ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೊಬೈಲ್‌ ಬ್ಯಾಂಕಿಗ್ ವಾಹನಕ್ಕೆ ಜಿ.ಆರ್‌. ಚಿಂತಲ ಚಾಲನೆ

8:04 PM, Sunday, September 21st, 2014
Share
1 Star2 Stars3 Stars4 Stars5 Stars
(5 rating, 4 votes)
Loading...

SCDCC Mobile Bank
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (ಎಸ್‌ಸಿಡಿಸಿಸಿ) ಮೊಬೈಲ್‌ ಬ್ಯಾಂಕಿಂಗ್‌ನ ಹೊಸ ವಾಹನ, ಕ್ಯಾಶ್‌ ಡೆಪಾಸಿಟ್‌ ಹಾಗೂ ಚೆಕ್‌ ಡೆಪಾಸಿಟ್‌ (ನಗದು ಹಾಗೂ ಚೆಕ್‌ ಠೇವಣಿ) ಕಿಯಾಸ್ಕ್ ಯಂತ್ರಗಳನ್ನು ಅವರು ಬ್ಯಾಂಕಿನ ಆವರಣದಲ್ಲಿ ನಬಾರ್ಡ್‌ ಮುಖ್ಯ ಮಹಾ ಪ್ರಬಂಧಕ ಜಿ.ಆರ್‌. ಚಿಂತಲ ಶನಿವಾರ ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು ಅ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ, ನಾವೀನ್ಯತೆ ಹಾಗೂ ವಿನೂತನ ಸೇವೆಗಳ ಮೂಲಕ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಈಗಾಗಲೇ ದೇಶದಲ್ಲೆ ಪ್ರಥಮವಾಗಿ ರೂಪೇ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಬ್ಯಾಂಕಿನ ದಕ್ಷ ಹಾಗೂ ಯಶಸ್ವಿ ಕಾರ್ಯವೈಖರಿಯನ್ನು ಗಮನಿಸಿ ನಬಾರ್ಡ್‌ ಬ್ಯಾಂಕ್‌ ಅವಶ್ಯ ನೆರವುಗಳನ್ನು ಒದಗಿಸುತ್ತಿದೆ ಎಂದರು.


SCDCC Mobile Bank

ವಾಣಿಜ್ಯ ಬ್ಯಾಂಕ್‌ಗಳಿಗೆ ಸರಿಸಮಾನ ರೀತಿಯಲ್ಲಿ ದಾಪುಗಾಲು ಹಾಕುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದ್ದು ಶೀಘ್ರದಲ್ಲೆ ಶಾಖೆಗಳ ಸಂಖ್ಯೆ ನೂರಕ್ಕೆ ತಲುಪಲಿ ಎಂದು ಹಾರೈಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ 2007ರಲ್ಲಿ ಸಂಚಾರಿ ಬ್ಯಾಂಕನ್ನು ದೇಶದಲ್ಲೇ ಪ್ರಥಮ ಸಂಚಾರಿ ಬ್ಯಾಂಕನ್ನು ಪರಿಚಯಿಸಿದ ಖ್ಯಾತಿಯನ್ನು ಹೊಂದಿದೆ. ಇದೀಗ ನಬಾರ್ಡ್‌ನ ಕೊಡುಗೆಯೊಂದಿಗೆ ಸುಸಜ್ಜಿತವಾದ ಹೊಸ ವಾಹನದಲ್ಲಿ ಸೇವೆಯನ್ನು ನೀಡುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸಲಿರುವ ಈ ಸಂಚಾರಿ ಬ್ಯಾಂಕ್‌, ಶಾಖೆಗಳಲ್ಲಿ ಲಭ್ಯವಿರುವ ಎಲ್ಲ ವ್ಯವಹಾರಗಳನ್ನು ನಿರ್ವಹಿಸಲಿದೆ. ಠೇವಣಿ ಸಂಗ್ರಹ, ಖಾತೆ ನಿರ್ವಹಣೆ, ಚೆಕ್‌ ನಗದೀಕರಣ ಹಾಗೂ ಎಲ್ಲ ವಿಧದ ಸಾಲ ಸೌಲಭ್ಯಗಳ ಜತೆಗೆ ಕೋರ್‌ ಬ್ಯಾಂಕಿಂಗ್‌ ಮತ್ತು ಆರ್‌ಟಿಜಿಎಸ್‌/ ನೆಫ್ಟ್ ಸೌಲಭ್ಯಗಳು ದೊರೆಯಲಿವೆ. ಎಟಿಎಂ ಸೌಲಭ್ಯವನ್ನು ಹೊಂದಿರುವ ಈ ಸಂಚಾರಿ ಬ್ಯಾಂಕಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಯಾವುದೇ ಶಾಖೆಯ ವ್ಯವಹಾರವನ್ನು ಮಾಡಬಹುದಾಗಿದೆ ಎಂದು ವಿವರಿಸಿದರು.

ನಬಾರ್ಡ್‌ ಎಜಿಎಂ ಪ್ರಸಾದ್‌ ರಾವ್‌, ಉದ್ಯಮಿ, ಬ್ಯಾಂಕಿನ ಗ್ರಾಹಕ ಕಣಚೂರು ಮೋನು, ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ವಾದಿರಾಜ ಶೆಟ್ಟಿ, ಭಾಸ್ಕರ ಕೋಟ್ಯಾನ್‌, ಸದಾಶಿವ ಉಳ್ಳಾಲ, ಜಯರಾಮ ರೈ, ಸದಾಶಿವ ಉಳ್ಳಾಲ, ಶಶಿಕುಮಾರ್‌ ರೈ, ರಾಜು ಪೂಜಾರಿ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್‌, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English