ರಂಗಕರ್ಮಿ, ಸಮಾಜ ಸೇವಕ ಲೀಲಾಧರ ಶೆಟ್ಟಿ ಹಾಗೂ ಪತ್ನಿ ಆತ್ಮಹತ್ಯೆ

Wednesday, December 13th, 2023
Kaupu-Leeladhara-Shetty

ಉಡುಪಿ : ರಂಗಕರ್ಮಿ, ಸಮಾಜ ಸೇವಕ ಧಾರ್ಮಿಕ ಮುಂದಾಳು ಕಾಪು ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂದರಾ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಪುವಿನಲ್ಲಿರುವ ಅವರ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದು, ದಂಪತಿ ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಸಕ್ರೀಯರಾಗಿದ್ದರು. ಲೀಲಾಧರ ಶೆಟ್ಟಿಯವರು ರಂಗಕರ್ಮಿಯಾಗಿದ್ದು, ರಂಗತರಂಗ ನಾಟಕ ತಂಡದವನ್ನು ಬೆಳೆಸಿದ್ದರು. ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸಹ ಸ್ಪರ್ಧಿಸಿದ್ದರು. ದಂಪತಿ ಕೌಟುಂಬಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. […]

75 ರ ವೃದ್ಧನಿಗೆ ಸಹಾಯ ಹಸ್ತ ಚಾಚಿದ “ಆಪತ್ಭಾಂಧವ ಡಾ. ಸಿ.ರಾಮಾಚಾರಿ”

Friday, May 14th, 2021
ramachari

ಶಿವಮೊಗ್ಗ : ಕಡೂರಿನಲ್ಲಿ ಕೃಷ್ಣಪ್ಪ ಎಂಬ 75 ವರ್ಷದ ವೃದ್ಧರೋರ್ವರಿಗೆ, ಕಡೂರ ಪೊಲೀಸರ ಸಹಾಯದಿಂದ ಹಿರಿಯ ಸಮಾಜ ಸೇವಕ ಮತ್ತು ಭದ್ರಾವತಿಯ ಸಂಜೀವಿನಿ ವೃದ್ಧಾಶ್ರಮ ಸಂಸ್ಥಾಪಕ ಡಾ.ಸಿ.ರಾಮಾಚಾರಿ ತಮ್ಮ ಆಶ್ರಮದಲ್ಲಿ ಆಶ್ರಯ ನೀಡಿದ್ದಾರೆ. ರಸ್ತೆಯಲ್ಲಿ ಅನಾಥರಾಗಿ ಓಡಾಡುತ್ತಿದ್ದ ವೃದ್ಧ ಕೃಷ್ಣಪ್ಪನನ್ನು ಕಡೂರು ಪೊಲೀಸ್‌ ಇಲಾಖೆಯ ಸಿಬ್ಬಂದಿ ಲತಾ ಎಂಬುವರು ನೋಡಿ ಇವರ ಕಷ್ಟವನ್ನು ನೋಡಲಾಗದೆ ಕೂಡಲೇ ಡಾ.ಸಿ.ರಾಮಾಚಾರಿ ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಪಂದಿಸಿದ ಡಾ.ಸಿ.ರಾಮಾಚಾರಿಯವರು ಸ್ಥಳಕ್ಕೆ ಆಗಮಿಸಿ ವೃದ್ಧನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಿಪಿಐ […]

ಮುಂಬಯಿ ಸಂಸದ ಮತ್ತು ಸಮಾಜ ಸೇವಕರಿಂದ ಮಂಗಳೂರಿಗೆ ಉಚಿತ ಬಸ್ ಸೇವೆ

Thursday, May 14th, 2020
harish Shetty

ಮುಂಬಯಿ : ಮೂರು ದಿನಗಳ ಹಿಂದೆ ಮುಂಬಯಿಯಿಂದ ಮಂಗಳೂರಿಗೆ ಬಸ್ಸು ಸೇವೆಯನ್ನು ಪ್ರಾರಂಭಿಸಿ ಅತೀ ಅಗತ್ಯವಿರುವ ತುಳು ಕನ್ನಡಿಗರಿಗೆ ಸಹಕರಿಸಿ ಯಶಸ್ವಿಯಾಗಿದ್ದು ಇದೀಗ ಪುನ: ಉತ್ತರ ಮುಂಬಯಿಯ ಜನಪ್ರಿಯ ಸಂಸದ ಗೋಪಾಲ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಮಾಜ ಸೇವಕ ಇತ್ತೀಚೆಗೆ ಉತ್ತರ ಮುಂಬಯಿ ಬಿ.ಜೆ.ಪಿ. ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ಎರ್ಮಾಳ್ ಹರೀಶ್ ಶೆಟ್ಟಿಯವರ ಪ್ರಯತ್ನದಿಂದ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ನೂತನ ಯೋಜನೆ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. […]

ರೈಲೇ ಹೋರಾಟಗಾರ-ಸಮಾಜ ಸೇವಕ ಶಶಿಕುಮಾರ್ ಸಿ.ಕುಂದರ್ ಮೂಲ್ಕಿ ನಿಧನ

Tuesday, March 10th, 2015
kundar

ಮುಂಬಯಿ : ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸಿ. ಕುಂದರ್ (68.) ಅವರು ಸೋಮವಾರ ರಾತ್ರಿ ತಮ್ಮ ಗೋರೆಗಾಂವ್ ಪೂರ್ವದ ಸ್ವನಿವಾಸದಲ್ಲಿ ನಿಧನ ಹೊಂದಿದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ನಿವಾಸಿಯಾಗಿದ್ದ ಅವರು ಕಳೆದ ಹಲವು ವರ್ಷಗಳಿಂದ ರೈಲ್ವೇ ಯಾತ್ರಿ ಸಂಘದಲ್ಲಿ ಸಕ್ರೀಯರಾಗಿ ಸೇವಾ ನಿರತರಾಗಿದ್ದು, ಕೇಂದ್ರಿಯ ಅಂದಿನ ರೈಲ್ವೇ ಮಂತ್ರಿ ಮಮತಾ ಬಾನರ್ಜಿ ಅವರಿಂದ ಒಳಗೊಂಡು ಪ್ರಸಕ್ತ ರೈಲ್ವೇ ಮಂತ್ರಿ ಸುರೇಶ್ ಪ್ರಭು […]