ಶಿವಮೊಗ್ಗ : ಕಡೂರಿನಲ್ಲಿ ಕೃಷ್ಣಪ್ಪ ಎಂಬ 75 ವರ್ಷದ ವೃದ್ಧರೋರ್ವರಿಗೆ, ಕಡೂರ ಪೊಲೀಸರ ಸಹಾಯದಿಂದ ಹಿರಿಯ ಸಮಾಜ ಸೇವಕ ಮತ್ತು ಭದ್ರಾವತಿಯ ಸಂಜೀವಿನಿ ವೃದ್ಧಾಶ್ರಮ ಸಂಸ್ಥಾಪಕ ಡಾ.ಸಿ.ರಾಮಾಚಾರಿ ತಮ್ಮ ಆಶ್ರಮದಲ್ಲಿ ಆಶ್ರಯ ನೀಡಿದ್ದಾರೆ.
ರಸ್ತೆಯಲ್ಲಿ ಅನಾಥರಾಗಿ ಓಡಾಡುತ್ತಿದ್ದ ವೃದ್ಧ ಕೃಷ್ಣಪ್ಪನನ್ನು ಕಡೂರು ಪೊಲೀಸ್ ಇಲಾಖೆಯ ಸಿಬ್ಬಂದಿ ಲತಾ ಎಂಬುವರು ನೋಡಿ ಇವರ ಕಷ್ಟವನ್ನು ನೋಡಲಾಗದೆ ಕೂಡಲೇ ಡಾ.ಸಿ.ರಾಮಾಚಾರಿ ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣ ಸ್ಪಂದಿಸಿದ ಡಾ.ಸಿ.ರಾಮಾಚಾರಿಯವರು ಸ್ಥಳಕ್ಕೆ ಆಗಮಿಸಿ ವೃದ್ಧನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಿಪಿಐ ರಮ್ಯಾ ಅವರ ಸಹಕಾರ ಮತ್ತು ಸಹಾಯದಿಂದ ಕಡೂರಿನಿಂದ 50 ಕೀ.ಮಿ. ದೂರವಿರುವ ಭದ್ರಾವತಿಯಲ್ಲಿರುವ ತಮ್ಮ ಸಂಜೀವಿನಿ ವೃದ್ಧಾಶ್ರಮದಲ್ಲಿ ಆಶ್ರಯ ನೀಡಿದರು.
ವೃದ್ಧ ಕೃಷ್ಣಪ್ಪನನ್ನು ಈ ಕೊರೋನಾ ಮಹಾಮಾರಿಯ ಕಷ್ಟದ ಸಮಯದಲ್ಲೂ ಕೂಡ ಸಹಾಯ ಮಾಡಿ ಮಾನವೀಯತೆ ಮೆರೆದಿರುವ ಪೊಲೀಸ್ ಸಿಬ್ಬಂದಿ ಮತ್ತು ಡಾ.ಸಿ.ರಾಮಾಚಾರಿಯವರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.
ತಮ್ಮ ಹೆಸರಿನಲ್ಲಿಯೇ “ರಾಮ”ನನ್ನು ಇಟ್ಟುಕೊಂಡಿರುವ ಹೃದಯವಂತ, ಇನ್ನು ತಮ್ಮ ಹೆಸರಿನಲ್ಲಿಯೇ ಆಚಾರವಂತ ಎಂಬ ಪದಪುಂಜಗಳನ್ನು ಇಟ್ಟುಕೊಂಡು ತಮ್ಮ ಕೈಲಾದ ಸಮಾಜ ಸೇವೆ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ ನಮ್ಮ ಡಾ. ಸಿ. ರಾಮಾಚಾರಿ.
ಡಾ.ಸಿ.ರಾಮಾಚಾರಿ ಕಡೂರಿನ ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಉದ್ಯೋಗಿ. ಜೊತೆಗೆ ಸಮಾಜ ಸೇವೆಗೆಂದು ತಮ್ಮ ಸ್ನೇಹ ಬಳಗದವರಾದ, ವಿ.ನಾಗರಾಜ್, ಸವಿತಾ ಮತ್ತಿತರರ ಸಹಾಯದಿಂದ ಸಂಜೀವಿನ ಎಂಬ ಹೆಸರಿನ ವೃದ್ಧಾಶ್ರಮವನ್ನು ಭದ್ರಾವತಿಯ ಬಾನಂದೂರಿನಲ್ಲಿ ಸ್ಥಾಪಿಸಿದ್ದಾರೆ.
ಇಲ್ಲಿ ಸಾಕಷ್ಟು ಸಂಖ್ಯೆ ಬಡ ವೃದ್ಧರಿಗೆ ಆಶ್ರಯ ನೀಡಿದ್ದಾರೆ. ಇವರ ಸಹಾಯ ಗುಣಕ್ಕೆ ಎಲ್ಲರ ಹರಕೆ ಹಾರೈಕೆ ನಿರಂತರವಾಗಿರಲಿ ಎಂಬುದು ನಮ್ಮೆಲ್ಲರ ಆಸೆ.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English