ರೈಲೇ ಹೋರಾಟಗಾರ-ಸಮಾಜ ಸೇವಕ ಶಶಿಕುಮಾರ್ ಸಿ.ಕುಂದರ್ ಮೂಲ್ಕಿ ನಿಧನ

8:51 PM, Tuesday, March 10th, 2015
Share
1 Star2 Stars3 Stars4 Stars5 Stars
(No Ratings Yet)
Loading...

kundar

ಮುಂಬಯಿ : ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸಿ. ಕುಂದರ್ (68.) ಅವರು ಸೋಮವಾರ ರಾತ್ರಿ ತಮ್ಮ ಗೋರೆಗಾಂವ್ ಪೂರ್ವದ ಸ್ವನಿವಾಸದಲ್ಲಿ ನಿಧನ ಹೊಂದಿದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ನಿವಾಸಿಯಾಗಿದ್ದ ಅವರು ಕಳೆದ ಹಲವು ವರ್ಷಗಳಿಂದ ರೈಲ್ವೇ ಯಾತ್ರಿ ಸಂಘದಲ್ಲಿ ಸಕ್ರೀಯರಾಗಿ ಸೇವಾ ನಿರತರಾಗಿದ್ದು, ಕೇಂದ್ರಿಯ ಅಂದಿನ ರೈಲ್ವೇ ಮಂತ್ರಿ ಮಮತಾ ಬಾನರ್ಜಿ ಅವರಿಂದ ಒಳಗೊಂಡು ಪ್ರಸಕ್ತ ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರನ್ನು ಮುಖತಃ ಭೇಟಿ ನೀಡಿ ಕರ್ನಾಟಕ ರಾಜ್ಯಗಳ ಕರಾವಳಿ ನಾಡಿನ ಲಕ್ಷಾಂತರ ಜನತೆಯ ರೈಲ್ವೇ ಪ್ರಯಾಣದ ಅನುಕೂಲಕ್ಕಾಗಿ ಬಾಂದ್ರಾ-ಬೋರಿವಿಲಿ-ವಸಾಯಿ ಮೂಲಕ ದಿವಾ-ಪನ್ವೇಲ್ ಮಾರ್ಗವಾಗಿ ಕೊಂಕಣ್ ರೈಲ್ವೇ ಹಳಿಯಲ್ಲಿ ರೈಲು ಸೇವೆ ಆರಂಭಿಸುವಲ್ಲಿ ಹಗಲಿರುಳು ಶ್ರಮಿಸಿಸಿದ್ದರು.

ಮೃತರು ದೇನಾ ಬ್ಯಾಂಕ್‌ನಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತ ಜೀವನ ನಡೆಸುತ್ತಿದ್ದರು. ಕುಂದರ್ ಮೂಲಸ್ಥಾನದ ಉಪಾಧ್ಯಕ್ಷ, ಒಡೆಯರಬೆಟ್ಟು ಮೊಗವೀರ ಸಭಾ ಇದರ ಕೋಶಾಧಿಕಾರಿ ಆಗಿ ಅಲ್ಲದೆ ಮಹಾನಗರ ಅನೇಕ ಸಂಸ್ಥೆಗಳಲ್ಲಿ ಸೇವೆ ನಿರ್ವಾಹಿಸುತ್ತಿದ್ದರು.ಮೃತರು ಪತ್ನಿ ವಸಂತಿ ಕುಂದರ್ ಹಾಗೂ ಇಬ್ಬರು ಸುಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಶಶಿಕುಮಾರ್ ಅಂತ್ಯಕ್ರಿಯೆ ಇಂದಿಲ್ಲಿ ಅಪರಾಹ್ನ ಗೋರೆಗಾಂ ಪೂರ್ವದ ಸಾಯಿಧಾಮ್‌ನಲ್ಲಿ ನೆರವೇರಿದ್ದು, ಮೊಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಕೀರ್ತಿರಾಜ್ ಸಾಲ್ಯಾನ್, ಕುಂದರ್ ಮೂಲಸ್ಥಾನ, ಒಡೆಯರಬೆಟ್ಟು ಮೊಗವೀರ ಸಭಾ ಇದರ ಪದಾಧಿಕಾರಿಗಳು, ಮೊಗವೀರ ಮಾಸಿಕದಸಂಪಾದಕ ಅಶೋಕ್ ಎಸ್.ಸುವರ್ಣ, ವಸಾಯಿ ತಾಲೂಕು ಮೊಗವೀರ ಸಂಘದ ಅಧ್ಯಕ್ಷ ಯಶೋಧರ ಕೋಟ್ಯಾನ್, ರೈಲ್ವೇ ಯಾತ್ರಿ ಸಂಘ ಬೊರಿವಲಿ ಇದರ ಸ್ಥಾಪಕ ಗೌರವಾಧ್ಯಕ್ಷ ವಿರಾರ್ ಶಂಕರ ಬಿ.ಶೆಟ್ಟಿ, ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ರೈಲೇ ಹೋರಾಟಗಾರ ಸೈಮನ್ ಪಿ.ಡಿ’ಕೋಸ್ತಾ, ರೈಲ್ವೇ ಸಂಘದ ಕಾರ್ಯಕಾರಿ ಕಾರ್ಯದರ್ಶಿಗಳಾದ ಪ್ರೇಮನಾಥ ಪಿ.ಕೋಟ್ಯಾನ್ ಮತ್ತು ಓಲಿವೆರ್ ಡಿ’ಸೋಜಾ ವಸಾಯಿ, ಪದಾಧಿಕಾರಿಗಳಾದ ಬೋಜ ಪಿ.ಕುಕ್ಯಾನ್, ಬಿ. ನಾರಾಯಣ ಎಂ.ಶೆಟ್ಟಿ, ಬಾಲಕೃಷ್ಣ ಕೋಟ್ಯಾನ್, ರಜಿತ್ ಸುವರ್ಣ, ಟಿ.ಕೆ ಕೋಟ್ಯಾನ್, ರತ್ನಾ ಶೆಟ್ಟಿ ಮತ್ತಿತರರು ಶಶಿಕುಮಾರ್ ನಿಧನಕ್ಕೆ ತೀವ್ರವಾಗಿ ಸಂತಾಪ ಸೂಚಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English