ಬಳ್ಳಾಲ್ ಭಾಗ್ 63ನೇ ವರ್ಷದ ಗುರ್ಜಿ ದೀಪೋತ್ಸವ

11:44 PM, Friday, November 21st, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Ballalbagh Gurji

ಮಂಗಳೂರು: ಗುರ್ಜಿ ದೀಪೋತ್ಸವ ಸಮಿತಿ ಬಳ್ಳಾಲ್ ಭಾಗ್ ಮಂಗಳೂರು ಇದರ ಆಶ್ರಯದಲ್ಲಿ 63ನೇ ವರ್ಷದ ಗುರ್ಜಿ ದೀಪೋತ್ಸವವು ನವೆಂಬರ್ 19, ಬುಧವಾರದಂದು ಜರುಗಿತು. ಆ ಪ್ರಯುಕ್ತ ತಾ.17.11.2014ನೇ ಸೋಮವಾರ ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಮತ್ತು ಅನ್ನಸಂತರ್ಪಣೆ ನಡೆಯಿತು.

ಗುರ್ಜಿ ದೀಪೋತ್ಸವ ಸಮಾರಂಭವನ್ನು ಜಯರಾಮ್ ಹಂದೆ ಕರ್ನಾಟಕ ಬ್ಯಾಂಕ್ ಡಿಜಿಎಂ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿ.ಪದ್ಮನಾಭ ರೈ , ಜಯಂತಿ ಆಚಾರ್ ಈ ಸಂದರ್ಭ ಉಪಸ್ಥಿತರಿದ್ದರು. ಸಂಜೆ 6.30ಕ್ಕೆ ಸನಾತನ ನಾಟ್ಯಾಲಯ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯೆ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ರಾತ್ರಿ 8ಕ್ಕೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಬಲ ಮಾರ್ಲ ಮೇಯರ್ ಮಂಗಳೂರು ಮಹಾನಗರ ಪಾಲಿಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆ.ಬಾಲಕೃಷ್ಣ ಕೊಟ್ಟಾರಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಸೂರ್ಯನಾರಾಯಣ ದೇವಸ್ಥಾನ ಮತ್ತು ಮುಖ್ತೇಸರರು ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ವಿದ್ಯಾಧರ ಶೆಟ್ಟಿ ಎಲ್.ಐ.ಸಿ.ಡೆವಲೆಪ್ಮೆಂಟ್ ಆಫೀಸರ್ ಭಾಗವಹಿಸಿದರು.

ಸಮಾರಂಭದಲ್ಲಿ ನಾರಾಯಣ ಶೆಟ್ಟಿ ಬಳ್ಳಾಲ್ ಭಾಗ್ ಹಿರಿಯ ಸದಸ್ಯರು, ಧೀರಜ್ ಕೊಟ್ಟಾರಿ ಕಲಾವಿದ ಚಿತ್ರ ನಟ, ಉತ್ತಮ್ ಕೊಡಿಯಾಲ್ ಬೈಲ್ ಹಿಂದೂಸ್ಥಾನಿ ಗಾಯಕರು ಆಕಾಶವಾಣಿ ಕಲಾವಿದರು ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಬಿ.ಸಾಲ್ಯಾನ್ ಧನ್ಯವಾದಗೈದರು. ಸುರೇಶ್ ಬಳ್ಳಾಲ್, ಗಣೇಶ್ ಶೆಟ್ಟಿ, ಸುಂದರ ಶೆಟ್ಟಿ, ಉಪಸ್ಥಿತರಿದ್ದರು. ರಾತ್ರಿ 9.30ಕ್ಕೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English