ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಅಮಾನತಿಗಾಗಿ ಶ್ರೀ ರಾಮ ಸೇನೆ ಪ್ರತಿಭಟನೆ

10:22 AM, Tuesday, February 8th, 2011
Share
1 Star2 Stars3 Stars4 Stars5 Stars
(No Ratings Yet)
Loading...

 ಶ್ರೀ ರಾಮ ಸೇನೆ ಪ್ರತಿಭಟನೆಮಂಗಳೂರು: ಶ್ರೀ ರಾಮ ಸೇನೆ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮಂಗಳೂರು ಇದರ ಮುಂಭಾಗದಲ್ಲಿ ಶಬರಿಮಲೆ ದೇವಸ್ವಂ ಮಂಡಳಿ ಮತ್ತು ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಹೇಳಿಕೆಯನ್ನು ವಿರೋಧಿಸಿ ಸೋಮವಾರ ಬೆಳಿಗ್ಗೆ ಪ್ರತಿಭಟನೆಯನ್ನು ನಡೆಯಿತು.
 ಶ್ರೀ ರಾಮ ಸೇನೆ ಪ್ರತಿಭಟನೆಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಕುಮಾರ್ ಮಾಲೆಮಾರ್, ಶಬರಿಮಲೆ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ದೇವಸ್ವಂ ಮಂಡಳಿ ಮತ್ತು ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಸ್ಪಷ್ಟನೆ ನೀಡಿರುವುದನ್ನು ಶ್ರೀ ರಾಮಸೇನೆ ಖಂಡಿಸುತ್ತದೆ ಎಂದು ಹೇಳಿದರು. ಕೋಟಿಯಾನು ಕೋಟಿ ಭಕ್ತರು ಶಬರಿಮಲೆಗೆ ಮಾಲೆಯನ್ನು ಹಾಕಿ 48 ದಿನಗಳ ವೃತಮಾಡಿ 48 ಮೈಲಿ ನಡೆದು ಹೋಗಿ ಪವಿತ್ರವಾದ 18 ಮೆಟ್ಟಿಲುಗಳನ್ನು  ಹತ್ತಿ ಅಯ್ಯಪ್ಪ ದೇವರ ದರ್ಶನ ಮಾಡಿಕೊಂಡು ಪವಿತ್ರವಾದ ಮಕರ ಜ್ಯೋತಿಯನ್ನು ಕಾಣುವ ಮೂಲಕ ಒಂದು ವರ್ಷದ ವೃತಾಚರಣೆಯನ್ನು ಮುಗಿಸುತ್ತಾರೆ. ಆದರೆ ಇವತ್ತು ಈ ಮಕರ ಜ್ಯೋತಿಯನ್ನು ಮಾನವ ನಿರ್ಮಿತ ಎಂದು ಸ್ಪಷ್ಟನೆ ನೀಡಿರುವುದು ಅಯ್ಯಪ್ಪ ಭಕ್ತರನ್ನು  ಬೇಸರಕ್ಕೆ ಸಿಲುಕಿಸಿದಂತಾಗಿದೆ ಎಂದು ಅವರು ವಿವರಿಸಿದರು.
  ಶ್ರೀ ರಾಮ ಸೇನೆ ಪ್ರತಿಭಟನೆಇವತ್ತು ದೇವಸ್ವಂ ಮಂಡಳಿ ಕಮುನಿಸ್ಟ್ ರ ಕೈವಶದಲ್ಲಿದ್ದು ಈ ತಲೆ ಕೆಟ್ಟ ಹಾಗೆ ಮಾಹಿತಿ ನೀಡಿದ ಮಂಡಳಿಯನ್ನು ಕೇರಳ ಸರಕಾರವು ವಶಕ್ಕೆ ತೆಗೆಯಬೇಕು ಮತ್ತು ಟಿ.ಡಿ.ಪಿ.ಯ ಅಧ್ಯಕ್ಷ ನಾಯರ್ ನನ್ನು ಉಚ್ಚಾಟನೆ ಮಾಡಬೇಕು, ಮಾಡದಿದ್ದಲ್ಲಿ ಶ್ರೀರಾಮಸೇನೆ ಉಗ್ರಹೋರಾಟ ಮಾಡುವುದು ಎಂದು ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಜಿಲ್ಲಾ ಕಾರ್ಯದರ್ಶಿ ಮಧುಕರ ಮುದ್ರಾಡಿ ತಿಳಿಸಿದರು.
48 ದಿನ ವೃತಮಾಡಿ  ಭಕ್ತಿಯ ಪರಾಕಾಷ್ಠೆಯಲ್ಲಿರುವ ಭಕ್ತರ ಮನೋಭಾವಕ್ಕೆ ಘಾಸಿಗೊಳಿಸಿದ ಶಬರಿಮಲೆ ದೇವಸ್ವಂ ಬೋರ್ಡ್ ನ  ಟಿ.ಡಿ.ಪಿ.ಯ ಅಧ್ಯಕ್ಷರನ್ನು ಕೂಡಲೇ ಅಮಾನತುಗೊಳಿಸಬೆಕು ಎಂದರು.
  ಶ್ರೀ ರಾಮ ಸೇನೆ ಪ್ರತಿಭಟನೆಪ್ರತಿಭಟನೆಯಲ್ಲಿ  ಶ್ರೀರಾಮಸೇನೆ ಕಾರ್ಯಕರ್ತರಾದ ಮಧುಸೂದನ್, ಗಣೇಶ್, ಪ್ರವೀಣ್ ಮೂಡುಶೆಡ್ಡೆ, ಕಿಶೋರ್ ಮಹಾಕಾಳಿಪಡ್ಪು, ನಾಗೇಶ್ ಉಳ್ಳಾಲ, ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು. ಪ್ರತಿಭಟನೆಯ ಕೊನೆಗೆ ಕಾರ್ಯಕರ್ತರು  ದೇವಸ್ವಂ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಪ್ರತಿಕೃತಿಯನ್ನು ದಹಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಕಾರ್ಯಕರ್ತರು ಮನವಿಯೊಂದನ್ನು ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English