ಮಂಗಳೂರು: ಹಿರಿಯ ಸಹಕಾರಿ ಧುರೀಣ ಶ್ರೀ ಪೆರಾಜೆ ಶ್ರೀನಿವಾಸ ರಾಯರ ನಿಧನಕ್ಕೆ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ರವರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಯುತರ ನಿಧನದಿಂದ ಸಹಕಾರಿ ರಂಗವು ಒಂದು ಅನಘ್ರ್ಯ ರತ್ನವನ್ನು ಕಳೆದುಕೊಂಡಂತಾಗಿದೆ. ಶ್ರೀಯುತ ಪೆರಾಜೆ ಶ್ರೀನಿವಾಸ ರಾಯರು ಮತ್ತು ದಿವಗಂತ ಮೊಳಹಳ್ಳಿ ಶಿವರಾಯರಂತಹ ಸಹಕಾರಿ ದಿಗ್ಗಜರಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಸಹಕಾರಿ ಸಂಸ್ಥೆಗಳು ದೃಢವಾಗಿ ಬೆಳದು ನಿಂತಿದೆ. ಇಂದು ದೈವಾಧೀನರಾದ ಶ್ರೀ ಪೆರಾಜೆ ಶ್ರೀನಿವಾಸ ರಾಯರ ಅಗಲುವಿಕೆಯಿಂದ ಸಹಕಾರಿ ರಂಗವು ತೀವ್ರ ಆಘಾತ ಅನುಭವಿಸಿದೆ ಎಂದು ಅವರು ತಿಳಿಸಿರುತ್ತಾರೆ.
Click this button or press Ctrl+G to toggle between Kannada and English