ಕಾವೂರು ಠಾಣೆ ಪೊಲೀಸರ ವಿರುದ್ದ ಹಿಂದೂ ಕಾರ್ಯಕರ್ತರ ಪ್ರತಿಭಟನೆ

11:04 PM, Monday, October 13th, 2014
Share
1 Star2 Stars3 Stars4 Stars5 Stars
(5 rating, 6 votes)
Loading...
vhp protest

ಮಂಗಳೂರು : ವಿಶ್ವ ಹಿಂದು ಪರಿಷತ್, ಬಜರಂಗ ದಳ ಕಾರ್ಯಕರ್ತರು ಮೂಡುಶೆಡ್ಡೆ ಹಿಂದೂ ಕಾರ್ಯಕರ್ತನೊರ್ವನಿಗೆ ಕಾವೂರು ಠಾಣೆ ಇನ್ಸ್ ಫೆಕ್ಟರ್ ಹಾಗೂ ಪೇದೆಗಳಿಬ್ಬರು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸಿ ಅ13 ಸೋಮವಾರ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರು.

ವಿಹಿಂಪ ಮುಖ್ಯಸ್ಥ ಜಗದೀಶ್ ಶೇಣವ ಮಾತನಾಡಿ ಹಿಂದೂ ಕಾರ್ಯಕರ್ತ ಚರಣ್ ಈ ಹಿಂದೆ ಕೇಸೊಂದರಲ್ಲಿ ಠಾಣೆಗೆ ಹಾಜರಾಗದೆ, ನೇರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾನೆ. ಇದನ್ನೇ ನೆಪವಾಗಿರಿಸಿ ಚರಣ್ ನನ್ನು ಬಂಧಿಸಿದ ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆತ ಎದ್ದು ನಡೆಯಲೂ, ಮಲಗಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾನೆ ಎಂದು ಆರೋಪಿಸಿದರು.

ಯಾವುದೇ ತಪ್ಪು ಮಾಡದೆ ಇದ್ದ ಆತತಿಗೆನಿಗೆ ಈ ರೀತಿ ಚಿತ್ರಹಿಂಸೆ ನೀಡಿರುವುದು ಖಂಡನೀಯ. ಆದ್ದರಿಂದ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಪೇದೆಯವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಇನ್ಸ್ ಫೆಕ್ಟರ್ ಮತ್ತು ಪೇದೆಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು.

ಮೋನಪ್ಪ ಭಂಡಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English