ಮಂಗಳೂರಿನ: ನಿರಂತರ ಮೂರು ತಿಂಗಳುಗಳ ಕಾಲ ನಡೆದ 2014-15ನೆ ಸಾಲಿನ ಮಂಗಳೂರು ಚಾಂಪಿಯನ್ ಪಾರಿವಾಳ ಸ್ಪರ್ಧಾ ಕೂಟದ ಪ್ರಶಸ್ತಿ ವಿತರಣಾ ಸಮಾರಂಭವು ಸತತ 8ನೆ ಬಾರಿಗೆ ಕುದ್ರೋಳಿಯಲ್ಲಿ ಅಕ್ಟೋಬರ್ 26ರಂದು ನಡೆಯಿತು.
ಕುದ್ರೋಳಿ ವಾರ್ಡ್ ಕಾರ್ಪೋರೇಟರ್ ಅಬ್ದುಲ್ ಅಝೀರೆ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪಾರಿವಾಳ ತಜ್ಞ ಕಷ್ಣ ಕುಳಾಲ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಪಾರಿವಾಳ ಸ್ಪರ್ಧೆಗಳು ಕಳೆದ 68 ವರ್ಷಗಳಿಂದ ನಡೆಯುತ್ತಿವೆ. ಆದಾಗ್ಯೂ ಜಿಲ್ಲೆಯಲ್ಲಿ ಪಾರಿವಾಳ ಸ್ಪರ್ಧಾಳುಗಳ ಯಾವುದೇ ವೇದಿಕೆ ಅಥವಾ ಸಮಿತಿ ಇಲ್ಲ. ಪಾರಿವಾಳ ಸ್ಪರ್ಧೆಗಳನ್ನು ಅಭಿವದ್ಧಿಗೊಳಿಸುವ ನಿಟ್ಟಿನಲ್ಲಿ ಕೇರಳ ಮಾದರಿಯ ಸಂಘಟನೆಯೊಂದನ್ನು ರಚಿಸುವ ಅಗತ್ಯವಿದೆ ಎಂದರು.
13 ಗಂಟೆ 4 ನಿಮಿಷಗಳ ಕಾಲ ಹಾರಾಡಿದ ಇರ್ಫಾನ್ ಕುದ್ರೋಳಿ ಅವರ ಪಾರಿವಾಳವು ಸ್ಪರ್ಧಾ ಕೂಟದ ಚಾಂಪಿಯನ್ಶಿಪ್ ಗೆದ್ದುಕೊಂಡಿತು. ದ್ವಿತೀಯ ಬಹುಮಾನವನ್ನು ನಿಯಾರೆ್ ನಝೀರ್ ಬೆಂಗ್ರೆ ಮತ್ತು ತತೀಯ ಸ್ಥಾನವನ್ನು ಯಶವಂತ ಉಳ್ಳಾಲ ಅವರ ಪಾರಿವಾಳಗಳು ಗೆದ್ದುಕೊಂಡವು. ನಾಲ್ಕನೆ ಸ್ಥಾನವನ್ನು ಕಷ್ಣ ಕುಳಾಲ್ ಕಾಯ್ದುಕೊಂಡರು.
ಅತಿಥಿಗಳಾಗಿ ಮುನೀರ್ ಕುದ್ರೋಳಿ, ವೀರೇಶ್ ಗೋಪಾಲ್, ನೌಶೀಲ್ ಕುದ್ರೋಳಿ ಮುಂತಾದವರು ಉಪಸ್ಥಿತರಿದ್ದರು.
ತೌಸೀಫ್ ಸ್ವಾಗತಿಸಿ, ನೌಶಾದ್ ವಂದಿಸಿದರು ಮತ್ತು ಪ್ರದೀಪ್ ಕೊಟ್ಟಾರಿಯವರು ಕಾರ್ಯಕ್ರಮ ನಿರೂಪಿಸಿದರು.
ಸ್ಫಧೆಯ ಮಾದರಿ: ಒಟ್ಟು 85 ಪಾರಿವಾಳಗಳು ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದವು. ಸುಮಾರು ಮೂರು ತಿಂಗಳ ಕಾಲ ಈ ಟೂರ್ನ್ನ್ ಮೆಂಟ್ ನಡೆದಿತ್ತು. ಪ್ರತೀ ದಿನ ಬೆಳಗ್ಗೆ ಆರು ಗಂಟೆಗೆ ಒಂದು ತಂಡದ ಪಾರಿವಾಳವನ್ನು ಹಾರಿ ಬಿಡಲಾಗುತ್ತದೆ ಮತ್ತು ಅದು ಬಾನಿನಲ್ಲಿ ಹಾರಾಡಿ ಸೂರ್ಯಾಸ್ತದ ವೇಳೆ ಹಿಂದಿರುಗುತ್ತದೆ. ಪಾರಿವಾಳವು ಹಾರಾಡಿದ ಸಮಯವನ್ನು ಆಧರಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
Click this button or press Ctrl+G to toggle between Kannada and English