ಆಟೋ ದರ : ರಿಕ್ಷಾ ಚಾಲಕರ ಸಂಘದ ಪ್ರತಿಭಟನೆ

8:16 PM, Wednesday, February 18th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Auto Protest

ಮಂಗಳೂರು : ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಕನಿಷ್ಟ ಮೀಟರ್ ದರವನ್ನು 20 ರೂಪಾಯಿಗೆ ಇಳಿಸಿರುವ ಜಿಲ್ಲಾಧಿಕಾರಿಗಳ ನಿರ್ಧಾರದಿಂದ ಆಟೋ ಚಾಲಕ ತೊಂದರೆಯಾಗಿದೆ. ಆಟೋ ದರವನ್ನು 20 ರಿಂದ 25 ಕ್ಕೆ ಏರಿಸಬೇಕೆಂದು ಒತ್ತಾಯಿಸಿ ಸಿಐಟಿಯು ನೇತೃತ್ವದ ರಿಕ್ಷಾ ಚಾಲಕರ ಸಂಘ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಗೇಟಿನ ಮುಂಬಾಗ ಪ್ರತಿಭಟನೆ ನಡೆಸಿತು.

ತೈಲ ಬೆಲೆಗಳಲ್ಲಿ ಗಣನೀಯ ಇಳಿಕೆಯಾಗಿದ್ದರೂ ಬಿಡಿ ಭಾಗ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಅಲ್ಲದೆ ಹೋಟೇಲು ಚಾ, ತಿಂಡಿಗಳ ಬೆಲೆಯಲ್ಲಿಯೂ ಇಳಿಮುಖವಾಗಿಲ್ಲ, ಜಿಲ್ಲಾಧಿಕಾರಿಯವರು ದರ ಪರಿಷ್ಕರಣೆ ವೇಳೆ ತಮ್ಮ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಸಾರ್ವಜನಿಕ ಸೇವೆ ಮಾಡುವ ಆಟೋ ಚಾಲಕರ ಮೇಲೆ ಈ ರೀತಿಯ ಅನ್ಯಾಯ ವಿಷಾದನೀಯ ಎಂದು ಆರೋಪಿಸಿದರು.

ಸುನಿಲ್ ಕುಮಾರ್ ಬಜಾಲ್, ಕ್ರಷ್ಣಪ್ಪ ಗೌಡ, ಮಹಮ್ಮದ್ ಅನ್ಸಾರ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English