ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂವಮ್ಮನಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

10:03 PM, Tuesday, October 7th, 2014
Share
1 Star2 Stars3 Stars4 Stars5 Stars
(5 rating, 7 votes)
Loading...
puvamma

ಮಂಗಳೂರು : ದಕ್ಷಿಣ ಕೊರಿಯಾದ ಇಂಚಿಯಾನದಲ್ಲಿ ನಡೆದ ಏಷ್ಯನ್ ಗೇಮ್ಸ್ ನ ರಿಲೇಯಲ್ಲಿ ಚಿನ್ನ ಹಾಗೂ 400 ಮೀ.ನಲ್ಲಿ ಕಂಚಿನ ಪದಕ ಗೆದ್ದ ಎಂ.ಆರ್.ಪೂವಮ್ಮ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾಡಳಿತ ಹಾಗೂ ದ.ಕ. ಜಿಲ್ಲಾ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಪೂವಮ್ಮಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪೂವಮ್ಮ, ಕ್ರಿಡಾಪಟು ತನ್ನೊಳಗಿರುವ ಪ್ರತಿಭೆಯನ್ನು ಹೊರ ಹಾಕಬೇಕಾದರೆ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮತ್ತು ತರಬೇತಿ ಅವಕಾಶ ಸಿಗಬೇಕು. ಇಲ್ಲವಾದಲ್ಲಿ ನಾವೇ ಖರ್ಚು ಮಾಡಿ, ನಾವೇ ಓಡಿ ಏನೂ ಪ್ರಯೋಜನವಾಗುವುದಿಲ್ಲ. ಅದಕ್ಕಾಗಿ ಸರಕಾರದಿಂದ ಸೂಕ್ತ ಪ್ರೋತ್ಸಾಹ ದೊರೆಯಬೇಕು ಎಂದು ಹೇಳಿದರು.

ನನ್ನ ಮುಂದಿನ ಗುರಿ 2016ರ ರಿಯೊ ಒಲಿಪಿಂಕ್ಸ್ ಆಗಿದೆ. ಏಷ್ಯನ್ ಗೇಮ್ಸ್ ನ ರಿಲೇ ತಂಡದ ಆಯ್ಕೆಯಲ್ಲಿ ಗೊಂದಲವಾಗಿತ್ತು, ಕೊನೆಯ ಕ್ಷಣದಲ್ಲಿ ತಂಡವನ್ನು ಆಯ್ಕೆ ಮಾಡಲಾಗಿತ್ತೆಂಬ ಆರೋಪ ಸತ್ಯಕ್ಕೆ ದೂರ. ಆರಂಭದಲ್ಲಿಯೇ ರಿಲೇ ತಂಡವನ್ನು ಆಯ್ಕೆ ಮಾಡಲಾಗಿತ್ತಾದರೂ ಪ್ರಕಟ ಮಾಡುವುದು ಕೊನೆಯಲ್ಲಿ. ಅಥ್ಲೆಟಿಕ್ನಲ್ಲಿ ರಿಲೇ ಜತೆಯಲ್ಲೇ ಹಾಕಿ, ಕಬಡ್ಡಿಯಲ್ಲಿ ಚಿನ್ನ ಬಂದಿರುವುದು ನಿಜಕ್ಕೂ ಖುಷಿ ನೀಡಿದೆ. ಅದರಲ್ಲೂ ಈ ಎಲ್ಲಾ ತಂಡಗಳಲ್ಲಿ ಕರ್ನಾಟಕದವರಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದರು.

ಅಥ್ಲೆಟಿಕ್‍ನಲ್ಲಿ ರಿಲೇ ಜತೆಯಲ್ಲೇ ಹಾಕಿ, ಕಬಡ್ಡಿಯಲ್ಲಿ ಚಿನ್ನ ಬಂದಿರುವುದು ನಿಜಕ್ಕೂ ಖುಷಿ ನೀಡಿದೆ. ಅದರಲ್ಲೂ ಈ ಎಲ್ಲಾ ತಂಡಗಳಲ್ಲಿ ಕರ್ನಾಟಕದವರಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದವರು ಹೇಳಿದರು.

ಕ್ರೀಡಾ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಉಪ ಮೇಯರ್ ಕವಿತಾ, ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಸರಸ್ವತಿ ಕಾಮತ್, ಶಾಸಕ ಜೆ.ಆರ್. ಲೋಬೋ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮೂಡಾ ಮಾಜಿ ಅಧ್ಯಕ್ಷ ತೇಜೋಮಯ, ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶ ಎಂ.ಆರ್. ವಾಸುದೇವ್ ಮತ್ತಿತರರು ಅಭಿನಂದಿಸಿದರು.

ತಂದೆ ರಾಜು, ತಾಯಿ ಜಾಜಿ ಹಾಗೂ ಸಹೋದರ ಮಂಜು ಹಾಗೂ ತರಬೇತುದಾರ ದಿನೇಶ್ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.

ಬಳಿಕ ನಗರದ ಅಂಬೇಡ್ಕರ್ ವೃತ್ತ (ಜ್ಯೋತಿ ಬಳಿ)ದಿಂದ ಎಂ.ಆರ್.ಪೂವಮ್ಮ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮಂಗಳಾ ಕ್ರೀಡಾಂಗಣಕ್ಕೆ ಕರೆ ತರಲಾಯಿತು.

puvamma

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English