ಬೆಂಗಳೂರು : ಸ್ವ-ಸಹಾಯ ಸಂಘಗಳನ್ನುಕಟ್ಟಿಕೊಳ್ಳುವ ಮೂಲಕ ಸ್ವಶಕ್ತಿಯಿಂದ ಬದುಕುವ ಕಲೆ ರೂಪಿಸಿಕೊಂಡು ಪ್ರಗತಿ ಹೊಂದಬೇಕು ಹಾಗೂ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ||ವಿರೇಂದ್ರ ಹೆಗ್ಗಡೆಯವರು ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿನ ಟಿ.ದಾಸರಹಳ್ಳಿ ಸಮೀಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯರ ಏಕಾಗ್ರತೆ ಇರುವುದು ಸುಖಶಾಂತಿ,ನೆಮ್ಮದಿಗಾಗಿ ಮಾತ್ರ ನಿತ್ಯ ದೇವರನ್ನು ಸಾಂಪ್ರದಾಯಿಕ ವಿಧಿವಿಧಾನಗಳಿಂದ ಸಮಸ್ಯೆ ಪರಿಹರಿಸುವಂತೆ ಬೇಡಿದರೆ ಸಾಕಾಗುವುದಿಲ್ಲ. ಮಾನವನ ಪ್ರಯತ್ನವು ಬೇಕಾಗುತ್ತದೆ. ಮನುಷ್ಯ ವ್ಯವಸ್ಥಿತ ಬದುಕು ರೂಪಿಸಿಕೊಳ್ಳಲು ಅಗತ್ಯ ಮೂಲ ಸೌಲಭ್ಯ ರಕ್ಷಣೆ ನೀಡುವುದಷ್ಠೆ ಸರ್ಕಾರದ ಕರ್ತವ್ಯ. ಆದರೆ ಪ್ರಜೆಗಳು ವ್ಯವಸ್ಥಿತವಾಗಿ ಪ್ರಭುಗಳಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ, ಹೀಗಾಗಿ ಸ್ವಸಹಾಯ ಸಂಘಗಳ ಮೂಲಕ ಹಣ ಉಳಿತಾಯ ಹಾಗೂ ಸಂಘಟನೆಗೆ ಮಹಿಳೆಯರು ಮುಂದಾಗಬೇಕು ಎಂದು ಕರೆನೀಡಿದರು.
ನೂತನವಾಗಿ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಗೆ ಬರುವ ರಾಮನಗರ,ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯೋಜನೆ ವಿಸ್ತರಣೆ ಗೊಂಡಿದ್ದು ಈ ಭಾಗದ ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ, 10 ಜನರು ಸೇರಿ ಉಳಿತಾಯದ ಮೂಲಕ ಸ್ವಾವಲಂಬಿಗಳಾಗಿ ಎಂದು ತಿಳಿಸಿದರು. ಸ್ವಸಹಾಯ ಸಂಘ ಮತ್ತು ಬ್ಯಾಂಕುಗಳಿಗೆ ನೇರ ಸಂಪರ್ಕ ಕಲ್ಪಿಸಿಕೊಡಲಾಗುವುದು. ಈ ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ 42000 ಸ್ವ-ಸಹಾಯ ಪ್ರಗತಿಬಂಧು ಸಂಘಗಳನ್ನು ಪ್ರಾರಂಭಿಸಿ 4 ಲಕ್ಷ ಜನರನ್ನು ಯೋಜನೆಯ ಕಾರ್ಯಕ್ರಮದಲ್ಲಿ ಪಾಲುದಾರರನ್ನಾಗಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ದಾಸರಹಳ್ಳಿ ಶಾಸಕರಾದ ಶ್ರೀಮುನಿರಾಜು ಮಾತನಾಡಿ ಮಹತ್ಮಾಗಾಂಧಿ ಕನಸು ನನಸು ಮಾಡುವ ಕಾರ್ಯಕ್ರಮ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಹಮ್ಮಿಕೊಂಡಿದೆ.ನಮ್ಮ ಕ್ಷೇತ್ರಕ್ಕೆ ಪೂಜ್ಯರು ಆಗಮಿಸಿದ್ದು ಸಂತೋಷ ತಂದಿದೆ. ನಮ್ಮಿಂದ ಎಲ್ಲಾ ಸಹಕಾರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶ್ರೀ ಬಿ.ಆರ್. ಚಂದ್ರಶೇಖರ್ ಬಿ.ಬಿ.ಎಂ.ಪಿ ಸದಸ್ಯರು, ಸೌಂದರ್ಯ ವಿಧ್ಯಾ ಸಂಸ್ಥೆಯ ಸಂಸ್ಥಾಪಕ ಸೌಂದರ್ಯ ಮಂಜಪ್ಪ, ಮಾಜಿ ಮೇಯರ್ ಶಾರದಮ್ಮ,ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಆನಂದ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರರನ್ನು ಸ್ವಾಗತಿಸಿದರು.
ಸುರೇಶ್ ಮೊಗೆರೊಡಿ ಹಾಗೂ ಹರಿಪ್ರಸಾದ್ ರವರು ನಿರೂಪಿಸಿದರು, ಕಾರ್ಯಕ್ರಮವು ಶ್ರೀ ರಾಧಾಕೃಷ್ಣರಾವ್ ರವರ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು.
Click this button or press Ctrl+G to toggle between Kannada and English