ನಿವೇಶನರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪ್ರತಿಭಟನೆ

11:19 PM, Monday, October 13th, 2014
Share
1 Star2 Stars3 Stars4 Stars5 Stars
(4 rating, 4 votes)
Loading...
cpim protest

ಮಂಗಳೂರು : ಅಜಿ೯ದಾರರಿಗೆ ಮನೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ನೇತೃತ್ವದಲ್ಲಿ ನಿವೇಶನರಹಿತರು ಮಂಗಳೂರು ಮಹಾನಗರ ಪಾಲಿಕೆಯೆದುರು ಅ13 ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ಜ್ಯೋತಿ ವೃತ್ತದಿಂದ ಪಾಲಿಕೆಯವರೆಗೆ ಮೆರವಣಿಗೆ ನಡೆಸಿದರು. ಈಗಾಗಲೇ ನೀಡಿರುವ ಅಜಿ೯ಗಳನ್ನು ನಿವೇಶನರಹಿತರ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಿಪಿಐ(ಎಂ) ನಗರ ಕಾರ್ಯದಶಿ೯ ಸುನೀಲ್ ಕುಮಾರ್ ಬಜಾಲ್, ಮಾತನಾಡಿಪ್ರತಿ ವರ್ಷ ಭೂರಹಿತರಿಗೆ ಭೂಮಿ ನೀಡಬೇಕೆಂದಿದ್ದರೂ, ಕಳೆದ 20 ವರ್ಷಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ತುಂಡು ಭೂಮಿ ನೀಡದೆ ಬಡಜನರಿಗೆ ವಂಚಿಸಲಾಗಿದೆ ಎಂದು ಆರೋಪಿಸಿದರು. ಭೂಮಿಗೆ ವಿಪರೀತ ದರ ಏರಿಸುವ ಮೂಲಕ ಭೂ ದಂಧೆಯಾಗಿ ಮಂಗಳೂರು ನಗರವನ್ನು ಮಾರ್ಪಡಿಸಲಾಗಿದೆ.

ಸಿಪಿಐ(ಎಂ) ಮುಖಂಡ ವಸಂತ ಆಚಾರಿ ಮಾತನಾಡಿ, ಪಾಲಿಕೆ ವ್ಯಾಪ್ತಿಯ ತಣ್ಣೀರುಬಾವಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಕಾ೯ರಿ ಜಾಗದಲ್ಲಿ ವಾಸಿಸುತ್ತಿರುಬ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದಾಗಿ ಸಕಾ೯ರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಕಳೆದ 5 ವರ್ಷಗಳಿಂದ ಅಜಿ೯ ಸಲ್ಲಿಸಿದ ನಿವೇಶನರಹಿತರನ್ನು ಗುರುತಿಸಿ ಅಧಿಕೃತವಾಗಿ ನಿವೇಶನ ಮಂಜೂರು ಮಾಡುವ ಬದಲು ವಾಜಪೇಯಿ ನಗರ ನಿವೇಶನ ಯೋಜನೆಯಡಿಯಲ್ಲಿ ಪ್ರತ್ಯೇಕ ಅಜಿ೯ ನೀಡಬೇಕೆಂಬುದಾಗಿ ಹಿಂಬರಹ ಬರೆದಿದೆ. ಈ ಮೂಲಕ ನಿವೇಶನರಹಿತರ ಹೋರಾಟದ ದಾರಿ ತಪ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English