ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆ “ನೃತ್ಯೋತ್ಸವ” ಉದ್ಘಾಟನೆ

12:32 AM, Tuesday, September 16th, 2014
Share
1 Star2 Stars3 Stars4 Stars5 Stars
(5 rating, 4 votes)
Loading...

Dance

ಮಂಗಳೂರು : ವಿದ್ಯಾರ್ಥಿ ಸಾಂಸ್ಕೃತಿಕ ಹಬ್ಬಗಳು ಯುವಜನತೆಯಲ್ಲಿ ಸೃಜನಾತ್ಮಕ ಬೆಳವಣಿಗೆ ಉಂಟು ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತವೆ. ಸಂಸ್ಕೃತಿ ಕಲೆ ಕ್ರೀಡೆ ಇತ್ಯಾದಿಗಳಲ್ಲಿ ಆಸಕ್ತಿ ಉಂಟುಮಾಡಿ ಸಹೃದಯತೆಯನ್ನು ಬೆಳೆಸುವುದರ ಜೊತೆಗೆ ವ್ಯಕ್ತಿಯಲ್ಲಿ ಸಾಮಾಜಿಕ ಮನೋಭಾವನೆಯನ್ನು ಹುಟ್ಟುಹಾಕುತ್ತದೆ. ಈ ಒಂದು ವಿಚಾರವನ್ನು ಮನಗಂಡು ವಿಶ್ವ ವಿದ್ಯಾನಿಲಯವು ವಿವಿಧ ಕಾಲೇಜುಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿದೇಶನಾಲಯದ ನಿರ್ದೆಶಕರಾಗಿರುವ ಪ್ರೊ.ಪಿ.ಎಲ್ ಧರ್ಮ, ತಿಳಿಸಿದರು.

ಅವರು ಇಂದು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆ ನೃತ್ಯೋತ್ಸವ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೃತ್ಯೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಕಾಲೇಜು ಮತ್ತು ವಿಶ್ವ ವಿದ್ಯಾನಿಲಯ ಕೇಂದ್ರದ ನಡುವೆ ಉತ್ತಮ ಸಂಬಂಧಗಳು ಏರ್ಪಟ್ಟು ಅದರ ಪ್ರಯೋಜನ ವಿದ್ಯಾರ್ಥಿ ಗಳ ವಿಕಸನಕ್ಕೆ ಪೂರಕವಾಗಬಹುದೆಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾತನಾಡಿ ಕಾಲೇಜಿನ ಸಂಚಾಲಕರಾದ ಶ್ರೀ.ಬಿ. ಮೋಹನ್ ನಾಯಕ್, ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲೆ ಪ್ರೊ. ಪುಪ್ಷಲತಾ ಬಿ.ಕೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿಯಾದ ಡಾ.ಮೀನಾಕ್ಷಿ ಕೆ ವಂದನಾರ್ಪಣೆಗೈದರು. ನೃತ್ಯೋತ್ಸವದಲ್ಲಿ ಇಂದು ಶಾಸ್ತ್ರೀಯ ನೃತ್ಯ ಹಾಗೂ ನಾಳೆ ಜನಪದ ನೃತ್ಯ ಸ್ಪರ್ಧೆ ನಡೆಯಲಿವೆ. ಸುಮಾರು 30 ಕಾಲೇಜುಗಳು ಹೆಸರು ನೊಂದಾಯಿಸಿದರು.

Dance

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English