ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ

8:38 PM, Sunday, August 24th, 2014
Share
1 Star2 Stars3 Stars4 Stars5 Stars
(4 rating, 6 votes)
Loading...
Roshani Nilaya

ಮಂಗಳೂರು : ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನ ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ ಎಂದು ರೋಶನಿ ನಿಲಯದಲ್ಲಿ ನಡೆದ ಸಮಾಜ ಕಾರ್ಯ ಮತ್ತು ಶಿಕ್ಷಣಕ್ಕೆ ಸಂಭಂಧಪಟ್ಟ ವಿಚಾರಗೋಷ್ಠಿಯಲ್ಲಿ ಸಮಾಜ ಕಾರ್ಯ ವಿಧ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಡಿ ಸಂಸ್ಥೆ ಹಾಗೂ ರೋಶನಿ ನಿಲಯ ಸಹಭಾಗಿತ್ವದಲ್ಲಿ ಆಯೋಜಿಸಿದ ಎಂ.ಎಸ್.ಡಬ್ಲು ಕ್ಷೇತ್ರ ಅಧ್ಯಯನದ ಪೂರ್ವಸಿದ್ದತಾ ಕಾರ್ಯಕ್ರಮವನ್ನು ಆಗಸ್ಟ್ 24 ರಂದು ನಡೆಸಲಾದ ಸಂದರ್ಭದಲ್ಲಿ ಫ್ರೊಫೆಸರ್ ರೀಟಾ ನರೋನ್ಹಾ ರವರು ಭಾಗವಹಿಸಿ, ಸಮಾಜ ಕಾರ್ಯ ಅಧ್ಯಯನಕ್ಕೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ವಿಧ್ಯಾರ್ಥಗಳು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಳೆದ 3 ವರ್ಷಗಳಿಂದ ಕ್ಷೇತ್ರ ಕಾರ್ಯ ಅಧ್ಯನವನ್ನು ಮಾಡುತ್ತಿರುವ ವಿಧ್ಯಾರ್ಥಿಗಳನ್ನು ಇಟ್ಟುಕೊಂಡು ಸಮಾಜ ಕಾರ್ಯ ಶಿಕ್ಷಣವನ್ನು ಒತ್ತಾಯಿಸುವ ನಿಟ್ಟಿನಲ್ಲಿ ನೋಡುವ ದೃಷ್ಟಿಯಿಂದ ಹಮ್ಮಿಕೊಂಡ ಕಾರ್ಯ ಕ್ಷೇತ್ರ ಅಧ್ಯಯನದ ಈ ವಿಚಾರಗೋಷ್ಠಿಯಲ್ಲಿ 11 ಕಾಲೇಜಿನ ಸಮಾಜ ಕಾರ್ಯ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಪಡಿ ಸಂಸ್ಥೆಯ ಅಧ್ಯಕ್ಷರಾದ ಜಯಂತ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಮತ್ತು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಸಂತ ಅಲೋಶಿಯಸ್ ಕಾಲೇಜಿನ ಸಮಾಜ ಕಾರ್ಯ ಅಧ್ಯಯನ ವಿಭಾಗದ ಹಿರಿಯ ಉಪನ್ಯಾಸಕರಾದ ಜೆರಾಲ್ಡ್ ಡಿಸಿಲ್ವಾ ರವರು ಕ್ಷೇತ್ರ ಕಾರ್ಯ ಅಧ್ಯಯನ ಹಾಗೂ ಅದರ ಸಿಧ್ದಾಂತಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಳೆದ ವರ್ಷ ಪಡಿ ಸಂಸ್ಥೆಯಲ್ಲಿ ವಿವಿಧ ಕಾಲೇಜಿನ ವಿಧ್ಯಾರ್ಥಿಗಳು ಯಶಶ್ವಿಯಾಗಿ ಪೂರ್ಣಗೊಳಿಸಿದ ಕಾರ್ಯ ಕ್ಷೇತ್ರ ಅಧ್ಯಯನಕ್ಕಾಗಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು, ಕಾರ್ಯಕ್ರಮದ ಸ್ವಾಗತ ಭಾಷಣ ಮತ್ತು ಪ್ರಸ್ತಾವನೆಯನ್ನು ಪಡಿ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿಸೋಜರವರು ಮಾಡಿದರು, ಧನ್ಯವಾದ ಸಮರ್ಪಣೆಯನ್ನು ದಿನಕರ ರವರು ಮಾಡಿದರು ಪಡಿ ಸಂಸ್ಥೆಯ ತರಬೇತಿ ಸಂಯೋಜಕರಾದ ಜಯಂತಿಯವರು ಕಾರ್ಯಕ್ರಮವನ್ನು ನಿರೂಪಿಸದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English