ಹೆಸರಾಂತ ಗಾಯಕ ದೇವದಾಸ್ ಬಿ.ಬಿಲ್ಲವ ನಿಧನ

1:28 PM, Saturday, March 7th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Devadas

ಮುಂಬಯಿ : ಬಿಲ್ಲವ ಸೇವಾ ಸಂಘ ಕುಂದಾಪುರ (ರಿ.) ಮುಂಬಯಿ ಇದರ ಸಕ್ರಿಯ ಸದಸ್ಯ, ಮುಂಬಯಿ ಉಪನಗರದ ಭಾಂಡೂಪ್ ನಿವಾಸಿ ಆಗಿದ್ದು ಮೂಲತಃ ಕುಂದಾಪುರ ತಾಲೂಕು ಹಳೆ ಅಳಿವೆಯ ಟಿ.ಎಸ್ ಹೌಸ್ ನಿವಾಸಿ, ಹೆಸರಾಂತ ಗಾಯಕ ದೇವದಾಸ್ ಬಿ.ಬಿಲ್ಲವ (44) ಅವರು ಇತ್ತೀಚೆಗೆ ಹೃದಯಾಘಾತ ವಿಧಿವಶರಾದರು.

ಮೃತರು ಡಾ| ರಾಜ್‌ಕುಮಾರ್ ಅವರ ಬಹುತೇಕ ಗಾನ-ಗೀತೆಗಳನ್ನು ಹಾಡುತ್ತಾ ಸಂಗೀತಾಭಿಮಾ ನಿಗಳ ಪ್ರೀತಿ ಪಾತ್ರರಾಗಿದ್ದು, ಅಪ್ಪಟ ಕಲಾಪ್ರೇಮಿ ಆಗಿದ್ದ ಇವರು ಉದಯೋನ್ಮುಖ ಗಾಯಕರಾಗಿ ಹಲವಾರು ಸಭೆ-ಸಮಾರಂಭಗಳಲ್ಲಿ ತಮ್ಮ ಸೊಗಸಾದ ಕಂಠದಿಂದ ಹಾಡಿ ಮನರಂಜಿಸುತ್ತಿದ್ದರು. ಓರ್ವ ಪ್ರತಿಭಾನ್ವಿತ ಕಾರ್ಯಕ್ರಮ ನಿರ್ವಾಹಕರೂ ಆಗಿ ಪ್ರಸಿದ್ಧಿ ಹೊಂದಿದ್ದ ದೇವದಾಸ್ ಅವರು ತಾಯಿ, ಪತ್ನಿ, ಪುತ್ರ ಹಾಗೂ ಸಹೋದರರಾದ ಸದಾನಂದ ಬಿ.ಪೂಜಾರಿ ಮತ್ತು ಸುಂದರ ಬಿ.ಪೂಜಾರಿ ಸೇರಿದಂತೆ ಇರ್ವರು ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಬಹುಮುಖ ಪ್ರತಿಭೆಯ ಕ್ರೀಯಶೀಲ ಸದಸ್ಯನನ್ನು ಕಳೆದು ಕೊಂಡ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ). ಮುಂಬಯಿ ಇದರ ಅಧ್ಯಕ್ಷ ಶಿರೂರು ಮಂಜುನಾಥ ಬಿಲ್ಲವ, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ ಮತ್ತು ಉಭಯ ಸಂಸ್ಥೆಗಳ ಸರ್ವ ಪದಾಧಿಕಾರಿಗಳು, ಸದಸ್ಯರು, ನಾವುಂದ ಶುಭದಾ ಶೈಕ್ಷಣಿಕ ಸಂಸ್ಥೆಯ ಸ್ಥಾಪಕ ಎನ್.ಕೆ ಬಿಲ್ಲವ ಸೇರಿದಂತೆ ನೂರಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English