ಮಂಗಳೂರು : ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಗಳ ಮತ್ತು ಅಲ್ಲಿನ ವೈದ್ಯರುಗಳ ನಿರ್ಲಕ್ಷ್ಯ, ಆರೋಗ್ಯ ರಕ್ಷಾ ಕವಚ ಸಮಿತಿ ಹೆಸರಿನಲ್ಲಿ ಖಾಸಗೀಕರಣದ ವಿರುದ್ಧ ಅಖಿಲ ಭಾರತ ಕಾರ್ಮಿಕ ಸಂಘ ಶೀರ್ತಾಡಿ, ಮಂಗಳೂರು ಇದರ ವತಿಯಿಂದ ಇಂದು ಬೆಳಿಗ್ಗೆ 10.00ರಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಮುಂಭಾಗದಲ್ಲಿ ಅಹೋ ರಾತ್ರಿ ಪ್ರತಿಭಟನೆ ಆರಂಭಗೊಂಡಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ ಅಖಿಲ ಭಾರತ ಕಾರ್ಮಿಕ ಸಂಘ ಪ್ರಧಾನ ಕಾರ್ಯದರ್ಶಿ ಸುದತ್ತ ಜೈನ್ ಶೀರ್ತಾಡಿ ಅವರು ಮಾತನಾಡಿ, ದ.ಕ. ಜಿಲ್ಲೆ ಮತ್ತು ಇತರ ಹೊರ ಜಿಲ್ಲೆಗಳಿಂದ ಆಗಮಿಸುವ ರೋಗಿಗಳಿಗೆ ಮತ್ತು ಬಡ ಕಾರ್ಮಿಕ ರೋಗಿಗಳಿಗೆ ಎ.ಪಿ.ಲ್, ಬಿ.ಪಿ.ಎಲ್ ಕಾರ್ಡಿನ ನೆಪವೊಡ್ಡಿ ಅನ್ಯಾಯ ಮಾಡುವ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರ ಕಾರ್ಯಾಧ್ಯಕ್ಷರಾದ ಮೋನಪ್ಪ ಪೂಜಾರಿ ಕುಂಜತ್ತಬೈಲ್ ಅವರು ಇತ್ತೀಚೆಗೆ ರೋಗಿಯೊಬ್ಬರನ್ನು 108 ವಾಹನದಲ್ಲಿ ಕರೆತಂದಾಗ, ಆಸ್ಪತ್ರೆ ಸಿಬ್ಬಂದಿಗಳು ವಿನಾಕಾರಣ ವಿಳಂಬ ಮಾಡಿ ಸತಾಯಿಸಿದರೆಂದು ಆರೋಪಿಸಿದರು. ಲೇಡಿಗೋಷನ್ ಮತ್ತು ವೆನ್ಲಾಕ್ ಆಸ್ಪತ್ರೆಯ ಬಹುತೇಕ ಸಿಬ್ಬಂದಿಗಳು ಅಹಂಕಾರ ಮತ್ತು ದುರ್ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಮತ್ತು ಮಹಿಳಾ ರೋಗಿಗಳನ್ನು ಅಲ್ಲಿನ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳ ನಿರ್ಲಕ್ಷ್ಯವಾಗಿ ಕಾಣುತ್ತಿದ್ದಾರೆ, ಆಸ್ಪತ್ರೆಯಲ್ಲಿ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇಲ್ಲದೆ ಬಡವರ್ಗದ ಜನರು ಕಷ್ಟಪಡುವುದನ್ನು ಕೂಡಲೇ ನಿಲ್ಲಿಸಬೇಕು, ಇಲ್ಲದೇ ಹೋದಲ್ಲಿ ವೆನ್ಲಾಕ್ ಆಸ್ಪತ್ರೆಯ ಮುಂಭಾಗದಲ್ಲಿ ಬೇಡಿಕೆ ಈಡೇರುವ ವರೆಗೆ ಮೌನ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗಯವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದರು. ಪ್ರತಿಭಟಣೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಲೋಕೇಶ್ ಹೆಗ್ಡೆ, ಪುತ್ತೂರು, ನಗರಾಧ್ಯಕ್ಷ ಜಲಂಧರ ಶೆಟ್ಟಿ, ನಗರ ಸಂಚಾಲಕರು ಸಂತೋಷ್ ಕುಮಾರ್ ಕಾವೂರು ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English