರ್ಷಗಳಿಂದ ಬಿಲ್ಲವರ ಎಸೋಸಿಯೇಶನಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದ ನಿತ್ಯಾನಂದ ಡಿ. ಕೋಟ್ಯಾನ್ ಪ್ರಾರಂಭದಲ್ಲಿ ಅಸೋಸಿಯೇಶನ್ನ ಜತೆ ಕೋಶಾಧಿಕಾರಿಯಾಗಿ, ಗೌರವ ಪ್ರಧಾನ ಕಾರ್ಯ ದರ್ಶಿ ಆಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಅಸೋಸಿಯೇಶನ್ನ ಸಂಚಾಲಕತ್ವದ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಪಥಸಂಸ್ಥೆಯಲ್ಲಿ ಸುಮಾರು ಎರಡುವರೆ ದಶಕಗಳಲ್ಲಿ ವಿವಿಧ ಹುದ್ದೆಗಳೊಂದಿಗೆ ಸೇವಾ ನಿರತ ನಿತ್ಯಾನಂದ್ ಇತ್ತೀಚೆಗಷ್ಟೇ ಭಾರತ್ ಬ್ಯಾಂಕ್ನ ಮಹಾ ಪ್ರಬಂಧಕರಾಗಿ ನೇಮಕಗೊಂಡಿರುವರು. ಮೂಲತಃ ಉಡುಪಿ ಜಿಲ್ಲೆಯ ತೋನ್ಸೆ ಅಲ್ಲಿನ ನಿತ್ಯಾನಂದ್ ಅವರು ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮವತೀ ಗರೋಡಿ ಮುಂಬಯಿ ಸಮಿತಿ ಇದರ ಅಧ್ಯಕ್ಷರಾಗಿ ಶ್ರಮಿಸುತ್ತಿದ್ದಾರೆ.

ಕಳೆದ 14 ವರ್ಷಗಳಿಂದ ಬಿಲ್ಲವರ ಅಸೋಸಿಯೇಶನಿನಲ್ಲಿ ವಿವಿಧ ಹುದ್ದೆಯಲ್ಲಿ ಅನುಭವ ಪಡೆದಿರುವ ಡಾ| ಯು. ಧನಂಜಯ ಕುಮಾರ್ ಅವರು ಅಸೋಸಿಯೇಶನಿನ ನೂತನ ಗೌ| ಪ್ರ| ಕಾರ್ಯದರ್ಶಿ ಯಾಗಿ ಆಯ್ಕೆಯಾಗಿದ್ದಾರೆ. ಮಂಗಳೂರು ಉಳ್ಳಾಲ ಮೂಲತಃ ಧನಂಜಯ ಕುಮಾರ್ ಕಾನೂನು ವಿದ್ಯಾಭ್ಯಾಸದಲ್ಲಿ ಡಾಕ್ಟರೇಟ್ ಮಾಡಿರುವರು. ಪ್ರಾರಂಭದಲ್ಲಿ ಮುಂಬಯಿಯ ಮಜ್ಹಗಾಂವ್ ಡಾಕ್ನಲ್ಲಿ ಸೇವೆ ಸಲ್ಲಿಸಿ ನಂತರ ಮೂರು ವರ್ಷ ವಕೀಲ ವೃತ್ತಿಯಲ್ಲೂ ಶ್ರಮಿಸಿದ್ದಾರೆ. ಕಳೆದ 17 ವರ್ಷಗಳಿಂದ ಭಾರತ್ ಬ್ಯಾಂಕ್ನಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಲ್ಲವರ ಎಸೋಸಿಯೇಶನಿನ ನಿರ್ಗಮನ ಗೌ| ಪ್ರ| ಕಾರ್ಯ ದರ್ಶಿ ಜ್ಯೋತಿ ಕೆ.ಸುವರ್ಣರು ಇದೀಗ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವರು. ಇವರು ಬಿಲ್ಲವರ ಎಸೋಸಿಯೇಶನಿನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English